ಹೊನ್ನಾವರ; ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಾಲಕಿಯ ಮನೆಗೆ ವಿಧಾನ ಪರಿಷತ್ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಮುಖಂಡ ಸುನೀಲ್ ನಾಯ್ಕ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದರು. ಹೊನ್ನಾವರ ತಾಲೂಕಿನ ಮಾಗೋಡ ಕೋಡ್ಲಗದ್ದೆಯಲ್ಲಿ ಬಾಲಕಿಯ ಮನೆಗೆ ಭೇಟಿ ನೀಡಿದ ಮುಖಂಡರು ಕುಟುಂಬಕ್ಕೆ ಧೈರ್ಯತುಂಬಿದರು.

ಹೊನ್ನಾವರ ತಾಲೂಕಿನ ಮಾಗೋಡ ಕೋಡ್ಲಗದ್ದೆಯಲ್ಲಿ ನಿನ್ನೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಾಲಕಿ ಮನೆಗೆ ವಿಧಾನ ಪರಿಷತ್ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಮುಖಂಡ ಸುನೀಲ್ ನಾಯ್ಕ ಬೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿ, ಬಾಲಕಿಯ ಎರಡು ಕೈ ಗಳಿಗೆ ಬ್ಯಾಂಡೆಜ್ ಮಾಡಲಾಗಿದೆ. ಪರೇಶ ಮೇಸ್ತ ಸಾವಿನಿಂದಾಗಿ ಇನ್ನು ಆತಂಕದಲ್ಲಿರುವಾಗಲೇ ಈ ಬಾಲಕಿಗೆ ಆಗಿರುವ ನೋವು ಜನರಲ್ಲಿ ಆತಂಕದ ಭಾವನೆ ಹುಟ್ಟುಹಾಕಿದೆ ಎಂದರು.

RELATED ARTICLES  ಕೊರೋನಾ ವಾರಿಯರನ್ನು ಗೆಲ್ಲಿಸಿದ ಸಿದ್ದಾಪುರದ ತಾರೇಸರ ಜನತೆ

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸುನೀಲ್ ನಾಯ್ಕ ಮಾತನಾಡಿ ಈ ಬಾಲಕಿಯ ಕುಟುಂಬಕ್ಕೆ ಸಾಂಯ್ವಾನ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಎಮ್.ಜಿ ನಾಯ್ಕ, ಉಮೇಶ ನಾಯ್ಕ, ಕೇಶವ ನಾಯ್ಕ ಬಳಕೂರ, ಗಣಪತಿ ನಾಯ್ಕ ಬಿ ಟಿ, ಶ್ರೀಧರ ನಾಯ್ಕ, ಮುಂತಾದವರು ಇದ್ದರು..

RELATED ARTICLES  ಬಿಜೆಪಿ ಕುಮಟಾ ಹೊನ್ನಾವರ ಅಭಿವೃದ್ಧಿಗೆ ವಿಶೇಷ ಕಾಳಜಿವಹಿಸಿದೆ : ದಿನಕರ ಶೆಟ್ಟಿ.