ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕೆಸರೆರೆಚಾಟ ಜೋರಾಗಿದ್ದು ಮತದಾರರ ಓಲೈಕೆಗೆ ಕಸರತ್ತು ಆರಂಭಿಸಿವೆ. ಕಳೆದ ನಾಲ್ಕೂವರೆ ವರ್ಷದಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ಸದ್ಯ ಆಡಳಿತ ವಿರೋಧಿ ಅಲೆಗೆ ಸಿಲುಕಿ ನಲುಗುತ್ತಿದ್ದು ತಾನು ಮಾಡಿಕೊಂಡ ತಪ್ಪಿಗೆ ಈಗ ಪಶ್ಚಾತ್ತಾಪ ಪಡುವಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಾಂಗ್ರೆಸ್ ತಾನು ಜಾತ್ಯಾತೀತ ಪಕ್ಷ ಎಂದು ಹೇಳಿಕೊಂಡು ಬಂದರು ಕೂಡ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಾರಿಗೆ ತಂದ ಯೋಜನೆಗಳೇ ಪಕ್ಷಕ್ಕೆ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಿಜೆಪಿ ಮೂರನೆಯ ಸ್ಥಾನಕ್ಕೆ ಕುಸಿದು ವಿರೋಧ ಪಕ್ಷ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಆದರೆ ಆ ವಿಫಲತೆಯನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ಎಡವಿದ್ದು ಒಂದು ಸಮುದಾಯದ ಕೆಂಗಣ್ಣಿಗೆ ಗುರಿಯಾಗಿ ಮುಂದಿನ ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳುವ ಭರವಸೆ ಕೂಡ ಇಲ್ಲದ ಸ್ಥಿತಿಗೆ ತಲುಪಿದ್ದು ಬಹುಶಃ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದ ಸಿದ್ದರಾಮಯ್ಯ ನವರೆ ಇದಕ್ಕೆ ಕಾರಣ ಎಂಬ ಮಾತು ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿರುವ ಹೊತ್ತಿನಲ್ಲಿ ಸಿದ್ದರಾಮಯ್ಯರವರಿಗೆ ಮತ್ತೊಂದು ಬರ ಸಿಡಿಲು ಬಂಡಿದಂತಾಗಿದೆ.
ಹೌದು ಕರ್ನಾಟಕದ ಡೈನಾಮಿಕ್ ರಾಜಕಾರಣಿ, ರೈತನ ಮಗ ಎಂಬ ಬಿರುದು ಪಡೆದು ರೈತ ಪರ ಬಜೆಟ್ ಮಂಡನೆ ಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಒಳಗಿನ ಭಿನ್ನಮತಕ್ಕೆ ಪಕ್ಷ ಬಿಟ್ಟು ಮತ್ತೆ ಬಿಜೆಪಿ ಸೇರ್ಪಡೆಗೊಂಡ ಬಳಿಕ ಕಾಂಗ್ರೆಸ್ ಅವರನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಇದಕ್ಕೆ ಕಾರಣ ಯಡಿಯೂರಪ್ಪ ಹಿಂದೆ ಪಕ್ಷದಲ್ಲಿ ಇದ್ದ ಹಿಡಿತ ