ಕುಮಟಾ: ಕಾರವಾರ ಮತ್ತು ಶಿರಸಿ ಅಂಚೆ ವಿಭಾಗದಿಂದ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನವನ್ನು ಕುಮಟಾದ ಮಹಾಸತಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಧಾರವಾಡದ ಪೋಸ್ಟಮಾಸ್ಟರ್ ಆಪ್ ಜನರಲ್ ಆಗಿರುವ ವೀಣಾ ಆರ್. ಶ್ರೀನಿವಾಸ ಅವರು ದೀಪ ಬೆಳಗಿಸುವ ಮೂಲಕ ನೆರವರಿಸಿದ್ರು.

ಈ ವೇಳೆ ಅನೇಕ ವಿಶೇಷತೆಗಳುಳ್ಳ ಶ್ರೀ ಮುರುಡೇಶ್ವರ ದೇವಾಲಯ ಹಾಗೂ ಶಿರಸಿಯ ಗುರು ರಾಘವೇಂದ್ರ ಮಠ ಚಿತ್ರ ವಿರುವ ಅಂಚೆ ಲಕೋಟೆಯನ್ನು ಹಾಗೂ ಅನೇಕ ಜಿಲ್ಲೆಯ ಪ್ರಸಿದ್ದ ಕ್ಷೇತ್ರದ ಚಿತ್ರವಿರುವ ಅಂಚೆ ಲಕೋಟೆಯನ್ನು ಬಿಡುಗಡೆ ಗೊಳಿಸಲಾಯಿತು.

RELATED ARTICLES  ನಾಳೆ ಕಾಂತಾರ ಚಲನಚಿತ್ರ ವೀಕ್ಷಿಸಲಿದ್ದಾರೆ ಕೋಟಾ ಶ್ರೀನಿವಾಸ ಪೂಜಾರಿ

ಈ ವೇಳೆ ಮಾತನಾಡಿದ ವೀಣಾ ಶ್ರೀನಿವಾಸ ಈ ಅಂಚೆ ಚೀಟಿ ಪ್ರದರ್ಶನದಿಂದ ವಿದ್ಯಾರ್ಥಿಗಳು ಕಲಿಯಬೇಕಾಗಿರುವುದು ಬಹಳ ಇದೆ. ಇತಿಹಾಸವನ್ನು ತಿಳಿಸುವ ಕಾರ್ಯವನ್ನು ಅಂಚೆ ಚೀಟಿಗಳು ಮಾಡುತ್ತವೆ. ಆದ್ದರಿಂದ ಅಂಚೆ ಚೀಟಿಗಳ ಸಂಗ್ರಹ ಮಾಡುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯಸ್ಥರಾದ ಎಸ್,ರವಿಂದ್ರನ್ ಮಾತನಾಡುತ್ತ, ನಾವು ಅಂಚೆ ಚೀಟಿಯನ್ನು ಸಂಗ್ರಹ ಮಾಡುವ ಹವ್ಯಾಸ ಬೆಳಸಿಕೊಂಡರೆ ನಾವು ದೇಶದ ಸಂಸ್ಕ್ರತಿ,ಇತಿಹಾಸ,ಸಂಪ್ರದಾಯ, ದೇಶದ ಮುಖಂಡರ ಬಗ್ಗೆ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದು. ಅಂಚೆ ಚೀಟಿಯಲ್ಲಿರುವುದು ಕೇವಲ ಚಿತ್ರವಲ್ಲ. ಅದು ಅನೇಕ ಉಪಯುಕ್ತ ಮಾಹಿತಿಯನ್ನು ಹೊಂದಿರುತ್ತದೆ ಎಂದರು.

RELATED ARTICLES  ಪ್ರೀ ವೆಡ್ಡಿಂಗ್ ಶೂಟ್ ದೋಣಿಯಿಂದಾದ ಅವಾಂತರ : ಆಯತಪ್ಪಿ ನದಿಗೆ ಬಿದ್ದ ಮಗು.

ಈ ಪ್ರದರ್ಶನದಲ್ಲಿ ದೇಶ ವಿದೇಶಗಳ ಇತಿಹಾಸ.ಸಂಪ್ರದಾಯ ತಿಳಿಸುವ ಅಂಚೆ ಚೀಟಗಳು ಸಾರ್ವಜನಿಕರ ಗಮನಸೆಳದವು. ಈದನ್ನು ನೋಡಲು ತಾಲೂಕಿನ ಅನೇಕ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ್ರು. ಈ ವೇಳೆ ವಿದ್ಯಾರ್ಥಿಗಳು ಅಂಚೆ ಚೀಟಿ ಬಗ್ಗೆ ಮಾಹಿತಿ ಪಡೆದುಕೊಂಡದರು.

ಒಟ್ಟಾರೆ ಅಂಚೆ ಚೀಟಿ ಪ್ರದರ್ಶನ ಸಾರ್ವಜನಿಕರ ಗಮನ ಸಳೆಯುವ ಜೋತೆಗೆ ವಿಶೇಷವಾದ ಒಂದು ಮಾಹಿತಿಯನ್ನು ಒದಗಿಸಿಕೊಟ್ಟಿದೆ.