ಕುಮಟಾ : ತಾಲೂಕಿನ ಬೆಳಕು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಮತ್ತು ಬಿಜೆಪಿ ಮುಖಂಡರಾದ ನಾಗರಾಜ್ ನಾಯಕ ತೊರ್ಕೆ ಕಡಲ ಮಕ್ಕಳೊಂದಿಗೆ ಅಂದರೆ ಮೀನುಗಾರರೊಂದಿಗೆ ಕೆಲ ಕಾಲ ಕಳೆದು ಅವರ ಉಭಯ ಕುಶಲೋಪರಿ ವಿಚಾರಿಸಿದರು .

ಗೋಕರ್ಣದ ಕಡಲ ತೀರದಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಅತ್ಯಂತ ಕಷ್ಟ ಹಾಗೂ ಅಪಾಯಕರವಾದ ಕೆಲಸಗಳನ್ನು ಮಾಡುವ ಮೀನುಗಾರಿಕೆಯನ್ನೇ ವೃತ್ತಿಯಾಗಿಸಿಕೊಂಡ ಗೋಕರ್ಣದ ಮೀನುಗಾರರೊಂದಿಗೆ ಅವರು ಕೆಲ ಸಮಯ ಕಳೆದರು . ಕಡಲ ಮಕ್ಕಳೆಂದೇ ಕರೆಯಲ್ಪಡುವ ಮೀನುಗಾರರೊಂದಿಗೆ ಅತ್ಯಂತ ಸಂತೋಷದಿಂದ ಕೆಲ ಸಮಯ ಕಳೆದ ನಾಗರಾಜ ನಾಯಕ ತೊರ್ಕೆ ಪುರಾತನ ಮೀನುಗಾರಿಕಾ ಪದ್ಧತಿ ಹಾಗೂ ಆಧುನಿಕ ವಿದೇಶಿ ನಿರ್ಮಿತ ಬೋಟ್ಗಳೊಂದಿಗೆ ನಡೆಯುವಂತಹ ಮೀನುಗಾರಿಕೆಯ ಕುರಿತು ಮಾಹಿತಿ ಪಡೆದರು .

RELATED ARTICLES  ರಾಜ್ಯ ಪುರಸ್ಕಾರ ಪಡೆದ ಕುಮಟಾ ಪ್ರತಿಭಾನ್ವಿತ ವಿದ್ಯಾರ್ಥಿ ಭಾಸ್ಕರ ಈಶ್ವರ ಮರಾಠಿ

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮೀನುಗಾರಿಕೆಯಲ್ಲಿ ಕೂಡ ಆಧುನಿಕ ವಿದೇಶಿ ನಿರ್ಮಿತ ಬೋಟ್ಗಳೊಂದಿಗೆ ಚಿಕ್ಕಪುಟ್ಟ ಮೀನುಗಾರರು ಸ್ಪರ್ಧೆಗಿಳಿದ ಅನಿವಾರ್ಯತೆ ಉಂಟಾಗಿದ್ದು ಅದು ಕಷ್ಟದ ಸಂಗತಿಯಾಗಿದೆ ಎಂದರು.

ಹೊಸ ಹೊಸ ಅನ್ವೇಷಣೆ ಹಾಗೂ ತಂತ್ರಗಾರಿಕೆಯನ್ನು ಆಧರಿಸಿ ಅನ್ವೇಷಿಸಿ ಪ್ರಸ್ತುತ ಸ್ಪರ್ಧಾಯುಗದಲ್ಲಿ ವಿಜಯಿಯಾಗುವ ಬಗ್ಗೆ ಮೀನುಗಾರರಿಗೆ ಸಲಹೆ ನೀಡಿದರು .

RELATED ARTICLES  ದ್ವಿತೀಯ ಪಿ.ಯು.ಸಿ.ಕಾಮರ್ಸ್ ವಿಭಾಗದಲ್ಲಿ ಗಮನಾರ್ಹ ಸಾಧನೆಗೈದ ಗ್ರಾಮೀಣ ಪ್ರತಿಭೆ ಕಡತೋಕಾ ದ ಎಚ್.ಎಸ್.ವಿಶಾಲ್.

ನಾಗರಾಜ್ ನಾಯಕ ಅವರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ ಕಡಲ ಮಕ್ಕಳಾದ ಮೀನುಗಾರರು ಅವರೊಂದಿಗೆ ಸಂತಸದಿಂದ ಕೆಲ ಸಮಯ ಕಳೆದರು ಎನ್ನಲಾಗಿದೆ .ಮೀನುಗಾರಿಕೆ ಹಾಗೂ ಈಗಿನ ಸ್ಪರ್ಧಾಯುಗದಲ್ಲಿ ನಡೆಯುತ್ತಿರುವ ಪೈಪೋಟಿಗಳ ಕುರಿತು ನಾಗರಾಜ್ ನಾಯಕ ರವರಿಗೆ ಮಾಹಿತಿಗಳನ್ನು ನೀಡಿದ ಮೀನುಗಾರರು ತಮ್ಮ ಕಷ್ಟವನ್ನು ಅವರೊಂದಿಗೆ ಹಂಚಿಕೊಂಡರು .

ಮೀನುಗಾರಿಕೆ ಕುರಿತಾಗಿ ಹಾಗೂ ಮೀನುಗಾರರ ಜೀವನದ ಕುರಿತಾಗಿ ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ ನಾಗರಾಜ್ ನಾಯಕ್ ಅವರೊಂದಿಗೆ ಸದಾ ನಾವು ಇರುವ ಆಶಯ ವ್ಯಕ್ತಪಡಿಸಿದರು .