ನವದೆಹಲಿ: ಕಂಬಂಳಕ್ಕೆ ತಡೆ ನೀಡುವಂತೆ ಪೇಟಾ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಕಂಬಳ ವಿರೋಧಿಸಿ ಸಲ್ಲಿಸಲಾದ ಅರ್ಜಿಯನ್ನು ಪ್ರತ್ಯೇಕ ವಿಚಾರಣೆ ನಡೆಸಲು ಚಿಂತಿಸಿದ್ದು, ಜಲ್ಲಿಕಟ್ಟುನೊಂದಿಗೆ ವಿಚಾರಣೆ ನಡೆಸದಿರಲು ಸುಪ್ರೀಂಕೋರ್ಟ್ ಚಿಂತನೆ ಮಾಡಿದೆ. ಜಲಿಕಟ್ಟುಗೆ ಅವಕಾಶ ನೀಡಿ ಕಾನೂನು ರಚಿಸಿರುವ ಹಿನ್ನೆಲೆ, ಆ ಬಗ್ಗೆ ಕಾನೂನು ವ್ಯಾಪ್ತಿಯ ಬಗ್ಗೆ ಚರ್ಚಿಸಲಿರುವ ಸುಪ್ರೀಂಕೋರ್ಟ್, ಸಾಂವಿಧಾನಿಕ ಪೀಠದ ಮೂಲಕ ಜಲಿಕಟ್ಟು ವಿಚಾರಣೆ ನಡೆಸಲು ತಿರ್ಮಾನಿಸಿದೆ.
ಸದ್ಯ ಕಂಬಳಕ್ಕೆ ಸುಗ್ರೀವಾಜ್ಞೆ ಮೂಲಕ ಅವಕಾಶ ನೀಡಲಾಗಿದೆ, ಕಂಬಳ ಇನ್ನು ಕಾನೂನಾಗಿ ಜಾರಿಯಾಗಿಲ್ಲ, ಇದಕ್ಕಾಗಿ ಮಂಡಿಸಲಾಗಿರುವ ಮಸೂದೆ ಸದ್ಯ ರಾಷ್ಟ್ರಪತಿ ಅಂಗಳದಲ್ಲಿರುವ ಹಿನ್ನೆಲೆ, ಕಂಬಳ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.