ನವದೆಹಲಿ: ಡೆಬಿಟ್‌ ಕಾರ್ಡ್‌ ಬಳಸಿ ₹ 2,000ವರೆಗಿನ ಮೊತ್ತ ಪಾವತಿಸುವುದರ ಮೇಲಿನ ‘ಎಂಡಿಆರ್‌’ ಶುಲ್ಕವನ್ನು ಕೇಂದ್ರ ಸರ್ಕಾರವೇ ಭರಿಸಲು ಮುಂದಾಗಿದೆ.

ನಗದುರಹಿತ (ಡಿಜಿಟಲ್‌) ವಹಿವಾಟು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2018ರ ಜನವರಿ 1ರಿಂದ ಎರಡು ವರ್ಷಗಳವರೆಗೆ ಈ ಉತ್ತೇಜನಾ ಕೊಡುಗೆ ಜಾರಿಯಲ್ಲಿ ಇರಲಿದೆ.

‘ಡೆಬಿಟ್‌ ಕಾರ್ಡ್‌, ಭೀಮ್‌ ಆ್ಯಪ್‌ ಅಥವಾ ಆಧಾರ್‌ ಆಧರಿಸಿದ ಪಾವತಿ ವ್ಯವಸ್ಥೆ ಮೂಲಕ ಹಣ ಪಾವತಿಸಿದ ಶುಲ್ಕವನ್ನು ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಮರು ಪಾವತಿಸಲಿದೆ. ಇದರಿಂದ ಬೊಕ್ಕಸಕ್ಕೆ ₹ 2,512 ಕೋಟಿ ಹೊರೆ ಬೀಳಲಿದೆ’ ಎಂದು ಕೇಂದ್ರ ಐ.ಟಿ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

RELATED ARTICLES  This Is What Happens To Your Body During A Hangover

‘₹ 2,000 ವರೆಗಿನ ಎಲ್ಲ ವಹಿವಾಟಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಗ್ರಾಹಕರು ಮತ್ತು ವರ್ತಕರ ಮೇಲೆ ಎಂಡಿಆರ್‌ ರೂಪದಲ್ಲಿ ಹೆಚ್ಚಿನ ಹೊರೆ ಬೀಳುವುದಿಲ್ಲ. ಇದು ನಗದುರಹಿತ ವಹಿವಾಟು ಅಳವಡಿಸಿಕೊಳ್ಳಲು ಉತ್ತೇಜನ ನೀಡಲಿದೆ. ಕಡಿಮೆ ನಗದು ಆರ್ಥಿಕತೆಯತ್ತ ಸಾಗಲೂ ಇದರಿಂದ ಸಾಧ್ಯವಾಗಲಿದೆ’ ಎಂದರು.

RELATED ARTICLES  ಜಿಎಸ್‍ಟಿ ಅರಿವು ಕಾರ್ಯಾಗಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.