ಕಾರವಾರ : ವಾಟ್ಸ್ಆಪ್ ಮತ್ತು ಫೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಅಪ್ಡೇಟ್ಸ್ ಪೋಸ್ಟ್ ಮಾಡಿದವರ ವಿರುದ್ಧ ತಾಲೂಕು ದಂಡಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯಿಂದ ಜಿಲ್ಲಾದ್ಯಂತ ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆಫ್, ಫೇಸ್ಬುಕ್, ಟ್ವಿಟ್ಟರ್ಗಳಲ್ಲಿ ಯಾವುದೇ ಪ್ರಚೋದನಾಕಾರಿ ಮಾಹಿತಿ ರವಾನೆ ಮಾಡದಂತೆ ಇತ್ತೀಚೆಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಆದರೂ ಅದನ್ನು ಉಲ್ಲಂಘಿಸಿ ಕೆಲವರು ವಾಟ್ಸ್ಆಪ್ ಹಾಗೂ ಫೇಸ್ಬುಕ್ಗಳಲ್ಲಿ ಪ್ರಚೋದನಾಕಾರಿ ಅಪ್ಡೇಟ್ಸ್ ಪೋಸ್ಟ್ಮಾಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಿಂದ 13 ಹಾಗೂ ಪೊಲೀಸ್ ಇಲಾಖೆಯಿಂದ 15 ಪ್ರಕರಣಗಳನ್ನು ದಾಖಲಿಸಲಾಗಿದೆ.

RELATED ARTICLES  ಕರೋನಾ ಕಿರಿಕಿರಿ : ಶಿರಸಿ ಜಾತ್ರಾ ಪೇಟೆಗೆ ಬಿತ್ತು ಬ್ರೇಕ್..!

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಕಾರವಾರ ತಾಲೂಕು ದಂಡಾಧಿಕಾರಿಗಳು 7 ಪ್ರಕರಣಗಳನ್ನು ದಾಖಲಿಸಿದರೆ ಹೊನ್ನಾವರ ತಾಲೂಕು ದಂಡಾಧಿಕಾರಿ 6 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದಲ್ಲದೆ, ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕವಾಗಿ 15 ಪ್ರಕರಣಗಳನ್ನು ಈವರೆಗೆ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಫೇಸ್ಬುಕ್ ಪೋಸ್ಟ್ ಅಥವಾ ಕಾಮೆಂಟ್ ಮಾಡಿದವರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು ಪೊಲೀಸ್ ಇಲಾಖೆ ಅಂತಹವರ ಮೇಲೆ ತೀವ್ರನಿಗಾ ಇರಿಸಿದೆ.

RELATED ARTICLES  ಮುಂಗಾರು ತಂದ ಅವಾಂತರ: ಹೊನ್ನಾವರದ ಹಲವೆಡೆ ಮನೆ ಕೊಟ್ಟಿಗೆಗಳಿಗೆ ಹಾನಿ.