ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಗ್ನಿಶಾಮಕ ವಿಭಾಗದಲ್ಲಿ ಖಾಲಿ ಇರುವ 170 ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ: ಕಿರಿಯ ಸಹಾಯಕ (Jr Assistant)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2017

ವಿದ್ಯಾರ್ಹತೆ : 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕಾನಿಕಲ್/ ಆಟೋ ಮೊಬೈಲ್/ ಅಗ್ನಿಶಾಮಕ ಡಿಪ್ಲೋಮಾ ಪಡೆದಿರಬೇಕು. ಅಥವಾ ನಿಯಮಿತ ಶಿಕ್ಷಣದಲ್ಲಿ ಪಿಯುಸಿ ಉತ್ತೀರ್ಣರಾಗಿರಬೇಕು.

RELATED ARTICLES  ಬಳ್ಳಾರಿ ಡಿಸಿಸಿ ಬ್ಯಾಂಕ್: 62 ಹುದ್ದೆಗಳ ನೇಮಕಾತಿ!

ವಯೋಮಿತಿ : ಕನಿಷ್ಠ 18 ಗರಿಷ್ಠ 30 ವರ್ಷ. ಮೀಸಲಾತಿ ಪಡೆಯುವವರಿಗೆ ಸರ್ಕಾರಿ ನಿಯಮದ ಅನ್ವಯ ಸಡಿಲತೆ ಸಿಗಲಿದೆ.

ಅರ್ಹತೆ : ಮಾನ್ಯತೆ ಇರುವ ಚಾಲನಾ ಪರವಾನಾಗಿ (ಹೆವಿ, ಮೀಡಿಯಮ್, ಲೈಟ್) ಹೊಂದಿರಬೇಕು.

ಆಯ್ಕೆ ವಿಧಾನ : ಚಾಲನಾ ಪರೀಕ್ಷೆ, ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರೀಯೆ ನಡೆಯಲಿದೆ.

RELATED ARTICLES  ಉಚಿತ ವೈದ್ಯಕೀಯ  ಶಿಬಿರ ಭಾನುವಾರ

ಶುಲ್ಕ ; ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 1000 ರೂ ಶುಲ್ಕ ನಿಗದಿ ಪಡಿಸಲಾಗಿದ್ದು, ಮಹಿಳೆ, ಪ.ಜಾ, ಪ.ಪಂ, ದ ವರ್ಗದವರಿಗೆ ವಿನಾಯಿತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿಯನ್ನು ಸಲ್ಲಿಸಲು ವೆಬ್ ಸೈಟ್ ವಿಳಾಸ https://www.aai.aero/en/careers/recruitment ಭೇಟಿ ನೀಡಿ.