ಯಾದಗಿರಿ : ಕೆಲವು ಮುಸ್ಲಿ ಸಂಘಟನೆಯಿಂದ, ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಸಚಿವ ರಾಮನಾಥ ರೈ ಅವರ ಸಾಮರಸ್ಯದ ನಡೆಗೆ ಹಾಸ್ಯಸ್ವದವಾಗುತ್ತದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಲೇವಡಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಡಬಾರದನ್ನ ಮಾಡಿ, ಈಗ ನಾಟಕವಾಡಲು ಕಾಂಗ್ರೆಸ್ ನವರು ಸಾಮರಸ್ಯದ ಯಾತ್ರೆ ನಡೆಸುತ್ತಿದ್ದಾರೆ, ಚುನಾವಣೆ ಸಮೀಪ ಬರುತ್ತಿದ್ದಂತೆ ಈ ರೀತಿ ನಾಟಕ ಮಾಡುವುದು ಸಹಜ ಎಂದ ಅವರು, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಬೆಂಬಲಿಸುವ ಈ ಸರ್ಕಾರದ ವಿರುದ್ಧ ಹೋರಾಟ ಮುಂದು ವರೆಸುತ್ತೇವೆ. ಕಾಂಗ್ರೆಸ್ ನವರು ಕ್ರಿಮಿನಲ್ ಬುದ್ದಿಯುಳ್ಳವರು ಎಂದು ಆರೋಪ ಮಾಡಿದರು.

RELATED ARTICLES  ಪಂಜಾಬ್‌ ಮುಖ್ಯಮಂತ್ರಿ ಮನೆಯೆದುರು ಬಾಂಬ್..?

ಹೊನ್ನಾವರ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಟಿ ರವಿ ಎಫ್ಎಸ್ಎಲ್ ವರದಿ ಬಗ್ಗೆ ಅನುಮಾನ ಮೂಡಿದೆ. ತಮಗೆ ಬೇಕಾಗದ ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ನೇಮಿಸಿಕೊಂಡಿದ್ದಾರೆ ಎಂದರು.

RELATED ARTICLES  ಪ್ರವಾಹದಿಂದ ಸಂಕಷ್ಟದಲ್ಲಿರುವ ಕೊಡಗು ಜಿಲ್ಲೆಯ ಜನರಿಗೆ ನೆರವಾದ ನಟ ಪ್ರಕಾಶ್ ರೈ.