ರಾಯಚೂರು : ಸಿಎಂ ಸಿದ್ದರಾಮಯ್ಯನ ಮಾತು ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ. ಅವರೊಬ್ಬ ಅಯೋಗ್ಯ ಮುಖ್ಯಮಂತ್ರಿ, ಹೋದ ಕಡೆಯಲೆಲ್ಲಾ ಬಿಎಸ್ ವೈ ಜೈಲಿಗೆ ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ವಕೀಲರಾದ ಅವರಿಗೆ ಸತ್ಯ ಗೊತ್ತಿಲ್ಲವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಮಾಡಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಒಂದು ತಿಂಗಳು ಜೈಲಿನಲ್ಲಿ ಇದ್ದರು. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾ ರಕ್ಕೆ ಬಂದರೆ ಅವರ ಮೇಲಿರುವ ಆರೋಪಗಳನ್ನು ತನಿಖೆ ನಡೆಸಿದರೆ ಅವರ ಸ್ಥಿತಿ ಏನಾಗುತ್ತದೆ ಎಂದು ಸಿಎಂ ಗೆ ಪ್ರಶ್ನೆ ಮಾಡಿದ್ದಾರೆ.ಕಾಂಗ್ರೆಸ್ ಗೆದ್ದ ಕ್ಷೇತ್ರಗಳಿಗೆ ಮಾತ್ರ ಸಿಎಂ ಹೋಗುತ್ತಿದ್ದಾರೆ. ಅಧ್ಯಕ್ಷ ಪರಮೇಶ್ವರ ಅವರನ್ನು ಸೋತ ‌ಕ್ಷೇತ್ರಗಳಿಗ ಕಳಿಹಿಸುತ್ತಿದ್ದಾರೆ ಎಂದು ಕಾಲೆಳೆದರು.

RELATED ARTICLES  ಕಾಂಗ್ರೆಸ್ ನವರು ಕ್ರಿಮಿನಲ್ ಬುದ್ಧಿಯುಳ್ಳವರು : ಸಿಟಿ ರವಿ

ಇದೇ ವೇಳೆ ಜೆಡಿಎಸ್ ಪಕ್ಷದ ಮುಖಂಡರ ಮೇಲೆ ಹರಿಹಾಯ್ದ ಬಿಎಸ್ ವೈ, ತಾನು ಸಿಎಂ ಆಗಿ ಒಂದೇ ವಾರಕ್ಕೆ ಅಪ್ಪ – ಮಕ್ಕಳು ಕೈಕೊಟ್ಟರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ಪಷ್ಟ ಬಹುಮತದಿಂದ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು. ಪರಿವರ್ತನಾ ಯಾತ್ರೆ ಬಳಿಕ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ, ತಲೆತಿರುಕ ಸಿದ್ದರಾಮಯ್ಯ ಎಲ್ಲ ನಂದೇ ಎನ್ನುತ್ತಾನೆ. ಅಯೋಗ್ಯ , ಬೇಜವಾಬ್ದಾರಿ, ನಾಚಿಕೆಯಿಲ್ಲದ ಸಿಎಂ ಎಂದು ಏಕವಚನದಿಂದ ವಾಗ್ದಾಳಿ ಮಾಡಿದರು.

RELATED ARTICLES  ಗ್ರಾಹಕರೇ ಔಷಧಿಗಳ ಖರೀದಿಯಲ್ಲಿ ಎಚ್ಚರಿಕೆ..! :15 ಕಂಪನಿಗಳ ಔಷಧಗಳು ನಿಷೇಧ.