ಶಿರಸಿ : ಕಳೆದ ಮಂಗಳವಾರ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಂಧಿಗಳಾಗಿದ್ದ 62 ಜನರಲ್ಲಿ 6೦ ಮಂದಿಗೆ ಮಧ್ಯಂತರ ಜಾಮೀನು ದೊರೆತಿದೆ. ಉಳಿದ ಇಬ್ಬರಿಗೆ ತಾಂತ್ರಿಕ ದೋಷಗಳಿಂದ ಜಾಮೀನು ದೊರೆತಿಲ್ಲ ಎಂದು ಪ್ರತಿಭಟನಾಕಾರರ ಪರ ವಾದ ನಡೆಸಿದ ವಕೀಲ ಸದಾನಂದ ಭಟ್ ತಿಳಿಸಿದರು.

ಹಿಂದು ಯುವಕ ಪರೇಶ್ ಮೇಸ್ತ ಅನುಮಾನಾಸ್ಪದ ಸಾವು ಖಂಡಿಸಿ ಹಿಂದು ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 62 ಕಾರ್ಯಕರ್ತರನ್ನು ಪೊಲೀಸರು 307 ಕಾಯ್ದೆಯಡಿಯಲ್ಲಿ ಬಂಧಿಸಿದ್ದರು. ಬಂಧಿತರಿಗೆ ಗುರುವಾರ ಜಾಮೀನು ದೊರೆತಿದೆ. 34 ನ್ಯಾಯವಾದಿಗಳ ಸತತ ಪರಿಶ್ರಮದೊಂದಿಗೆ ಜಾಮೀನು ದೊರೆತಿದೆ. ಕೆಲವೊಂದು ದಾಖಲೆ ಒದಗಿಸಬೇಕಾದ ಹಿನ್ನೆಲೆಯಲ್ಲಿ ಎರಡು ದಿನಗಳ‌ ಒಳಗಾಗಿ ಬಂಧಿತರು ಬಿಡುಗಡೆ ಆಗಲಿದ್ದಾರೆ ಎಂದು ತಿಳಿಸಿದರು.

RELATED ARTICLES  ಜೆ.ಡಿ.ಎಸ್ ಕುಟುಂಬ ಸೇರಿದ ಆನಂದ್ ಅಸ್ನೋಟಿಕರ್

ಇದೇ ಸಮಯದಲ್ಲಿ ಮಾತನಾಡಿದ ಭಟ್ ಬಂಧಿತರ ಪ್ರಕರಣವನ್ನು ತುರ್ತು ಎಂದು ಪರಿಗಣಿಸಿ ಬಂಧಿತರಿಗೆ ಜಾಮೀನು ನೀಡಬೇಕು ಎಂದು ನಾವು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದೇವು. ನ್ಯಾಯವಾದಿಗಳಾದ ಎ.ಪಿ.ಹೆಗಡೆ ಜಾನ್ಮನೆ, ಎಸ್.ಎನ್.ನಾಯ್ಕ ಅವರು ವಾದ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಮಾಯಕರಿಗೆ ತೊಂದರೆ ಆಗದಂತೆ ಎಲ್ಲರೊಂದಿಗೆ ಕೈ ಜೋಡಿಸಿ ಬಂಧುಗಳನ್ನು ಬಿಡಿಸಲು ಪ್ರಯತ್ನಿಸಲಾಗಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರ ಮಾರ್ಗದರ್ಶನದಲ್ಲಿ ಜಾಮೀನು ಪ್ರಕ್ರಿಯೆ ನಡೆದಿತ್ತು ಎಂದು ತಿಳಿಸಿದರು.

RELATED ARTICLES  ಆ್ಯಂಬುಲೆನ್ಸ್ ಮತ್ತು ಬೈಕ್ ನಡುವೆ ಡಿಕ್ಕಿ : ಬೈಕ್ ಸವಾರ ಸಾವು.