ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು ಎಂಬ ಕವಿವಾಣಿಯೇ ಇದೆ. ಇಷ್ಟಲ್ಲಾ ಇದ್ದೂ ಕರ್ನಾಟಕದಲ್ಲಿಯೇ ಕನ್ನಡಕ್ಕೆ ಸರಿಯಾದ ಅಸ್ತಿತ್ವ ಇಲ್ಲದೇ ಇರುವುದು ಖೇದನೀಯ!

RELATED ARTICLES  ಶಿವಮೊಗ್ಗ: ಕೋಟೆ ಮಾರಿಕಾಂಬಾ ಜಾತ್ರೆ ಆರಂಭ

ಆದರೆ ಇದೀಗ ಕೇವಲ ಇಂಗ್ಲಿಷ್ ನಲ್ಲಿ ಮಾತ್ರ ದೊರೆಯುತ್ತಿದ್ದ ಎಟಿಎಂ ಚೀಟಿಗಳಲ್ಲಿ ಮುದ್ದಾದ ಕನ್ನಡದ ಅಕ್ಷರಗಳು ಕುಣಿದಾಡುತ್ತಿವೆ. ಸದ್ಯಕ್ಕೆ ಕೆನರಾ ಬ್ಯಾಂಕ್ ನ ಎಟಿಎಂ ನಲ್ಲಿ ಮಾತ್ರ ಅನುಷ್ಠಾನಗೊಂಡಿರುವ ಕನ್ನಡ ಕರ್ನಾಟಕದ ಇತರ ಬ್ಯಾಂಕ್ ಗಳ ಎಟಿಎಂ ಚೀಟಿಗಳಲ್ಲಿ ಶೀಘ್ರದಲ್ಲಿ ಬರಲಿವೆ. ಈ ಎಲ್ಲಾ ಬೆಳವಣಿಗಗಳಿಗೆ ಕಾರಣ ಕರ್ನಾಟಕ ಗ್ರಾಹಕರ ಕೂಟದ ಹೋರಾಟ.

RELATED ARTICLES  ಗೋಪರಿವಾರ ಮುಳ್ಳೇರಿಯಾ ಮಂಡಲ ಗುಂಪೆ ವಲಯ‌ ಅಮೃತಪಥ ಕಾರ್ಯಕ್ರಮ

ಎಟಿಎಂ ಚೀಟಿಯಲ್ಲಿ ಸ್ಪಷ್ಟವಾಗಿ ಬರೆದಿರುವ ಕನ್ನಡ ಲಿಪಿಯನ್ನು ನೋಡುವುದೇ ಕಣ್ಣಿಗೆ, ಮನಸ್ಸಿಗೆ ಮುದ ಕೊಡುತ್ತದೆ.