ಏಯ್ ತೆಂಗಿನಕಾಯಿ ಹೆಚ್ಚಿಗೆ ತಿನ್ಬಾರ್ದಪ್ಪಾ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತಂತೆ, ಇದನ್ನು ತಿನ್ನಬಾರದಪ್ಪಾ ಅದರಿಂದಲೂ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತೆ, ಇತ್ಯಾದಿ ಮಾತುಗಳನ್ನು ಹೇಳೋದನ್ನು ನೀವೆಲ್ಲ ಕೇಳಿಯೇ ಇರ್ತೀರಿ. ಈ ಮಾತುಗಳು ಸರಿಯೋ ತಪ್ಪೋ ಆ ವಿಚಾರ ಬೇರೆ, ಆದರೆ ಈ ಎಲ್ಲಾ ಮಾತುಗಳು ಕೊಲೆಸ್ಟ್ರಾಲ್ ಅನ್ನುವುದರ ಬಗ್ಗೆ ಒಂದಿಷ್ಟು ಕುತೂಹಲವನ್ನಂತೂ ಮೂಡಿಸುತ್ತವೆ. ಹೀಗಾಗಿ, ಈ ಕೊಲೆಸ್ಚ್ರಾಲ್ ಅಂದ್ರೇನು? ಒಳ್ಳೆ ಕೊಲೆಸ್ಚ್ರಾಲ್ ಯಾವುದು? ಒಳ್ಳೆಯದಲ್ಲದೇ ಇರೋ ಕೊಲೆಸ್ಟ್ರಾಲ್ ಕೂಡ ಇದೆಯಾ? ಇತ್ಯಾದಿ ವಿಚಾರಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಕೊಲೆಸ್ಟ್ರಾಲ್ ಅನ್ನುವುದನ್ನು, ನಮ್ಮ ರಕ್ತದ ಒಳಗೆ ಸಂಚರಿಸುವಂಥ ಮೇಣದ ರೀತಿಯ ಒಂದು ವಸ್ತು ಎನ್ನಬಹುದು. ನಮ್ಮ ದೇಹ, ಹೊಸ ಜೀವಕೋಶಗಳನ್ನು ಸೃಷ್ಟಿಸುವುದಕ್ಕೆ ಈ ಕೊಲೆಸ್ಟ್ರಾಲ್ ಅನ್ನು ಬಳಸಿಕೊಳ್ಳುತ್ತದೆ. ನೀವು ಸೇವಿಸುವ ಆಹಾರದಿಂದ ನಿಮ್ಮ ಲಿವರ್ ಅಂದ್ರೆ ಯಕೃತ್ತು ಈ ಕೊಲೆಸ್ಟ್ರಾಲ್ ಅನ್ನು ತಯಾರಿಸುತ್ತದೆ.

RELATED ARTICLES  ಕೂದಲು ಉದುರುವ ಸಮಸ್ಯೆಯೆ ಹಾಗಾದರೆ ಇನ್ನೂ ಹೇದರಬೇಕಿಲ್ಲ !

ನಮ್ಮ ದೇಹದಲ್ಲಿ ಎಲ್‌ಡಿಎಲ್ (ಲೊ ಡೆನ್ಸಿಸಿಟಿ ಲಿಪೋಪ್ರೋಟೀನ್), ಹೆಚ್‌ಡಿಎಲ್(ಹೈ ಡೆನ್ಸಿಸಿಟಿ ಲಿಪೋಪ್ರೋಟೀನ್) ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸೆರೈಡ್‌ಗಳು ಎಂಬ ಮೂರು ವಿಧಗಳಿವೆ. ಎಲ್‌ಡಿಎಲ್ ಕೊಲೆಸ್ಟ್ರಾಲನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಮತ್ತು ಹೆಚ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಒಳ್ಳೆಯ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಆದರೆ, ನಮ್ಮ ದೇಹದಲ್ಲಿ ಎರಡೂ ವಿಧದ ಕೊಲೆಸ್ಚ್ರಾಲ್ ಮತ್ತು ಟ್ರೈಗ್ಲಿಸೆರೈಡ್‌ ಗಳನ್ನು ಆರೋಗ್ಯಕರ ಮಟ್ಟದಲ್ಲಿ ಹೊಂದಿರುವುದು ಮುಖ್ಯವಾಗುತ್ತದೆ. ಒಂದು ಸರಳ ರಕ್ತಪರೀಕ್ಷೆ ಮೂಲಕ ನಿಮ್ಮ ದೇಹದಲ್ಲಿ ಕೊಲೆಸ್ಚ್ರಾಲ್ ಮಟ್ಟ ಎಷ್ಟಿದೆ ಅನ್ನುವುದನ್ನು ಪತ್ತೆಹಚ್ಚಬಹುದು. ಆದರೆ, ಒಟ್ಟಾರೆ, ಕೊಲೆಸ್ಟ್ರಾಲ್ ಕೌಂಟ್‌ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವುದರ ಜೊತೆಗೆ, ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸಿದರೆ, ಎಲ್ಲರೀತಿಯ ಕೊಲೆಸ್ಚ್ರಾಲ್ ಎಷ್ಟಿದೆ ಅನ್ನುವುದು ಗೊತ್ತಾಗಲಿದೆ.

