ಕುಮಟಾ : ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಹಾಗೂ ಷಡಕ್ಷರಿ ಪ್ರಶಸ್ಥಿ ಪ್ರದಾನ ಕಾರ್ಯಕ್ರಮವು ಕೂಜಳ್ಳಿಯ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ಜರುಗಿತು. ಷಡಕ್ಷರಿ ರಾಷ್ಟ್ರೀಯ ಪ್ರಶಸ್ಥಿಯನ್ನು ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಪಂ.ಎಸ್.ಎಮ್.ಭಟ್ಟ ಕಟ್ಟಿಗೆ ಅವರಿಗೆ ಪ್ರದಾನಮಾಡಲಾಯಿತು.

ಪ್ರಶಸ್ಥಿಯನ್ನು ಸ್ವೀಕರಿಸಿದ ಅವರು ಮಾತನಾಡಿ, ಹಿಂದೂಸ್ಥಾನಿ ಸಂಗೀತವು ಜಿಲ್ಲೆಯಲ್ಲಿ ಬೆಳೆಯಲು ಹಲವಾರು ಜನರು ಶ್ರಮಿಸಿದ್ದು, ಗವಾಯಿಗಳು ಇದರಲ್ಲಿ ಪ್ರಮುಖರಾಗಿದ್ದಾರೆ. ಇಂತಹ ಶ್ರೇಷ್ಠ ಪ್ರಶಸ್ಥಿ ನನಗೆ ಪ್ರದಾನ ಮಾತ್ತಿರುವುದು ಸಂತಸ ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹೊನ್ನಾವರ ಜಿ.ಯು.ಭಟ್ಟ ಮಾತನಾಡಿ,ಬದುಕಿನಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದೂಸ್ಥಾನಿ ಸಂಗೀತ ಪರಂಪರೆ ಜಿಲ್ಲೆಯಲ್ಲಿ ಬೆಳೆದುಕೊಂಡು ಬಂದಿದೆ. ಜಿಲ್ಲೆಯಾದ್ಯಂತ ಗವಾಯಿಗಳು ನೀಡಿದ ಸಂಗೀತ ಸೇವೆ ಅನನ್ಯವಾಗಿದೆ. ಕಲಾವಿದರಿಗೆ ಸರ್ಕಾರ ಹಾಗೂ ಸಮಾಜ ಬದ್ರತೆಯನ್ನು ಒದಗಿಸುವಂತಾಗಬೇಕು ಎಂದರು.

RELATED ARTICLES  ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

ಕಾರ್ಯಕ್ರಮವನ್ನು ಸ್ವರ ಸಂಗಮ ಅಧ್ಯಕ್ಷ ಸುಬ್ರಾಯ ಜಿ.ಭಟ್ಟ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗಾವಾಯಿ ಅಕಾಡೆಮಿ ಅಧ್ಯಕ್ಷ ವಸಂತ ರಾವ್ ವಹಿಸಿ ಮಾತನಾಡಿದರು. ಸ್ವರಸಂಗಮದ ಕಾರ್ಯಾಧ್ಯಕ್ಷ ವಿನಾಯಕ ಹೆಗಡೆಕಟ್ಟೆ, ಗೌರೀಶ ಯಾಜಿ ಮತ್ತಿತರರು ಇದ್ದರು. ಪತ್ರಕರ್ತ ರಘುಪತಿ ಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಗವಾಯಿಗಳು ಸಂಗೀತದಲ್ಲಿ ಅಪಾರ ವಿದ್ವತ್ ಹೊಂದಿದ್ದರು. ಅವರ ವಿದ್ಯಾರ್ಥಿಗಳೇ ಅವರಿಗೆ ಸಂಪತ್ತಾಗಿದ್ದರು. ಇವರ ಸ್ಮರಣಾರ್ಥ ಷಡಕ್ಷರಿ ಪ್ರಶಸ್ಥಿಯನ್ನು ಸಂಗೀತ ಕ್ಷೇತ್ರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಪ್ರದಾನಮಾಡಲಾಗುತ್ತಿದೆ ಎಂದರು. ಶಿಕ್ಷಕ ಟಿ.ಎನ್.ಭಟ್ಟ ಕಾರ್ಯಕ್ರಮ ನಿರೂಪಿಸಿದರು.

ಸ್ವರನಮನ : ಪಂ.ಚಂದ್ರಶೇಖರ ವಜೆ ( ಗಾಯನ ), ಬಿ.ಎಸ್.ಮಠ್ ಮತ್ತು ಅಕ್ಕಮಹಾದೇವಿ ಧಾರವಾಡ (ವಯೊಲಿನ್ ಜುಗಲ್ಬಂಧಿ), ಪಂ.ಸುಧೀರ್ ನಾಯಕ್ ಮುಂಬೈ (ಹಾರ್ಮೊನಿಯಂ), ಪಂ.ಅರ್ನಬ್ ಚಟರ್ಜಿ ಕಲ್ಕತ್ತಾ(ಗಾಯನ), ವಿದುಶಿ ಶಾರದಾ ಭಟ್ಟ ಮೈಸೂರು(ಗಾಯನ), ಸಮೀರ್ ರಾವ್ ಮೈಸೂರು(ಬಾನ್ಸುರಿ), ರೇಷ್ಮಾ ಭಟ್ಟ ಮತ್ತು ರಮ್ಯಾ ಭಟ್ಟ(ಗಾಯನ ಜುಗಲ್ಬಂಧಿ), ವಿನಾಯಕ ನಾಯ್ಕ ಬೆಂಗಳೂರು (ಗಾಯನ) ಉತ್ತಮವಾಗಿ ಮೂಡಿಬಂತು.
ಸಹಕಲಾವಿದರಾಗಿ ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ರಾಜಾರಾಮ ಹೆಬ್ಬಾರ ಕರ್ಕಿ, ಎನ್.ಜಿ.ಅನಂತಮೂರ್ತಿ ಗುಣವಂತೆ, ಎಮ್.ವಿ.ಶೇಷಾದ್ರಿ ಅಯ್ಯಂಗಾರ್ ಮಂಕಿ, ಪರಮೇಶ್ವರ ಹೆಗಡೆ ಮೈಸೂರು, ಗುರುರಾಜ ಹೆಗಡೆ ಆಡುಕಳ ತಬಲಾ ಸಾಥ್‍ನೀಡಲಿದ್ದಾರೆ. ವಾಸುದೇವ ತಾಮಣ್ಕರ್ ಬೆಳ್ತಂಗಡಿ, ಗೌರೀಶ ಯಾಜಿ ಕೂಜಳ್ಳಿ, ಮಾರುತಿ ನಾಯ್ಕ ಇಡಗುಂಜಿ ಸಂವಾದಿನಿ ಸಾಥ್ ನೀಡಿದರು.

RELATED ARTICLES  ಗ್ರಾಮದಲ್ಲಿ ಹುಲಿ ಹಾಗೂ ಚಿರತೆ ಓಡಾಟ : ಭಯದಲ್ಲಿ ಜನತೆ.