ಕಾರವಾರ: ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ 2016-17ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದೀಪದಾನ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಕೆ.ಪ್ರಕಾಶರವರ ಬಹುಮಾನ ವಿತರಿಸಿ ಮಾತನಾಡಿ, ಶಿಕ್ಷಕರಾದವರು ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳನ್ನು ಕಲ್ಪನೆಯಲ್ಲಿ ಇಟ್ಟುಕೊಂಡು ಪ್ರಜ್ಞಾವಂತ ನಾಗರಿಕರನ್ನು ರೂಪಿಸಬೇಕೆಂದು ತಿಳಿಸುತ್ತ ಆವಶ್ಯಕ ಮೌಲ್ಯಗಳನ್ನು ಮರುಹುಟ್ಟುಹಾಕುವಲ್ಲಿ ನಿರಂತರ ಪ್ರಯತ್ನ ಮಾಡಬೇಕೆಂದು ಕರೆ ನೀಡಿ ಸಂಸ್ಥೆಯಲ್ಲಿ ವೈವಿಧ್ಯಮಯ ಕಾರ್ಯ ಚಟುವಟಿಕೆಗಳನ್ನು ಸಂಘಟಿಸಿ ರಾಜ್ಯದಲ್ಲಿಯೇ ಮಾದರಿಯಾದ ಉತ್ತಮ ಸಂಸ್ಕಾರಯುತ ಶಿಕ್ಷಕ ತರಬೇತಿ ನೀಡುತ್ತಿರುವ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಎಲ್ಲರನ್ನು ಅಭಿನಂದಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

RELATED ARTICLES  ಬೆಲೆ ಏರಿಕೆ ಹಾಗೂ ಇತರ ಸಮಸ್ಯೆ ಬಗ್ಗೆ ಖಂಡನೆ : ಜಿಲ್ಲಾ ಯೂಥ್ ಕಾಂಗ್ರೆಸ್ ನ ಪದಾಧಿಕಾರಿಗಳಿಂದ ಪ್ರತಿಭಟನೆ.

ಶಿವಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಮನ ಸಾವಂತ ಮಾತನಾಡಿ ತಮ್ಮ ಗುರುಗಳು ಹಾಕಿಕೊಟ್ಟ ಆದರ್ಶಗಳು ಇಂದಿಗೂ ತಮಗೆ ದಾರಿದೀಪ. ನಿಮ್ಮ ಗುರುಗಳು ನಿಮಗೆ ಆದರ್ಶವಾಗಲಿ. ನಮ್ಮ ಸಂಸ್ಥೆಯಿಂದ ಹೊರ ಹೋದ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಒಳ್ಳೇಯ ಹೆಸರನ್ನು ಗಳಿಸಿರುತ್ತಾರೆ. ಆ ಸಾಧನೆ ನಿಮ್ಮದಾಗಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಖಜಾಂಚಿ ಎಮ್.ಬಿ.ನಾಯ್ಕ ಉಪಸ್ತಿತರಿದ್ದರು. ಪ್ರಾಚಾರ್ಯರಾದ ಡಾ.ಶಿವಾನಂದ ನಾಯಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದೀಪಾ ಹಾಗೂ ಸಂಗಡಿಗರು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಉಪಾದ್ಯಕ್ಷರಾದ ನವೀನ ದೇವರಭಾವಿ ಶೈಕ್ಷಣಿಕ ವರ್ಷದ ವರದಿ ವಾಚಿಸಿದರು.ಶಂಕರ ಚಾಪೋಲೆಕರ ಕ್ರೀಡಾ ವರದಿ ಹಾಗೂ ರಾಜೇಶ ಬಂಟ್ ಸಾಂಸ್ಕ್ರತಿಕ ವರದಿ ವಾಚಿಸಿದರು. ರಾಮಣ್ಣ ಕುರಿ ವಂದಿಸಿದರು. ತೇಜಸ್ವಿನಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ತಿತರಿದ್ದರು.

RELATED ARTICLES  ಪತಿಯ ಸಾವಿನ ಸುದ್ದಿ ತಿಳಿದು ತಕ್ಷಣ ಪ್ರಾಣಬಿಟ್ಟ ಪತ್ನಿ: ಹಳದೀಪುರದಲ್ಲೊಂದು ಮನ ಕಲಕುವ ಘಟನೆ