ಮನುಷ್ಯರ ದೇಹದಲ್ಲಿ ಇರಬೇಕಾದ ವಿವಿಧ ರೀತಿಯ ಕೊಲೆಸ್ಟ್ರಾಲ್ ಪ್ರಮಾಣ ಈ ರೀತಿ ಇದೆ. ಟೋಟಲ್ ಅಂದರೆ ಒಟ್ಟಾರೆ ಕೊಲೆಸ್ಟ್ರಾಲ್‌ ಪ್ರಮಾಣ- ಪ್ರತಿ ಡೆಸಿ ಲೀಟರ್‌ಗೆ 200 ಮಿಲಿಗ್ರಾಮ್ ಇರುವುದು ಒಳ್ಳೆಯದು. 200-239 ಮಿಲಿಗ್ರಾಮ್ ತುಸು ಹೆಚ್ಚಾಯಿತು, 240 ಮೀರಿದರೆ ಅದು ವಿಪರೀತ.

RELATED ARTICLES  ಅಶ್ವತ್ಥ ಮರದ ಎಲೆಗಳಲ್ಲಿದೆ ಹಲವು ರೋಗ ನಿವಾರಕ ಶಕ್ತಿ! ಅದು ಏನು ಗೊತ್ತಾ?

ಎಲ್‌ ಡಿ ಎಲ್ ಕೊಲೆಸ್ಟ್ರಾಲ್ ಪ್ರತಿ ಡೆಸಿ ಲೀಟರ್‌ಗೆ -100 ಮಿಲಿಗ್ರಾಮ್‌ಗಿಂತ ಕಡಿಮೆ ಇರುವುದು ಹೃದಯ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು.

100-129ರ ಪ್ರಮಾಣ ಸರಿಯಾದ ಮಟ್ಟ ಅನ್ನಬಹುದು. 130-159 ಹೆಚ್ಚಾಯಿತು. 160ಕ್ಕಿಂತ ಹೆಚ್ಚಿರುವುದು ಒಳ್ಳೆಯದಲ್ಲ.

ನಮ್ಮ ದೇಹದಲ್ಲಿ ಹೆಚ್‌ ಡಿ ಎಲ್ ಕೊಲೆಸ್ಟ್ರಾಲ್ ಪ್ರಮಾಣ, ಗಂಡಸರಲ್ಲಿ 40ಕ್ಕಿಂತ ಮತ್ತು ಹೆಂಗಸರಲ್ಲಿ 50ಕ್ಕಿಂತ ಕಡಿಮೆ ಆಗಲೇಬಾರದು. 50ರಿಂದ 60 ಮಿಲಿಗ್ರಾಮ್ ಇರುವುದು ಪರವಾಗಿಲ್ಲ ಅನ್ನಿಸಿಕೊಂಡರೆ, ಪ್ರತಿ ಡೆಸಿ ಲೀಟರ್‌ಗೆ 60 ಮಿಲಿಗ್ರಾಮ್ ಗಿಂತ ಹೆಚ್ಚಿರುವುದು ಉತ್ತಮ ಎನ್ನಿಸಿಕೊಳ್ಳುತ್ತದೆ. ಇನ್ನು ಟ್ರೈಗ್ಲಿಸರೈಡ್‌ ಗಳ ವಿಚಾರಕ್ಕೆ ಬರುವುದಾದರೆ, 150ಕ್ಕಿಂತ ಕಡಿಮೆ ಒಳ್ಳೆಯದು, 150-199 ಸ್ವಲ್ಪ ಹೆಚ್ಚು, 200-499 ಅಧಿಕವಾದರೆ, 500ಕ್ಕಿಂತ ಹೆಚ್ಚು ಅಪಾಯಕಾರಿ.