ಕುಮಟಾ: ಡಿಸೆಂಬರ 16 ಮತ್ತು 17 ರಂದು ಕುಮಟಾದ ಶ್ರೀ ಮಹಾಸತಿ ಸಭಾ ಭವನದಲ್ಲಿ ಕಾರವಾರ ಮತ್ತು ಶಿರಸಿ ಅಂಚೆ ವಿಭಾಗದಿಂದ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಮುರ್ಡೇಶ್ವರ, ಮಂಜುಗುಣಿ ದೇವಸ್ಥಾನ ಮತ್ತು ಶಿರಸಿ ರಾಘವೇಂದ್ರ ಮಠದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುವುದು.

ಅಂಚೆ ಚೀಟಿ ಸಂಗ್ರಹಕಾರರು ಅಂಚೆ ಚೀಟಿ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲ್ಲಿಚ್ಚಿಸುವರು ತಮ್ಮ ಹೆಸರನ್ನು ಸಮೀಪದ ಅಂಚೆ ಕಚೇರಿಯಲ್ಲಿ ನೋಂದಾಯಿಸಬೇಕು. ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಅಂಚೆ ಚೀಟಿಗಳನ್ನು ವಿಕ್ಷಿಸಲು ಮುಕ್ತ ಅವಕಾಶವಿರುತ್ತದೆ ಮತ್ತು ‘ನನ್ನ ಅಂಚೆ ಚೀಟಿ ( ತಮ್ಮದೇ ಭಾವಚಿತ್ರವಿರುವ ಅಂಚೆ ಚೀಟಿ)’ ಎಂಬ ವಿಶೇಷ ಸೌಲಭ್ಯವನ್ನು ಪಡೆಯಲು ಆಸಕ್ತರು ತಮ್ಮ ಭಾವಚಿತ್ರದೊಂದಿಗೆ ಪ್ರದರ್ಶನ ಸ್ಥಳಕ್ಕೆ ಆಗಮಿಸಬೇಕು.

RELATED ARTICLES  ನೀರಿನ ಬವಣೆ ತಪ್ಪಿಸಲು ಶಾಸಕರ ಹೊಸ ಪ್ರಯತ್ನ: ಯಶಸ್ವಿಯಾಯ್ತು ದಿನಕರ ಶೆಟ್ಟಿಯವರ ಯೋಚನೆ.

ಇದಲ್ಲದೆ ಪ್ರದರ್ಶನದಲ್ಲಿ ಅಂಚೆ ಚೀಟಿ ಮತ್ತು ಅಂಚೆ ಚೀಟಿಯ ಉತ್ಪನ್ನಗಳ ಮಾರಾಟ, ಅಂಚೆ ಚೀಟಿ ಸಂಗ್ರಹಣ ಖಾತೆ ತೆರೆಯುವಿಕೆ, ಪೋಸ್ಟ ಕ್ರಾಸಿಂಗ್ ಮತ್ತು ಅಂಚೆ ವಿಮಾ ಯೋಜನೆಗಳನ್ನು ತೆರೆಯಲು ಅವಕಾಶವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.

RELATED ARTICLES  ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಹೆಚ್ಚಿನ ಮಾಹಿತಿಗಾಗಿ ಅಂಚೆ ಅಧೀಕ್ಷಕರ ಕಾರ್ಯಾಲಯ ಕಾರವಾರ ಹಾಗೂ ಶಿರಸಿ ವಿಭಾಗ, ದೂರವಾಣಿ ಸಂಖ್ಯೆ 08382-221431, 221435, 08384-236231 ಸಂಪರ್ಕಿಸಲು ಕಾರವಾರ ಅಂಚೆ ವಿಭಾಗದ ಅಧೀಕ್ಷಕರು ಕೋರಿದ್ದಾರೆ.