ಕೊಪ್ಪಳ : ಎಲುಬಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ,ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಗಂಗಾವತಿ ಪಟ್ಟಣದಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬಡ ಮಕ್ಕಳಿಗೆ ಸೈಕಲ್ ಕೊಟ್ಟರೆ, ಅದು ಮುರುಕಲು ಸೈಕಲ್ ಎಂದು ಹಗುರವಾಗಿ ಮಾತಾನಾಡುತ್ತಾರೆ, ನಾನು ಯಾವುದಕ್ಕೂ ಕಿವಿ ಕೊಡುವುದಿಲ್ಲ.ಮತ್ತೆ ನಾನು ಮುಖ್ಯಮಂತ್ರಿ ಆದ ಮೇಲೆ ಹೆಣ್ಣು ಮಕ್ಕಳಿಗೆ ಲಕ್ಷ್ಮೀ ಸೀರೆ ಕೊಡುತ್ತೇನೆ ಎಂದು ಘೋಷಿಸಿದರು.

ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕಬೇಕು. ಆ ಹಿನ್ನಲೆಯಲ್ಲಿ ಭಾಗ್ಯಲಕ್ಷ್ಮೀ ಯೋಜನೆ ತರಲಾಗಿತ್ತು. ಒಬ್ಬ ಮುಖ್ಯ ಮಂತ್ರಿಯಾಗಿ ಅರಿವೇ ಇಲ್ಲದೇ ಮಾತನಾಡುತ್ತೀರಿ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ನಾನು ಜೈಲಿಗೆ ಹೋಗಿ ಬಂದವನು ಎಂದೆಲ್ಲ ಹೇಳುತ್ತಿರಲ್ಲ. ನೀವೊಬ್ಬ ವಕೀಲರಾಗಿ ತಿಳಿದುಕೊಂಡು ಮಾತಾಡಿ. ನ್ಯಾಯ ಬೆಲೆ ಅಂಗಡಿಗಳ ಮುಂದೆ ಮೋದಿ ಪೋಟೋ ಹಾಕಿ, ಅನ್ನ ಭಾಗ್ಯ ಯೋಜನೆಯಲ್ಲಿ ಕೇಂದ್ರದ ಅನುದಾನವೇ ಹೆಚ್ಚಾಗಿದೆ. ಸಿದ್ದರಾಮಯ್ಯನದ್ದು ರಾಜ್ಯದಲ್ಲಿ ತೊಗಲಕ್ ದರ್ಬಾರ ನಡೆದಿದೆ. ಹರಿದ ಸೀರೆ, ಮುರಿದ ಬೈಸಿಕಲ್ ಮಾತ್ರ ನಾನು ಮಾಡಿದ್ದೇನೆ ಎಂದು ಹೇಳುತ್ತೀರಿ. ಜನ ಹಿತ ಮರೆತು ಸರ್ಕಾರದ ಖಜಾನೆ ಲೂಟಿ ಮಾಡುತ್ತಿದ್ದಾರೆ ಎಂದು ಮಾತಿನಲ್ಲೇ ಚಾಟಿ ಬೀಸಿದರು.

RELATED ARTICLES  ಮಹಾರಾಷ್ಟ್ರದ ಪುಲ್ ಗಾಂವ್ ಸೇನಾ ಡಿಪೋದಲ್ಲಿ ಸ್ಫೋಟ ಪ್ರಕರಣ: ಸ್ಥಳದಲ್ಲೇ ನಾಲ್ವರ ಸಾವು, ಹಲವರಿಗೆ ಗಾಯ.

ಗುಜರಾತ್ ಹಾಗೂ ಹಿಮಾಚಲ್ ಪ್ರದೇಶ ಚುನಾವಣಾ ರಿಸಲ್ಟ್ ಬಂದ ಮೇಲೆ ಅಚ್ಛೆದಿನ ಬರುತ್ತೆ.100 ದಿನದ ಬಳಿಕ ಸಿದ್ದರಾಮಯ್ಯ ಮನೆಗೆ ಹೋಗಿ ಕುಂತ ಬಳಿಕ ಬರುತ್ತೆ ಅಚ್ಛೆದಿನ ಎಂದು ಲೇವಡಿ ಮಾಡುತ್ತೀರಾ ? ಸಿದ್ದರಾಮಯ್ಯ ಒಬ್ಬ ಬಚ್ಚಾ, ನಿನ್ನನ್ನು ಕಂಡರೆ ಮೋದಿಜಿಗೆ ಯಾವುದೇ ಭಯವಿಲ್ಲ. ರಾಜ್ಯದಲ್ಲಿ 20 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇದರ ಕುರಿತು ತನಿಖೆಯಾಗಿಲ್ಲ ಎಂದು ಆರೋಪ ಮಾಡಿದರು.

RELATED ARTICLES  ಉತ್ತರಕನ್ನಡದಲ್ಲಿ ಇಂದು 43 ಕೊರೋನಾ ಪಾಸಿಟೀವ್.

ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ವಿನಯಕುಲಕರ್ಣಿ ಕೈವಾಡ ಇದೆ ಎಂಬ ಆರೋಪ ಇತ್ತು. ಈಗ ಅದನ್ನು ಮುಚ್ಚಿ ಹಾಕಲು ಯೋಗೀಶ್ ಗೌಡನ ಹೆಂಡತಿಗೆ ಬೆಂಗಳೂರಿಗೆ ಕರೆದು ಕೊಂಡು ಹೋಗಿದ್ದೀರಾ. ರಾಯರೆಡ್ಡಿ ಬೆಂಬಲಿಗ ವೀರಭದ್ರ ಎಂಬಾತ ಅನಧೀಕೃತವಾಗಿ ಅಕ್ಕಿ ಸಾಗಿಸುತ್ತಿದ್ದ 25 ಕ್ವಿಂಟಾಲ್. ಇದೇ 13 ರಂದು ನಮ್ಮ ಪೊಲಿಸರು ಆ ವಾಹನವನ್ನು ಹಿಡಿದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಸೂಕ್ತ ಅಭ್ಯರ್ಥಿಯನ್ನು ಗಂಗಾವತಿಯಲ್ಲಿ ಕಣಕ್ಕಿಳಿಸುತ್ತೇವೆ. ಅವರನ್ನು ಗೆಲ್ಲಿಸಿ ಬಿಜೆಪಿಗೆ ಬಲ ತುಂಬಿ ಎಂದು ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿಕೊಂಡರು.