ದೇಶದ ಟೆಲಿಕಾಂ ವಲಯದಲ್ಲಿ 4ಜಿ ಕ್ರಾಂತಿಯನ್ನೇ ಹುಟ್ಟುಹಾಕಿತು ರಿಲಯನ್ಸ್ ಮಾಲಿಕತ್ವದ ಜಿಯೋ! ದೇಶದಲ್ಲಿ ಮೊದಲ ಬಾರಿಗೆ 4ಜಿ ವೋಲ್ಟ್ ಸೇವೆಯನ್ನು ಪ್ರಾರಂಭಿಸಿ ತನ್ನ ಅತ್ಯಾಕರ್ಷಕ ಡೇಟಾ ಯೋಜನೆಗಳು ಮತ್ತು ಉಚಿತ ಕರೆಗಳ ಮೂಲಕ ಜನಸಾಮಾನ್ಯರೂ 4ಜಿ ಉಪಯೋಗಿಸಲು ಅವಕಾಶ ಮಾಡಿಕೊಟ್ಟಿತು. ಅಷ್ಟೇ ಅಲ್ಲದೆ, ಟೆಲಿಕಾಂ ವಲಯದ ಇತರ ಸಂಸ್ಥೆಗಳನ್ನು ನಡುಗುವಂತೆ ಮಾಡಿತು.

ಇದರಿಂದ ಟೆಲಿಕಾಂ ವಲಯದಲ್ಲಿ ಇಂಥ ಸಾಧ್ಯತೆಗಳೂ ಆಗುತ್ತವೆ ಎಂದು ತೋರಿಸಿಕೊಟ್ಟು, ಇತರ ಸಂಸ್ಥೆಗಳು ತಮ್ಮ ದರಗಳಲ್ಲಿ ಕಡಿತ ಮಾಡಿ ಜನಸಾಮಾನ್ಯರಿಗೆ ಲಾಭವಾಗುವಂತೆ ಮಾಡಿತು. 2017 ರಲ್ಲಿ ಟೆಲಿಕಾಂ ಸಂಸ್ಥೆಗಳ ನಡುವಣ ದೊಡ್ಡ ದರ ಸಮರವೇ ಪ್ರಾರಂಭವಾಗಿತ್ತು. 4ಜಿ ಡೇಟಾ ಜನರಿಗೆ ಸುಲಭವಾಗಿ ಸಿಗುವಂತೆ ಆಯಿತು, ಮತ್ತು ಜನರು ಈಗ ಅದಕ್ಕೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ನಿಮಗೆ ನೆನಪಿರಬಹುದು ಪ್ರಾರಂಭದಲ್ಲಿ ಬಹಳ ಕಡಿಮೆ ಬೆಲೆಗೆ ಬರುತ್ತಿದ್ದ ಜಿಯೋ ಆಫರ್ ಗಳಲ್ಲಿ ದೀಪಾವಳಿ ನಂತರ ಇದ್ದಕ್ಕಿದ್ದಂತೆ ಬೆಲೆ ಏರಿಕೆಯಾಗಲು ಪ್ರಾರಂಭವಾಯಿತು.

RELATED ARTICLES  ಭಟ್ಕಳ ಬಿ.ಎಸ್.ಎನ್.ಡಿ ಪಿ ಘಟಕದಿಂದ ಪಿ.ಯು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

ಆದರೆ ಈಗ ಹೊಸದಾಗಿ ಓಪನ್ ಸಿಗ್ನಲ್ ವೆಬ್ ಸೈಟ್ ನಲ್ಲಿ ಬಂದಿರುವ ವರದಿಯಂತೆ 2018 ರಲ್ಲಿ ದೇಶಾದ್ಯಂತ 4ಜಿ ಸೇವೆಯನ್ನು ವಿಸ್ತರಿಸಲು ಟೆಲಿಕಾಂ ಸಂಸ್ಥೆಗಳು ಯೋಜನೆ ರೂಪಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಜಿಯೋ ಹೊಸವರ್ಷದ ಆರಂಭದಲ್ಲಿಯೇ ತನ್ನ ಯೋಜನೆಗಳ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಲು ಸಿದ್ಧತೆ ನಡೆಸಿದೆ. 2018ರಲ್ಲಿ 4ಜಿ ಬಳಕೆದಾರರ ಸಂಖ್ಯೆ ಇನ್ನಷ್ಟು ಏರುವ ನಿರೀಕ್ಷೆಯಿದ್ದು, ಹಾಗೆಯೇ 4ಜಿ ವೇಗವೂ ಮತ್ತಷ್ಟು ಏರಿಕೆಯಾಗಲಿದೆ. ಹೀಗೆ ಗುಣಮಟ್ಟದ ಡೇಟಾ ಸೇವೆ ಬಳಕೆದಾರರಿಗೆ ಒದಗಿಸುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಬಿಸಿಯೂ ತಟ್ಟಲಿದೆ ಎಂದು ಅಂದಾಜಿಸಲಾಗಿದೆ.

RELATED ARTICLES  ಪಟಗಾರ್ ಎಕ್ಸಪ್ರೆಸ್ ಆಶ್ರಯದಲ್ಲಿ ಯಶಸ್ವಿಯಾದ ಕ್ರಿಕೆಟ್ ಪಂದ್ಯಾವಳಿ : ಶುಭ ಹಾರೈಸಿದ ರವಿಕುಮಾರ ಶೆಟ್ಟಿ.

‘ ಜಿಯೋ 2017ರಲ್ಲಿ ಸಾಧ್ಯವಾದಷ್ಟೂ ಕಡಿಮೆ ಬೆಲೆಗೆ ಡೇಟಾ ಮತ್ತು ಉಚಿತವಾಗಿ ಧ್ವನಿಕರೆಗಳನ್ನೂ ಗ್ರಾಹಕರಿಗೆ ಒದಗಿಸಿತ್ತು. ಆದರೆ 3 ತಿಂಗಳಿಗೊಮ್ಮೆ ನಿಧಾನವಾಗಿ ತನ್ನ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿತ್ತು. ಈಗ 2018ರಲ್ಲಿ ಮತ್ತಷ್ಟು ಬೆಲೆ ಏರಿಕೆ ಮಾಡುವ ಯೋಜನೆಯಿದ್ದು, 4ಜಿ ಡೇಟಾ ಗೆ ಅವಲಂಬಿತರಾಗಿರುವ ಬಳಕೆದಾರರಿಗೆ ಇದು ಸವಾಲಾಗಿ ಪರಿಣಮಿಸಲಿದೆ’ ಎಂದು ಓಪನ್ ಸಿಗ್ನಲ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಯೋದ ಕಡಿಮೆ ಬೆಲೆಯ ಸೇವೆಯಿಂದ ಅದನ್ನೇ ಪಾಲಿಸಲು ಹೊರಟ ಇತರ ಟೆಲಿಕಾಂ ಸಂಸ್ಥೆಗಳು ನಷ್ಟ ಅನುಭವಿಸಿದ್ದವು. ಈಗ ಅದರಿಂದ ಹೊರಬರಲು ಎಲ್ಲಾ ಸಂಸ್ಥೆಗಳು ತಮ್ಮ ಆಫರ್ ಗಳಲ್ಲಿ ಏರಿಕೆ ಮಾಡಲಿವೆ ಎಂದು ವರದಿಯಾಗಿದೆ.