ಕುಮಟಾ; ಬೆಳಕು ಗ್ರಾಮೀಣಾಭಿವೃಧ್ದಿ ಟ್ರಸ್ಟ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಹೀರೆಗುತ್ತಿಯ ಎಣ್ಣೆಮಡಿ ಗ್ರಾಮದಲ್ಲಿ 10 ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಕಿಟ್‍ನೊಂದಿಗೆ ಟ್ರಸ್ಟ್ ವತಿಯಿಂದ ಲೈಟರ್‍ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬೆಳಕು ಗ್ರಾಮೀಣಾಭಿವೃಧ್ಧಿ ಟ್ರಸ್ಟ್ ಅಧ್ಯಕ್ಷರು ಹಾಗೂ ಬಿ.ಜೆ.ಪಿ. ಮುಖಂಡರಾಗಿರುವ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ- ಪ್ರಧಾನಿ ನರೇಂದ್ರ ಮೋದಿಯವರು ಕಡು ಬಡವರು ಕೂಡ ಎಲ್.ಪಿ.ಜಿ. ಬಳಸಬೇಕು ಆ ಮೂಲಕ ತಾಯಂದಿರ ಸ್ವಾಸ್ಥ್ಯ ಕಾಪಾಡುವ ಹಾಗೂ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಉಜ್ವಲದಂತಹ ಜನಪರ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಸೌಲಭ್ಯವನ್ನು ಬಡವರ ಮನೆ ಬಾಗಿಲಿಗೆ ತಲುಪಿಸಿ ಆ ಮೂಲಕ ಕೇಂದ್ರದ ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಫಲಾನುಭವಿಗಳು ಅಲೆದಾಟವಿಲ್ಲದೆ, ಹಣ, ಸಮಯ ವ್ಯಯಿಸದೇ ಸುಲಭವಾಗಿ ಗ್ಯಾಸ್ ಪಡೆದುಕೊಳ್ಳಬೇಕೆಂಬ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯದಿಂದ ವಂಚಿತರಾಗಬಾರದೆಂಬ ಆಕಾಂಕ್ಷೆ ಹೊಂದಿದ್ದು ಯಾರಿಗಾದರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ತೊಂದರೆ ಉಂಟಾಗುತ್ತಿದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದರು ಹಾಗೂ ಮುಂದಿನ ದಿನಗಳಲ್ಲೂ ಕೂಡ ತಾವೂ ಇದೇ ರೀತಿ ಸಹಕಾರ ನೀಡುವುದಾಗಿ ನುಡಿದರು.
ರಾಮು ಕೆಂಚನ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರದ ಉಜ್ವಲ ಯೋಜನೆಯ ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು ಕಡು ಬಡವರಿಗೂ ಇದರಿಂದ ಹೆಚ್ಚಿನ ಅನೂಕೂಲತೆ ಉಂಟಾಗಲಿದೆ. ಇಂತಹ ಜನಪರ ಯೋಜನೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ನಾಗರಾಜ ನಾಯಕ ತೊರ್ಕೆ ಅವರು ತಮ್ಮ ಟ್ರಸ್ಟ್ ಮೂಲಕ ಶ್ರಮಿಸುತ್ತಿದ್ದು ಫಲಾನುಭವಿಗಳಿಗೆ ಇನ್ನು ಹೆಚ್ಚಿನ ಅನುಕೂಲತೆ ಒದಗಿಸುವ ನಿಟ್ಟಿನಲ್ಲಿ ಟ್ರಸ್ಟ್ ವತಿಯಿಂದ ಲೈಟರನ್ನು ಸಹ ಉಚಿತವಾಗಿ ವಿತರಿಸುತ್ತಿರುವುದು ಶ್ಲಾಘನೀಯವಾಗಿದ್ದು ಇದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

RELATED ARTICLES  ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ : ಶೃದ್ಧಾಂಜಲಿ ಸಲ್ಲಿಕೆ.

ಫಲಾನುಭವಿಗಳಾದ ಹೊನ್ನಮ್ಮ ಲಿಂಗ ಹಳ್ಳೇರ, ಸುಮಿತ್ರಾ ಪಿ. ಹಳ್ಳೇರ, ಹೊನ್ನಪ್ಪ ಎಲ್. ಹಳ್ಳೇರ, ಸುಮನಾ ಕೆ. ಹಳ್ಳೇರ, ಸವಿತಾ ಎಸ್. ಹಳ್ಳೇರ, ಗುಲಾಬಿ ವಿ. ಹಳ್ಳೇರ, ಕಲ್ಯಾಣಿ ಎನ್. ಹಳ್ಳೇರ, ನಾಗರತ್ನಾ ಬಿ. ಹಳ್ಳೇರ, ನಾಗಮ್ಮ ಎಮ್. ಹಳ್ಳೇರ, ಹೊನ್ನಮ್ಮ ಎಸ್ ಹಳ್ಳೇರ ಇವರುಗಳು ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಂಡು ಸಂತೋಷ ವ್ಯಕ್ತಪಡಿಸಿದರು.

RELATED ARTICLES  ರೋಟರಿ ಏನ್ಸ ನಿಂದ ಚೆಸ್ ತರಬೇತಿ ಶಿಬಿರ ಆಯೋಜನೆ

ಈ ಸಂದರ್ಭದಲ್ಲಿ ವೆಂಕಟ್ರಮಣ ಕವರಿ, ಅರುಣ ಕವರಿ, ದೇವಿದಾಸ ನಾಯಕ, ಸಣ್ಣಪ್ಪ ಆರ್. ನಾಯಕ, ತಿಮ್ಮಣ್ಣ ಹಳ್ಳೇರ, ಗೋಪಾಲ ಹಳ್ಳೇರ, ಗುಲಬಿ ಹಳ್ಳೇರ ಮುಂತಾದವರು ಉಪಸ್ಥಿತರಿದ್ದರು.