ಹೊಸದಿಲ್ಲಿ: ದಕ್ಷಿಣ ಕೊರಿಯಾ ಮೂಲದ ಆಟೊಮೊಬೈಲ್ ಸಂಸ್ಥೆ ಕಿಯಾ ಮೋಟಾರ್ಸ್ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ದತೆ ನಡೆಸಿದೆ.
ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಭಾರತದಲ್ಲಿಯೇ ಕಾರ್ ಉತ್ಪಾದನೆಯನ್ನು ಪ್ರಾರಂಭಿಸಲು ನಿರ್ಧರಿಸಿರುವ ಕಿಯಾ, ಆಂಧ್ರಪ್ರದೇಶದ ಅನಂತಪುರದಲ್ಲಿ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ,
2019ರ ವೇಲೆಗೆ ವಾರ್ಷಿಕ 3 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ಘಟಕ ಸ್ಥಾಪನೆಗೆ ಅಂದಾಜು 7,000 ಕೋಟಿ ರೂ.ಗಳನ್ನು ಕಂಪನಿ ಹೂಡಿಕೆ ಮಶಾಡಲು ಉದ್ದೇಶಿಸಿದೆ.
ದೇಶದಲ್ಲಿ ನೂತನ ಕಾರ್ ಉತ್ಪಾದನಾ ಘಟಕ ಪ್ರಾರಂಭಿಸಲು ಮತ್ತು ಮಾರಾಟ ವ್ಯವಸ್ಥೆಗಾಗಿ ಈಗಾಗಲೇ ಡೀಲರ್ಸ್ ಗಳೊಂದಿಗೆ ಮಾತುಕತೆ ನಡೆದಿದೆ. ಇಲ್ಲಿನ ಡೀಲರ್ಸ್ ಗಳಿಂದ ಉತ್ತಮ ಪ್ರತಿಕ್ರಿಯೆ ದೊರೆರ್ತಿದೆ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಯಾಂಗ್ ಎಸ್. ಕಿಮ್ ತಿಳಿಸಿದ್ದಾರೆ.
ಕಿಯಾ ಪ್ರವೇಶದೊಂದಿಗೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಇನ್ನಷ್ಟು ಸ್ಪರ್ಧೆ ಉಂಟಾಗಲಿದೆ.