ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಯಶೋಧರ್ ನಾಯ್ಕ್ ಬಿಜೆಪಿ ಗೆ ಸೇರ್ಪಡೆಯಾಗಲಿದ್ದಾರೆ : ಕೆ.ಜಿ ನಾಯ್ಕ್

ಕಾರವಾರ : ಕುಮಟಾದ ಯಶೋಧರ್ ನಾಯ್ಕ್ ಅವರು ಬಿಜೆಪಿ ಸೇರಲು ಉತ್ಸುಕರಾಗಿದ್ದು ಜಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸಮ್ಮುಖ ದಲ್ಲಿ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಬಿಜಿಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ್ ಹೇಳಿದರು.

RELATED ARTICLES  ನ. 27 ಕ್ಕೆ ಪಂಚಪಾವನ ಕಥಾ ಯಕ್ಷನೃತ್ಯ ರೂಪಕ

ಪ್ರಧಾನ ಮಂತ್ರಿ ಮೋದಿಯವರ ಮುಂದಾಳತ್ವದಲ್ಲಿ ಬಿಜೆಪಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪಕ್ಷ ಸೇರಬಯಸುವ ಆಕಾಂಕ್ಷಿಗಳ ಪಟ್ಟಿಯು ದಿನೇ ದಿನೇ ಬೆಳೆಯುತ್ತಿದೆ. ಅದೇರೀತಿ ಯಶೋಧರ್ ನಾಯ್ಕ್ ಅವರು ಪಕ್ಷ ಸೇರುವ ಇಂಗಿತ ವ್ಯಕ್ತ ಪಡಿಸಿದ್ದಾರೆ ಎಂದರು.

RELATED ARTICLES  ರೂಪಾಲಿ ನಾಯ್ಕ ಬೆಂಬಲಕ್ಕೆ ನಿಂತು ಸ್ಟಾರ್ ಪ್ರಚಾರಕರಾಗಿದ್ದಾರೆ ನ್ಯಾಯವಾದಿ ನಾಗರಾಜ ನಾಯಕ

ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬರುವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವದು ಹೊರತು ಯಾರಿಗೂ ಟಿಕೇಟ್ ನೀಡುವುದಾಗಿ ಭರವಸೆ ನೀಡಿಲ್ಲ ಎಂದರು. ಕ್ಷೇತ್ರದಲ್ಲಿ ಮೂರು ಸುತ್ತಿನ ಸಮೀಕ್ಷೆ ನಡೆಸಿ ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷದ ಹಿರಿಯರು ಟಿಕೇಟ್ ನೀಡಲಿದ್ದಾರೆ ಎಂದರು.