ಸಾಗರ :ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಶ್ರೀರಾಮಚಂದ್ರಾಪುರ ಮಠವನ್ನು ಅಶ್ಲೀಲವಾಗಿ ಹಾಗೂ ಅವಹೇಳನಕಾರಿಯಾಗಿ ಬಿಂಬಿಸಿ ಸಂದೇಶಗಳನ್ನು ಹಾಕುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ .
ಸಾಮಾಜಿಕ ಜಾಲತಾಣದಲ್ಲಿ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀ ಸಂಸ್ಥಾನದ ವಿರುದ್ಧ ಅವಹೇಳನಕಾರಿಯಾದ ಚಿತ್ರಗಳು ಹಾಗೂ ಇತರೆ ಬರಹಗಳನ್ನು ಹಾಕಿ ಶ್ರೀಗಳ ಹಾಗೂ ಶ್ರೀರಾಮಚಂದ್ರಾಪುರ ಮಠದ ತೇಜೋವಧೆಗೆ ಪ್ರಯತ್ನ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ .
ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನ ಸತ್ಯಶೋಧ ಮಿತ್ರಮಂಡಳಿ ಎಂಬ ಗ್ರೂಪ್ ಅಡ್ಮಿನ್ ಆಗಿರುವ ಗಣಪತಿ ಭಟ್ ಜಿಗಳೆಮನೆ ಶ್ರೀರಾಮಚಂದ್ರಾಪುರ ಮಠವನ್ನು ಅಶ್ಲೀಲವಾಗಿ ಬಿಂಬಿಸಿ ರಾಮಚಂದ್ರಾಪುರ ಮಠದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಿತ್ತರಿಸುತ್ತಿದ್ದರು ಎನ್ನಲಾಗಿದೆ . ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಣಪತಿ ಭಟ್ ಜಿಗಳೆಮನೆ ಹಾಗೂ ಇವರ ಜೊತೆಗೆ ನಿರಂಜನ್ ಕುಗ್ವೆ ಬಂಧಿತರಾಗಿದ್ದಾರೆ .ನಿರಂಜನ್ ಕುಗ್ವೆ ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಹಾಗೂ ಶ್ರೀಗಳ ವಿರುದ್ಧ ಅಶ್ಲೀಲ ಫೋಟೋಗಳನ್ನು ತಯಾರಿಸಿ ಪೋಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ .
ಇದೆಲ್ಲವನ್ನು ಗಮನಿಸಿದ ಮಹಿಳೆಯೊಬ್ಬರು ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಸೆಪ್ಟೆಂಬರ್ ಹದಿಮೂರು ರಂದು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಸಾಗರದಲ್ಲಿ ಶನಿವಾರ ಬಂಧಿಸಿದ್ದು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ .