ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಳೆದ ಮೂರು ದಿನದ ಹಿಂದೆ ಕೋಮು ಗಲಬೆಯ ವೇಳೆಯಲ್ಲಿ ಸಾವನ್ನಪ್ಪಿದ ಹಿಂದು ಯುವಕ ಪರೇಶ್ ಮೇಸ್ತಾ ಸಾವಿನ ಮರಣೋತ್ತರ ಪರೀಕ್ಷೆಯ ವರದಿಯನ್ನ ಪೋಲಿಸ್ ಇಲಾಖೆ ಹಾಗು ಜಿಲ್ಲಾಡಳಿತ ವ್ಶೆದ್ಯರಿಂದ ಪ್ರಶ್ನೋತ್ತರದ ಮೂಲಕ ತಿಳಿದುಕೊಂಡಿದ್ದು ಇದೊಂದು ಸಹಜ ಸಾವು ಎಂದು ಹೇಳಲು ಹೊರಟಿದೆ.ಆದ್ರೆ ಇದೊಂದು ವ್ಯವಸ್ಥಿತ ಕೊಲೆ ಎಂದು ಪರೇಶ್ ತಂದೆ ಕಮಲಾಕರ್ ಆರೋಪಿಸಿದ್ದಾರೆ.

RELATED ARTICLES  ಸರಿಪಡಿಸಲು ತಂದ ರೆಡ್ಮಿ ಫೋನ್ ಬ್ಲಾಸ್ಟ! ಹೇಗಿದೆ ನೋಡಿ ಅಂಗಡಿಯ ಸಿಸಿ ಟಿ.ವಿ ವಿಡಿಯೋ!

ಅವರು ಹೊನ್ನಾವರದಲ್ಲಿ ತಮ್ಮ ಸಂಭಂದಿಕರೊಂದಿಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ರು. ಪರೇಶ್ ಮ್ರತ ದೇಹವನ್ನ ಗುರುತು ಪತ್ತೆ ಹಚ್ಚಲು ತಾನು ಮೊದಲು ನೋಡಿದ್ದೆ ಆ ಸಮಯದಲ್ಲಿ ಮೈ ಮೇಲೆ ಕಲೆ ಇದ್ದಿದ್ದನ್ನು ತಾನು ನೋಡಿದ್ದೆನೆ, ಹಾಗೂ ತಮ್ಮವರು ನೊಡಿದ್ದಾರೆ. ಆದ್ರೆ ಪೋಲಿಸ್ ಇಲಾಖೆ ಹಾಗು ಜಿಲ್ಲಾಡಳಿತ ಇದೊಂದು ಸಹಜ ಸಾವು ಎಂದು ಹೇಳಲು ಹೊರಟಿರೋದು ಖಂಡನೀಯ ಎಂದರು.

ಪರಿಹಾರ ತಿರಸ್ಕಾರ

RELATED ARTICLES  ಕೆಸರಿನಲ್ಲಿ ಸಿಲುಕಿ ಹಾಕಿಕೊಂಡ ಕಾರು : ಮಳೆಯಿಂದಾಗಿ ಅವಾಂತರ

ಹಾಗೂ ಸಾಂತ್ವಾನ ಹೇಳಲು ಬಂದ ಸಚಿವ ದೇಶಪಾಂಡೆಯವರು ತಮಗೆ ಪರಿಹಾರವಾಗಿ 1ಲಕ್ಷ ರೂ ಕೊಟ್ಟಿದ್ರು ಆದ್ರೆ ಅದನ್ನ ಇವತ್ತು ತಿರಸ್ಕರಿಸುತ್ತೇನೆ ನನಗೆ ಸಹಾಯಧನ ಬೇಡ ದುಡಿದು ತಿನ್ನುವ ಶಕ್ತಿ ಇದೆ, ಆದರೆ ನನ್ನ ಮಗನ ಸಾವಿಗೆ ನ್ಯಾಯ ಬೇಕಾಗಿದೆ ಎಂದು ಹೇಳಿದ್ರು. ಜೊತೆಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸರಕಾರ ಹಾಗು ಪೋಲಿಸರು ದ್ವಂದ್ವ ಹೇಳಿಕೆ ನೀಡಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ರು.