ಬೆಂಗಳೂರು: ಜೈಲು ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಇಬ್ಬರು ಕೈದಿಗಳು ಸ್ನಾತಕೋತ್ತರ ಪದವಿಯೊಂದಿಗೆ ಹೆಮ್ಮೆಯಿಂದ ಹೊರಬಂದಿದ್ದಾರೆ.
2004ರಲ್ಲಿ ದೊಡ್ಡಬಳ್ಳಾಪುರ ಮತ್ತು ಬಾಗೆಪಲ್ಲಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿದ್ದ 37 ವರ್ಷದ ಯಲ್ಲಪ್ಪ ಮತ್ತು ಎಂಎಸ್ ನರಸಿಂಹ ರೆಡ್ಡಿ ಎಂಬುವರು ಜೈಲಿನಲ್ಲಿದ್ದುಕೊಂಡೆ ಮೂರು ಸ್ನಾತಕೋತ್ತರ ಪದವಿ ಪಡೆದು ಇದೀಗ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬರಲಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES  ‘ಇನ್ಫೋಸಿಸ್‌ ವಿಜ್ಞಾನ‘ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟ.

ಜೈಲಿಗೆ ಸೇರುವ ಮುನ್ನವೇ ನಾನು ಪದವೀಧರನಾಗಿದ್ದೆ. ನಂತರ ನಾನು ಪತ್ರಿಕೋಧ್ಯಮ, ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದೇನೆ. ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ನನಗೆ ಖೇದವಿದೆ. ಅದನ್ನೆಲ್ಲಾ ಈಗ ಮರೆತಿದ್ದೇನೆ. ಮೊದಲಿಗೆ ಜೈಲಿಗೆ ಬಂದಾಗ ನಾನು ಜೈಲಿನಲ್ಲಿದ್ದ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದೆ ನಂತರ ಅದೇ ಅಭ್ಯಾಸವಾಗಿ ಬಿಟ್ಟಿತು. ನಂತರ ಅಧಿಕಾರಿಗಳ ಸಹಾಯದಿಂದಾಗಿ ನನಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ಸಿಕ್ಕಿತು. ಇದೀಗ ನಾನು ಮೂರು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದೇನೆ ಎಂದು ನರಸಿಂಹ ರೆಡ್ಡಿ ಹೇಳಿದ್ದಾರೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 10-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರೈಸಿದ ನನಗೆ ಕೆಎಸ್ಆರ್ಟಿಸಿಯಲ್ಲಿ ಕಂಡೆಕ್ಟರ್ ಆಗಿ ಕೆಲಸ ಸಿಕ್ಕಿತ್ತು. ಕೆಲಸದಲ್ಲಿದ್ದಾಗಲೇ ನಾನು ಅಪರಾಧ ಮಾಡಿದ್ದರಿಂದ ನನಗೆ 14 ವರ್ಷಗಳ ಕಾಲ ಜೀವಾವಧಿ ಶಿಕ್ಷೆಗೆ ಗುರಿಯಾದೆ ಎಂದು ಹೇಳಿದ್ದಾರೆ.