ಪ್ರಸ್ತಕ ಸಾಲಿನ ರಾಷ್ಟ್ರೀಯ ನಗರ ಜೀವನೋಪಾಯ ಮತ್ತು ರಾಜ್ಯ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ನಿಯುಕ್ತಿ ಘಟಕದಡಿ ಕಾರವಾರ ನಗರಸಭೆ ವ್ಯಾಪ್ತಿಯ ಅರ್ಹ ಬಡ ಫಲಾನುಭವಿಗಳಿಂದ ಟ್ಯಾಕ್ಷಿ ಡ್ರೈವರ್, ಡಾಟಾ ಎಂಟ್ರಿ ಆಪರೇಟರ್, ಐ.ಟಿ ಹೆಲ್ಪಡೆಸ್ಕ ಅಟೆಂಡಂಟ್, ಬಯೋಮೆಟ್ರಿಕ್ ಡಾಟಾ ಆಪರೇಟರ್ ತರಬೇತಿಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

RELATED ARTICLES  ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಅಡಿಯಲ್ಲಿ ಶಿರಸಿಯಲ್ಲಿ ನಡೆಯುತ್ತಿದೆ ವಿವಿಧ ಕೋರ್ಸಗಳು.

ಅರ್ಜಿ ಸಲ್ಲಿಸಲು ಜನೇವರಿ 10 ಕೊನೆಯ ದಿನವಾಗಿರುತ್ತದೆ. ಐ.ಟಿ ಹೆಲ್ಪಡೆಸ್ಕ ಅಟೆಂಡಂಟ್ ತರಭೇತಿಗೆ ಪಿ.ಯು.ಸಿ ಮತ್ತು ಟ್ಯಾಕ್ಷಿ ಡ್ರೈವರ್, ಡಾಟಾ ಎಂಟ್ರಿ ಆಪರೇಟರ್, ಬಯೋಮೆಟ್ರಿಕ್ ಡಾಟಾ ಆಪರೇಟರ್ ತರಬೇತಿಗಳಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಆಸಕ್ತ ಅರ್ಜಿದಾರರು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ ಕಾರ್ಡ, ಮತದಾರರ ಗುರುತಿನ ಚೀಟಿ, ವಯಸ್ಸಿನ ದೃಡಿಕರಣ ದಾಖಲೆ ಪತ್ರ, ವಿಧ್ಯಾರ್ಹತೆಯ ಪ್ರಮಾಣ ಪತ್ರ, ಇತ್ತಿಚಿನ ಭಾವಚಿತ್ರದಂತಹ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಗರಸಭೆ ಕಾರ್ಯಾಲಯ ಕಾರವಾರ ಇಲ್ಲಿಗೆ ಕಳುಹಿಸಲು ಕಾರವಾರ ನಗರಸಭೆ ಪೌರಾಯುಕ್ತರು ಕೋರಿದ್ದಾರೆ.

RELATED ARTICLES  ಇಲ್ಲಿದೆ ಉತ್ತಮ ಉದ್ಯೋಗ ಅವಕಾಶ.