ಸುಳ್ಯ: ಈ ಬಾರಿಯ ಕಿರುಷಷ್ಠಿ ಮಹೋತ್ಸವದಲ್ಲಿ ಧರ್ಮಸಮ್ಮೇಳನ ಸಭಾ ಕಾರ್ಯಕ್ರಮವನ್ನು ನಡೆಸದಿರುವ ವ್ಯವಸ್ಥಾಪನ ಸಮಿತಿ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಡಿ.24 ರಂದು ಧರ್ಮಸಮ್ಮೇಳನ ನಡೆಸಲು ವ್ಯವಸ್ಥಾಪನ ಸಮಿತಿ ನಿರ್ಧರಿಸಿದೆ.

ಪ್ರತಿವರ್ಷ ಕಿರುಷಷ್ಠಿ ಸಂದರ್ಭದಲ್ಲಿ ಧರ್ಮಸಮ್ಮೇಳನ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ಬಾರಿ ಡಿ. 19 ರಿಂದ 24 ರವರೆಗೆ ನಡೆಯುವ ಕಿರುಷಷ್ಠಿ ಮಹೋತ್ಸವದ ವೇಳೆ ಧರ್ಮಸಮ್ಮೇಳನ ನಡೆಸದಿರಲು ವ್ಯವಸ್ಥಾಪನ ಸಮಿತಿ ನಿರ್ಧರಿಸಿತ್ತು. ಕಿರುಷಷ್ಠಿಯ ಸಂದರ್ಭ ಕಾಟಾಚಾರ ರೀತಿಯಲ್ಲಿ ಧರ್ಮಸಮ್ಮೇಳನ ನಡೆಸುವುದಕ್ಕಿಂತ ದೊಡ್ಡ ಮಟ್ಟದಲ್ಲಿ ಜನ ಸೇರಿಸಿ ಸ್ವಲ್ಪ ಸಮಯದ ಬಳಿಕ ಬೃಹತ್ ಧರ್ಮ ಸಮ್ಮೇಳನ ನಡೆಸಲಾಗುವುದೆಂದು ಸಮಿತಿ ತಿಳಿಸಿದೆ.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ದಿನಾಂಕ 28/03/2019 ರ ದಿನ ಭವಿಷ್ಯ

ಧರ್ಮ ಸಮ್ಮೇಳನ ಸಭಾ ಕಾರ್ಯಕ್ರಮ ನಡೆಸಿದರೆ ಅದಕ್ಕೆ ಶಾಸಕ ಅಂಗಾರರನ್ನು ಅಧ್ಯಕ್ಷರನ್ನಾಗಿ ಕರೆಯಬೇಕಾಗುತ್ತದೆ ಎಂಬ ಕಾರಣದಿಂದ ಧರ್ಮ ಸಮ್ಮೇಳನವನ್ನು ಕೈಬಿಡಲಾಗಿದೆ. ಇದು ಶಾಸಕರಿಗೆ ಮತ್ತು ದಲಿತರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿತ್ತಲ್ಲದೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

RELATED ARTICLES  ದಿನಾಂಕ 04/07/2019 ರ ದಿನ ಭವಿಷ್ಯ.

ಈ ಹಿನ್ನೆಲೆಯಲ್ಲಿ ವ್ಯವಸ್ಥಾಪನ ಸಮಿತಿ ತನ್ನ ನಿರ್ಧಾರವನ್ನು ಬದಲಿಸಿ ಡಿ.24 ರಂದು ಶಾಕರ ಅಧ್ಯಕ್ಷತೆಯಲ್ಲೇ ಧರ್ಮ ಸಮ್ಮೇಳನ ನಡೆಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಈ ಕಾರ್ಯಕ್ರಮವನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸುವರು. ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ಮಾಡುವರು. ಕೆ.ಎಸ್.ಎನ್. ಉಡುಪ ಧಾರ್ಮಿಕ ಉಪನ್ಯಾಸ ನೀಡುವರು ಎಂದರು.