ಆಧ್ಯಾತ್ಮಿಕ ವಿವರಣೆ —

ಸ್ಟೀಲ್ ಧಾತುವಿನ ಉಪಕರಣಗಳಿಗಿಂತ ತಾಮ್ರದ ಅಥವಾ ಹಿತ್ತಾಳೆಯ ಉಪಕರಣಗಳನ್ನು ಉಪಯೋಗಿಸುವುದು ಏಕೆ ಹೆಚ್ಚು ಶ್ರೇಯಸ್ಕರವಾಗಿದೆ?

೧. ಸ್ಟೀಲ್ ಧಾತುವಿನ ಉಪಕರಣಗಳಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಅತ್ಯಂತ ಕಡಿಮೆಯಿರುತ್ತದೆ ಮತ್ತು ಅದರಲ್ಲಿ ಕಪ್ಪು ಶಕ್ತಿಯನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚಿರುತ್ತದೆ: ಪೂಜೆಗಾಗಿ ಇತ್ತೀಚೆಗೆ ಅನೇಕ ಜನರು ಸ್ಟೀಲ್ ಧಾತುವಿನ ಉಪಕರಣಗಳನ್ನು ಉಪಯೋಗಿಸುತ್ತಿದ್ದಾರೆ. ಸ್ಟೀಲ್ ಧಾತುವಿನಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಎಲ್ಲಕ್ಕಿಂತ ಕಡಿಮೆ ಮತ್ತು ಕಪ್ಪುಶಕ್ತಿಯನ್ನು ಆಕರ್ಷಿಸುವ ಸಾಧ್ಯತೆಯು ಎಲ್ಲಕ್ಕಿಂತ ಹೆಚ್ಚಿರುತ್ತದೆ. ಸ್ಟೀಲ್‌ನ ಉಪಕರಣಗಳಿಂದ ನಮಗೆ ಹೆಚ್ಚಿನ ಲಾಭ ಆಗುವುದಿಲ್ಲ; ಏಕೆಂದರೆ ಅವುಗಳಿಂದ ನಮಗೆ ಸಾತ್ತ್ವಿಕತೆ ಮತ್ತು ಚೈತನ್ಯವು ಸಿಗುವುದಿಲ್ಲ ಮತ್ತು ಭಾವಜಾಗೃತಿಯೂ ಆಗುವುದಿಲ್ಲ.

೨. ತಾಮ್ರ ಮತ್ತು ಹಿತ್ತಾಳೆಯಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಹೆಚ್ಚಿರುತ್ತದೆ: ತಾಮ್ರ ಮತ್ತು ಹಿತ್ತಾಳೆಯ ಧಾತುಗಳ ಪ್ರತಿಯೊಂದು ಕಣದಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಹೆಚ್ಚಿರುತ್ತದೆ. ಹಾಗೆಯೇ ಪ್ರತಿದಿನ ಪೂಜೆಯನ್ನು ಮಾಡುವುದಕ್ಕಿಂತ ಮೊದಲು ಹುಣಸೆ ಮತ್ತು ನಿಂಬೆಹಣ್ಣನ್ನು ಉಪಯೋಗಿಸಿ ತಾಮ್ರ-ಹಿತ್ತಾಳೆಯ ಉಪಕರಣಗಳನ್ನು ಸ್ವಚ್ಛಗೊಳಿಸುವುದರಿಂದ ಅವುಗಳ ಮೇಲೆ ಬಂದಿರುವ ಕಪ್ಪು ಆವರಣವೂ ದೂರವಾಗುತ್ತದೆ.

