ಬೆಂಗಳೂರು : ಭಯೋತ್ಪಾದಕ ಅಜ್ಮಲ್ ಕಸಬ್’ನ ಸಾವಿನ ವರ್ಷಾಚರಣೆ ಆಚರಿಸುವ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂದು ರಾಜ್ಯಪಾಲ ವಜೂಭಾಯಿವಾಲ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್ ನಡೆದ ಕಾನ್ಫರೆನ್ಸ್ ಆಫ್ ಸೆಂಟ್ರಲ್ ಗೌರ್ನಮೆಂಟ್ ಕೌನ್ಸಿಲ್ ಆಫ್ ಸೌತರ್ನ್ ರಿಜಿಯನ್ 2017 ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯಪಾಲರು ಮಾತನಾಡಿದರು. ದೇಶದ್ರೋಹದ ಪ್ರಕರಣಗಳನ್ನು ವಿಚಾರಣೆ ನಡೆಸಲು ಪ್ರತ್ಯೇಕವಾದ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಇಂತಹ ಪ್ರಕರಣಗಳಲ್ಲಿ 3 ದಿನದಲ್ಲಿಯೇ ತೀರ್ಪು ಹೊರಬೀಳಬೇಕು ಎಂದು ಅಭಿಪ್ರಾಯಪಟ್ಟರು.

RELATED ARTICLES  ಕುವೆಂಪು ವಿವಿ ನಕಲಿ ಅಂಕಪಟ್ಟಿ ಹಗರಣ, ನಾಲ್ವರು ವಜಾ

ಉಗ್ರ ಅಜ್ಮಲ್ ಕಸಬ್ ಪ್ರಕರಣವನ್ನು ಉದಾಹರಣೆ ನೀಡಿದ ರಾಜ್ಯಪಾಲರು, ಉಗ್ರನನ್ನು ಸೆರೆಹಿಡಿದು ಹೈಕೋರ್ಟ್ ನಲ್ಲಿ ಪ್ರಕರಣದ ವಾದ-ಪ್ರತಿವಾದ ನಡೆದು ತೀರ್ಪು ಹೊರಬಂದು, ನಂತರ ಸರ್ವೋಚ್ಚ ನ್ಯಾಯಾಯಕ್ಕೆ ಮೇಲ್ಮನವಿ ಸಲ್ಲಿಸಲಾಯಿತು. ಕೊನೆಗೆ ರಾಷ್ಟ್ರಪತಿಗಳ ಕ್ಷಮಾದಾನಕ್ಕೆ ಪತ್ರ ಬರೆಯಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES  ಕನ್ನಡ ಚಿತ್ರರಂಗದ ಹಿರಿಯ ನಟ ಮನದೀಪ್ ರಾಯ್ ಹೃದಯಾಘಾತದಿಂದ ಸಾವು.

ದೇಶದ್ರೋಹಿಗಳನ್ನು ನೇಣು ಹಾಕಿದ ಬಗ್ಗೆ ಯಾವುದೇ ಪತ್ರಿಕೆ ಮತ್ತು ಮಾಧ್ಯಮಗಳು ವರದಿ ಮಾಡಬಾರದು ಎಂದು ರಾಜ್ಯಪಾಲರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಭಾಗವಹಿಸಿದ್ದರು.