ಬೆಂಗಳೂರು : ರಾಷ್ಟ್ರ ಭಕ್ತರ ಹೆಣಗಳ ಮೇಲೆ ಸಿಎಂ ರಾಜಕಾರಣ ಮಾಡುತ್ತಿದ್ದಾರೆ. ಮುಸಲ್ಮಾನ ಗೂಂಡಾಗಳಿಗೆ ಪೊಲೀಸರಿಂ ದಲೇ ಕುಮ್ಮಕ್ಕು ಸಿಗುತ್ತಿದೆ. ಹಿಂದೂ ಕಾರ್ಯಕರ್ತರ ಕೊಲೆ ಮಾಡಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿಸುತ್ತಿದೆ. ಪರೇಶ್ ಮೆಸ್ತಾ ಕೊಲೆ ಸೇರಿದಂತೆ ರಾಜ್ಯದಲ್ಲಿ 20 ಹಿಂದೂ ಯುವಕರನ್ನು ಕೊಲೆ ಮಾಡಲಾಗಿದೆ. ಹೀಗಾಂಥ ಒಂದೇ ಸಮನೆ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿರಸಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ದೂರು ಕೊಡಲು ಬಿಜೆಪಿ ಮುಖಂಡರು, ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ಕೊಟ್ಟು, ಸರ್ಕಾರದ ವಿರುದ್ಧ ಹರಿಹಾಯ್ದರು

ರಾಜ್ಯದಲ್ಲಿ 20 ಕ್ಕೂ ಹೆಚ್ಚು ಹಿಂದೂ ಯುವಕರ ಕೊಲೆಯಾಗಿದೆ. ಪೊಲೀಸರು ರೌಡಿಗಳ ಜೊತೆ ಸೇರಿಕೊಂಡು, ಹಿಂದೂ ಯುವಕ ರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡಿದರು.

RELATED ARTICLES  ಮಾಲೂರು ಗೋಶಾಲೆಯಲ್ಲಿ "ಗೋವಿನೊಂದಿಗೆ ಸಂಕ್ರಾಂತಿ" ಹಬ್ಬ

ಇದೇ ವೇಳೆ ಪರೇಶ್ ಮೆಸ್ತಾ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ತನಿಖೆ ನಡೆಸಬೇಕು ಎಂದರು.

ಇನ್ನು ಇದೇ ವೇಳೆ ಮಾಜಿ ಗೃಹಸಚಿವ ಆರ್.ಆಶೋಕ್ ಮಾತನಾಡಿ, ಪರೇಶ್ ಮೆಸ್ತಾ ಕೊಲೆ ಪ್ರಕರಣವನ್ನು, ವೈದ್ಯಕೀಯ ವರದಿಯಲ್ಲಿ ಇದೊಂದು ಮಾಮೂಲಿ‌ ಸಾವು ಎಂಬಂತೆ ಬಿಂಬಿಸಲಾಗುತ್ತಿದೆ. ಎಸ್ ,ಪಿ ತಮ್ಮದೇ ಶೈಲಿಯಲ್ಲಿ ಲೀಡಿಂಗ್ ಪ್ರಶ್ನೆ ಕೊಟ್ಟಿದ್ದರ ಉದ್ದೇಶವೇನು ? ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಕೂಡ ಇದೇ ಮಾಡಿದ್ದರು, ಬಿಜೆಪಿಯ ನಾಯಕರಿಗೆ ಹೆಣ ಕಂಡ ಕೂಡಲೆ ಕನಸು ಬೀಳುತ್ತೆ ಅಂತಾರೆ ಕಾಂಗ್ರೆಸ್ ನಾಯಕರು. ನಿಮಗೇನು ಕನಸು ಬಿದ್ದಿತ್ತಾ ? ವೈದ್ಯಕೀಯ ವರದಿಗೆ ಅದರದ್ದೇ ಮಾದರಿ ಇವೆ. ಅದನ್ನು ಬಿಟ್ಟು ವರದಿ ನೀಡಲಾಗಿದೆ. ವೈದ್ಯಕೀಯ ವರದಿಯಲ್ಲಿ ಯಾಕೆ ಯುವಕ ಸತ್ತ ಎಂಬುದನ್ನು ಹೇಳಿಲ್ಲ. ಇದರಲ್ಲಿ ಯಾವುದೋ ಒಂದು ಕೋಮನ್ನು ಮುಚ್ಚಿಡುವ ಕಾರಣಕ್ಕೆ ಈ ರೀತಿ ಮಾಡುತ್ತಿದೆ. ಇದು ಸರ್ಕಾರದ ಕೊಲೆಗಳ ಭಾಗ್ಯ. ಆ ಕಾರಣಕ್ಕೇ ನ್ಯಾಯಕ್ಕಾಗಿ ನಾವು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಕೇಂದ್ರ ಗೃಹ ಸಚಿವರನ್ನೂ ನಾವು ಭೇಟಿ ಮಾಡ್ತೇವೆ. ಸಂಸತ್ ನಲ್ಲೂ ಈ ವಿಷಯವನ್ನು ಎತ್ತಿ ಎನ್ಐಎ ತನಿಖೆಗೆ ಆಗ್ರಹಿಸುತ್ತೇವೆ ಎಂದು ಹೇಳಿದರು.

RELATED ARTICLES  ಬೆಂಗಳೂರು ಏರ್ ಶೋ ವೇಳೆ ಎರಡು ತರಬೇತಿ ವಿಮಾನಗಳ ಡಿಕ್ಕಿ : ಓರ್ವ ಪೈಲಟ್ ಸಾವು.