೩. ತಾಮ್ರದ ವೈಶಿಷ್ಟ್ಯಗಳು
ಅ. ತಾಮ್ರದಲ್ಲಿ ಎಲ್ಲ ದೇವತೆಗಳ ತತ್ತ್ವಗಳನ್ನು ಶೇ.೩೦ರಷ್ಟು ಗ್ರಹಿಸುವ ಕ್ಷಮತೆಯಿದೆ.
ಆ. ತಾಮ್ರದಲ್ಲಿ ಶೇ.೩೦ರಷ್ಟು ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯಿದೆ. ಆದುದರಿಂದ ತಾಮ್ರವನ್ನು ಮಂಗಲಸ್ವರೂಪವೆಂದು ತಿಳಿಯುತ್ತಾರೆ ಮತ್ತು ಅದರಿಂದ ಭಗವಂತನು ಪ್ರಸನ್ನನಾಗುತ್ತಾನೆ.
ಇ. ತಾಮ್ರದಲ್ಲಿ ರಜ-ತಮವನ್ನು ನಾಶಗೊಳಿಸುವ ಕ್ಷಮತೆಯು ಶೇ.೭೦ರಷ್ಟಿದೆ. ಆದುದರಿಂದ ತಾಮ್ರದ ಪಾತ್ರೆಗಳಲ್ಲಿ ಯಾವುದೇ ವಸ್ತುವನ್ನು ಉದಾ.ನೀರನ್ನು ಇಟ್ಟರೆ ಅದರಲ್ಲಿರುವ ರಜ-ತಮವು ಶೇ.೭೦ರಷ್ಟು ಕಡಿಮೆಯಾಗುತ್ತದೆ ಮತ್ತು ಸಾತ್ತ್ವಿಕತೆಯು ಹೆಚ್ಚಾಗತೊಡಗುತ್ತದೆ.

RELATED ARTICLES  ಸಿಲೆಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ.

ವೈಜ್ಞಾನಿಕ ವಿವರಣೆ

ತಾಮ್ರದ ಪಾತ್ರೆ : ಪ್ರಗತಿಶೀಲ ದೇಶಗಳಲ್ಲಿ ಕಾಯಿಲೆ ಮತ್ತು ಸಾವಿಗೆ ಪ್ರಮುಖ ಕಾರಣ ನೀರಿನಿಂದ ಹರಡುವ ರೋಗಗಳೇ ಆಗಿವೆ .
ಇಂದಿಗೂ ಜನಸಾಮಾನ್ಯರಿಗೆ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆಯು ಕೈಗೆಟುಕದ ದುಬಾರಯಾದ ಗುರಿಯಾಗಿದೆ.
ಕೇಂದ್ರೀಕೃತ ಜಲಶುದ್ಧೀಕರಣ ವ್ಯವಸ್ಥೆಗಲಿಲ್ಲದಿರುವಾಗ ಅಥವಾ ಅವುಗಳ ಸಂಖ್ಯೆ ಸಾಲದಾದಾಗ , ಕುಡಿಯುವ ನೀರನ್ನು ಸುರಕ್ಷಿಸುವ ಹೊಣೆ
ತಾನಾಗಿ ವ್ಯಕ್ತಿ ಹಾಗೂ ಸಮುದಾಯಗಳದ್ದಾಗುತ್ತದೆ . ಸುರಕ್ಷಿತ ಗೃಹ ಬಳಕೆಯ
ನೀರನ್ನು ಸರಬರಾಜು ಮಾಡುವಲ್ಲಿ ಪ್ರಮುಖ ಅಂಶಗಳು ನೀರನ್ನು ಸಂಗ್ರಹಿಸಿ ಶೇಖರಿಸುವ ವಿಧಾನಗಳು , ಸಂಗ್ರಹಿಸುವ ನೀರಿನ ಆಯ್ಕೆ ಮತ್ತು ಅದನ್ನು ಸಂಗ್ರಹಿಸುವ ಪಾತ್ರೆಗಳು.

ಹಿಂದಿನ ಕಾಲದಲ್ಲಿ ಬಾವಿಯ ನೀರಿನ ಉಪಯೋಗ , ನೀರನ್ನು ಸಂಗ್ರಹಿಸಲು ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳ
ಬಳಕೆ ಸಾಮಾನ್ಯವಾಗಿದ್ದಿತು . ಸೂರ್ಯನ ಶಾಖ ಮತ್ತು ವಿಕಿರಣಗಳಿಂದ ಸೂಕ್ಷ್ಮ ಕ್ರಿಮಿಗಳು ನಾಶವಾಗುತ್ತಿದ್ದವು .
ವಿಶ್ವದ ಒಂದು ಭಾಗದಲ್ಲಿ ಪ್ರಚಲಿತವಾದ ಈ ಸಾಂಪ್ರದಾಯಿಕವಾದ ನೀರನ್ನು ಶುದ್ಧೀಕರಿಸುವ ಹಾಗೂ ಶೇಖರಿಸಿಡುವ
ವಿಧಾನದ ಹಿಂದೆ ಸೂಕ್ಷ್ಮ ಜಂತು ಜೀವಶಾಸ್ತ್ರದ ಅರಿವಿದೆಯೆಂದು ಒಬ್ಬ ಸಂಶೋಧಕರು ಹೇಳಿದ್ದಾರೆ .

