ದಾಂಡೇಲಿ: ಒಡನಾಡಿ ಉತ್ತರಕನ್ನಡ, ಹಾಗೂ ಸಂಜೀವಿನ ಪ್ರಕಾಶನ, ಅರ್ಲವಾಡಾ ಇವರ ಆಶ್ರಯದಲ್ಲಿ ಶಿಕ್ಷಕ, ಲೇಖಕ ನಾರಾಯಣ ನಾಯ್ಕರು ರಚಿಸಿದ ‘ಚತುರ ಚಿಟ್ಟೆ’ ಹಾಗೂ ‘ಗುಬ್ಬಚ್ಚಿ ಗೂಡು’ ಎಂಬ ಎರಡು ಮಕ್ಕಳ ಕಥಾಸಂಕಲನಗಳ ಬಿಡುಗಡೆ ಕಾರ್ಯಕ್ರಮ ಡಿಸೆಂಬರ 17 ರಂದು ಮುಂಜಾನೆ 10.30 ಗಂಟೆಗೆ ನಗರದ ಕರ್ನಾಟಕ ಸಂಘದ ಸಭಾಭವನದಲ್ಲಿ ನಡೆಯಲಿದೆ.

ಲೇಖಕ, ಅಂಕಣಕಾರ ಸಂತೋಷಕುಮಾರ ಮೆಹಂದಳೆ ಕಥಾ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿರುವ ಪ್ರಾದ್ಯಾಪಕರೂ, ಸಾಹಿತಿಗಳೂ ಆದ ಡಾ. ಆರ್.ಜಿ. ಹೆಗಡೆ ಕೃತಿ ಪರಿಚಯ ಮಾಡಲಿದ್ಧಾರೆ. ಒಡನಾಡಿ ಸಂಘಟನೆಯ ಅದ್ಯಕ್ಷ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎ. ಮುಲ್ಲಾ, ವಿಜಯ ಸಂದೇಶ ವಾರಪತ್ರಿಕೆಯ ಸಂಪಾದಕಿ ಸುಮಂಗಲಾ ಅಂಗಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಭಾವಿಕೇರಿ, ಅಳ್ನಾವರ ಸೆಂಟ್ ತೆರೇಜಾ ಬಿ.ಇಡಿ ಕಾಲೆಜಿನ ಪ್ರಾದ್ಯಾಪಕಿ ಬೇಬಿ ಎಲ್. ಧಾರ್ಲ ಗೌರವ ಅತಿಥಿಗಳಾಗಿರಲಿದ್ದಾರೆ.

RELATED ARTICLES  ಜನರು ನೋಡುತ್ತಿರುವಾಗಲೇ ನಡೆದೋಯ್ತು ಕೊಲೆ : ಜನತೆಯನ್ನು ಬೆಚ್ಚಿ ಬಿಳಿಸಿದ ಚಂದಾವರದ ಘಟನೆ

ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಜೀವಿನಿ ಪ್ರಕಾಶನದ ಅದ್ಯಕ್ಷ, ಲೇಖಕ ನಾರಾಯಣ ಎಲ್. ನಾಯ್ಕ, ಒಡನಾಡಿಯ ಅಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.

RELATED ARTICLES  ಶಿವರಾಮ ಹೆಬ್ಬಾರ್ ಅವರನ್ನು ಓರ್ವ ರಾಜಕಾರಣಿ ಎನ್ನುವುದಕ್ಕಿಂತ ಸಮಾಜ ಸೇವಕ ಎಂದು ಬಣ್ಣಿಸಿದರೆ ಉತ್ತಮ : ಎಚ್.ಎಂ.ರೇವಣ್ಣ