ಕುಮಟಾ : ಇತ್ತಿಚೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಂದ್ ವೇಳೆ ನಡೆದ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಹಲವು ಪರ್ತಕರ್ತರು ಗಾಯಗೊಂಡಿದ್ದು ಮತ್ತು ಅವರ ಕ್ಯಾಮರಾ ಹಾಗೂ ಇನ್ನಿತರ ಸಲಕರಣೆಗಳು ಹಾನಿಗೊಳಗಾಗಿವೆ. ಈ ಸಂಬಂಧ ಪತ್ರಕರ್ತರಿಗೆ ರಕ್ಷಣೆ ಕುರಿತು ಕುಮಟಾ ತಾಲೂಕಿನ ಪತ್ರಕರ್ತರು ಮತ್ತು ಮಾಧ್ಯಮದವರು ಸೇರಿ ಕುಮಟಾ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

RELATED ARTICLES  ಗೋಕರ್ಣದ ಸೋಮೇಶ್ವರ ದೇವಸ್ಥಾನದಲ್ಲಿ ಕಳ್ಳರ ಕರಾಮತ್ತು : 3.5 ಲಕ್ಷ ಮೌಲ್ಯದ ಆಭರಣ ಕಳವು..!

ಇಂತಹ ಘಟನೆ ಕೇವಲ ಕುಮಟಾದಲ್ಲಿ ಒಂದೇ ಅಲ್ಲದೆ ಹೊನ್ನಾವರ,ಶಿರಸಿಯಲ್ಲಿಯೂ ಇತಂಹದೆ ಘಟನೆ ಮರುಕಳುಹಿಸಿದೆ.

ಇದರಿಂಗಾಗಿ ಪತ್ರಕರ್ತರು ಮತ್ತು ಮಾಧ್ಯಮದವರಿಗೆ ಕಾರ್ಯನಿರ್ವಹಿಸಲು ಭಯದ ವಾತವರಣ ನಿರ್ಮಾಣವಾಗಿದೆ. ಆದ್ದರಿಂದ ಮುಂದಿನ ದಿನದಲ್ಲಿ ಸೂಕ್ತ ರಕ್ಷಣೆಯನ್ನು ನೀಡಬೇಕು. ಗ್ರಾಮೀಣಾ ಪತ್ರಿಕೋಧ್ಯಮ ಲಾಭದಾಯಕವಾದ ಉದ್ಯೋಗವಾಗಿರದೇ ಇದೊಂದು ಸೇವೆಯಾಗಿರುವುದರಿಂದ ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಗೌರವಿಸಲ್ಪಡುವುದರಿಂದ ಪತ್ರಕರ್ತರ ಪ್ರಾಣ,ಗೌರವ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES  ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಇಳಿದ ಇಬ್ಬರು ಆರೋಪಿಗಳು ಅರೆಸ್ಟ್

ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಬ್ರಾಯ ಭಟ್ಟ, ಕರ್ನಾಟಕ ಜರ್ನಲಿಸ್ಟ ಯೂನಿಯನ್ ಅಧ್ಯಕ್ಷರಾದ ಅನ್ಸಾರ್ ಶೇಖ್, ಚರಣ ನಾಯ್ಕ, ಎಂ ಜಿ ನಾಯ್ಕ,ಶಂಕರ ಶರ್ಮಾ,ನಾಗರಾಜ ಪಟಗಾರ,ರಾಘವೇಂದ್ರ ದಿವಾಕರ,ಜಿ.ಡಿ ಶಾನಭಾಗ,ಗಣಪತಿ ನಾಯ್ಕ,ಚಂದ್ರಕಾಂತ ನಾಯ್ಕ ಇನ್ನಿತರರು ಹಾಜರಿದ್ದರು