RELATED ARTICLES  ಸ್ವಾತಂತ್ರ್ಯ ದಿನದ ವಿಶೇಷ : ಗಮನ ಸೆಳೆಯುತ್ತಿದೆ ಗೀತೆ

ಇದರಲ್ಲಿ ಮುಖ್ಯ ಮೂಲ ವಸ್ತುವೆಂದರೆ ತಾಮ್ರ , ಅದು ಜೀವಕೋಶಗಳ ಪದರ ಹಾಗೂ ಕಿಣ್ವಗಳ ನಡುವೆ ಪ್ರವೇಶಿಸಿ ಬ್ಯಾಕ್ಟೀರಿಯಗಳನ್ನು ಕೊಲ್ಲುತ್ತದ್ದೆ . ಹಿತ್ತಾಳೆ (ತಾಮ್ರ ಹಾಗೂ ಸತುವಿನ ಮಿಶ್ರಲೋಹಗಳು) ಕೊಡಗಳು , ನೀರಿನಲ್ಲಿ ಸಣ್ಣ
ತಾಮ್ರ ಕಣಗಳನ್ನು ಚೆಲ್ಲುತ್ತವೆ .

ಇಂಗ್ಲೆಂಡ್ ನ ನ್ಯೂ ಕ್ಯಾಸಲ್ ಅಪಾನ್ ಟೈನ್ (New Castle Upon Tyne)ನ ನಾರ್ತಂಬ್ರಿಯ ವಿಶ್ವವಿದ್ಯಾನಿಲಯದ ಸೂಕ್ಷ್ಮಜಂತು ಜೀವಶಾಸ್ತ್ರತಜ್ಞನಾದ ರಾಬ್ ರೀಡ್(Rob Reed)ನು ಸೂಕ್ಷ್ಮ ಜೀವಿಗಳು ಮಣ್ಣು ಅಥವಾ ಪ್ಲಾಸ್ಟಿಕ್ ಪಾತ್ರೆಗಳಿಗಿಂತ ಹಿತ್ತಾಳೆ ಪಾತ್ರೆಗಳಲ್ಲಿ ಉಪಚಯವಾಗುವುದು ಕಡಿಮೆ ಎಂಬುದನ್ನು ಕಂಡುಕೊಂಡನು. ಈ ವಿಜ್ಞಾನಿಯು ತನ್ನ ಸಹ ಪೂಜಾ ಟಂಡನ್ , ಸಂಜಯ್ ಛಾಬ್ರಿಯ ಅವರೊಡನೆ ಹಿತ್ತಾಳೆ ಮತ್ತು ಮಣ್ಣಿನ ಪಾತ್ರೆಗಳೆರಡನ್ನೂ ಆಮಶಂಕೆಯಂತಹ ರೋಗೊತ್ಪಾದಕವಾದ ಕಡಿಮೆ ಸಾರ ಹೊಂದಿರುವ ಈಶ್ಚೆರಿಚಿಯ ಕೂಲಿ (Escherichia coli) ಎಂಬ ಬ್ಯಾಕ್ಟೀರಿಯಾದಿಂದ ತುಂಬಿಸಿದನು . ನಂತರ ಬ್ಯಾಕ್ಟೀರಿಯಾದ ಅವಸ್ಥೆಯನ್ನು 24, 48 ಘಂಟೆಗಳ ಅನಂತರ ಪರಿಶೀಲಿಸಿದನು , ಇಂತಹುದೇ ಪರೀಕ್ಷೆಯನ್ನು ಪ್ರಾಕೃತಿಕವಾಗಿ ಅಶುದ್ಧವಾಗಿದ್ದ ನೀರಿಗೂ ನಡೆಸಲಾಯಿತು . ಹಿತ್ತಾಳೆ ಪಾತ್ರೆಗಳಲ್ಲಿದ್ದ ಇಕೂಲಿ ಬ್ಯಾಕ್ಟೀರಿಯಗಳು ಕ್ರಮೇಣ ಕಡಿಮೆಯಾಗುತ್ತ ಬಂದು, 48 ಘಂಟೆಗಳ ನಂತರ ಅವುಗಳನ್ನು ಗುರುತಿಸಲಾಗದ ಮಟ್ಟ ತಲುಪಿದವು.