ಮಂಗಳೂರು : ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಆಯೋಜಿಸಲಾಗಿರುವ ರಮಾನಾಥ ರೈ ನೇತೃತ್ವದ ಸಾಮರಸ್ಯ ನಡಿಗೆಗೆ ಆರಂಭದಲ್ಲಿಯೇ ವಿಘ್ನ ಉಂಟಾಗಿದೆ. ಸಾಮರಸ್ಯಕ್ಕಾಗಿ ಹೆಸರಿನಲ್ಲಿ ಕೈಗೊಳ್ಳಲಾಗಿರುವ ಯಾತ್ರೆಯಿಂದ ಸಾಮರಸ್ಯ ಕೆಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಯಾತ್ರೆ ಆರಂಭಕ್ಕೂ ಮುನ್ನ ಎರಡು ಕೆಎಸ್​ಆರ್​ಟಿಸಿ ಬಸ್​ಗಳಿಗೆ ಕಲ್ಲು ತೂರಾಟ ನಡೆದಿದೆ.

RELATED ARTICLES  ಕಾರು ಅಪಘಾತ. ಗಾಂಜಾ ಪತ್ತೆ. ಓರ್ವ ಸೆರೆ.! ಕಾರಿನಲ್ಲಿದ್ದರೆ ಪ್ರಜ್ವಲ್, ದಿಗಂತ್?

ಬಿಸಿ ರೋಡ್ ಸಮೀಪದ ಪರಂಗಿಪೇಟೆಯಲ್ಲಿ ಮೈಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್​ಗಳಿಗೆ ಕಲ್ಲು ಎಸೆಯಲಾಗಿದೆ.

ಇನ್ನು ಕಾರ್ಯಕ್ರಮಕ್ಕೆ 500 ಕ್ಕಿಂತ ಹೆಚ್ಚು ಪೊಲೀಸ್ ಹಾಗೂ 300 KSRP ಪೊಲೀಸರ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸಾಮರಸ್ಯ ನಡಿಗೆಯಲ್ಲಿ ನಟ ಪ್ರಕಾಶ್​ ರಾಜ್​ ಸೇರಿದಂತೆ ಎಡಪಕ್ಷದ ನಾಯಕರು ಭಾಗವಹಿಸಲಿದ್ದಾರೆ.

RELATED ARTICLES  ಶಿಕಾರಿಪುರದಲ್ಲಿ ತೀವ್ರ ಸಂಚಲನ ಮೂಡಿಸಿದ ನರಬಲಿ ಪ್ರಕರಣ.!

ಫರಂಗಿಪೇಟೆಯಿಂದ ಮಾಣಿಯವರೆಗೆ ಕಾಲ್ನಡಿಗೆ ಸಾಮರಸ್ಯ ಜಾಥಾ ನಡೆಯಲಿದೆ.