ಕುಮಟಾ; ಬೆಳಕು ಗ್ರಾಮೀಣಾಭಿವೃಧ್ದಿ ಟ್ರಸ್ಟ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಈಗಾಗಲೇ ಹೀರೇಗುತ್ತಿಯ ಸುತ್ತ-ಮುತ್ತಲೂ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಕಿಟ್‍ಗಳನ್ನು ವಿತರಿಸಲಾಗಿದ್ದು ಗುರುವಾರ ನುಶಿಕೋಟೆ ಹಾಗೂ ಮೊರಬಾ ಭಾಗಗಳಲ್ಲಿ ಉಚಿತ ಗ್ಯಾಸ್ ಕಿಟ್ ನೊಂದಿಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಲೈಟರ್‍ಗಳನ್ನು ಸಹ ವಿತರಿಸಲಾಯಿತು.

ನಮಿತ ಕುಮಾರ ನಾಗರಾಜ ಅವರು ಫಲಾನುಭವಿಗಳಿಗೆ ಗ್ಯಾಸ್ ಕಿಟ್‍ಗಳನ್ನು ವಿತರಿಸಿ ಉಜ್ವಲ ಯೋಜನೆಯು ಕೇಂದ್ರ ಸರಕಾರದ ಜನಪರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಸಮಾಜದಲ್ಲಿನ ಕಡು ಬಡವರಿಗೆ ಈ ಯೋಜನೆಯಡಿ ಎಲ್.ಪಿ.ಜಿ ಗ್ಯಾಸ್ ನೀಡಲಾಗುತ್ತಿದ್ದು ಇದನ್ನು ಬಡವರ ಮನೆಬಾಗಿಲಿಗೆ ತಲುಪಿಸುತ್ತಿದ್ದು ಇದು ನಮಗೆ ಅತೀವ ಸಂತೋಷವನ್ನು, ತೃಪ್ತಿಯನ್ನು ತಂದಿದೆ ಎನ್ನುತ್ತಾ ಮುಂದಿನ ದಿನಗಳಲ್ಲಿ ಟ್ರಸ್ಟ ವತಿಯಿಂದ ಸರಕಾರಿ ಯೋಜನೆಗಳಲ್ಲಿ ಉಚಿತವಾಗಿ ಬಡವರ ಮನೆಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ನುಡಿದರು.

RELATED ARTICLES  ದನ ತಪ್ಪಿಸಲು ಹೋಗಿ ಡಿವೈಡರ್ ಗೆ ಡಿಕ್ಕಿಯಾದ ಬೈಕ್

ನುಶಿಕೋಟೆಯ ಶಾರದಾ ಜಿ. ನಾಯ್ಕ, ಪಾರ್ವತಿ ಯು. ಪಟಗಾರ, ತಾರಾ ವಿ. ಗಾಂವಕರ, ಶಾಂತಿ ಡಿ. ಪಡ್ತಿ, ನಾಗವೇಣಿ ವಿ. ನಾಯ್ಕ, ನಾಗು ಎಮ್. ಪಡ್ತಿ ಹಾಗೂ ಮೊರಬಾದ ನಾಗವೇಣಿ ಎಸ್. ಹಳ್ಳೇರ, ಶ್ರೀಮತಿ ಕೆ. ಪಟಗಾರ, ಮುಂತಾದ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.

RELATED ARTICLES  ಪ್ರಗತಿ ಟ್ಯುಟೋರಿಯಲ್ಸ್ ವಿದ್ಯಾರ್ಥಿಗಳಿಂದ ದ್ವಿತೀಯ ಪಿ.ಯು. ಸೈನ್ಸ್ ನಲ್ಲಿ ದಾಖಲೆಯ ಫಲಿತಾಂಶ : ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ!

ಈ ಸಂದರ್ಭದಲ್ಲಿ ದೇವದಾಸ ನಾಯಕ, ಸಣ್ಣಪ್ಪ ನಾಯಕ, ರಾಮನಾಥ ಪ್ರಭು, ಸುಧಾಕರ ಹಳ್ಳೇರ, ಶ್ರೀನಿವಾಸ ಶೇಟ, ವಿಘ್ನೇಶ ಪ್ರಭು, ನಾಗರಾಜ ಪಟಗಾರ, ರೋಹಿದಾಸ ನಾಯಕ, ಚೆನ್ನಪ್ಪ ನಾಯಕ, ರಾಘವೇಂದ್ರ ಗೌಡ ಮುಂತಾದವರು ಉಪಸ್ಥಿತರಿದ್ದರು.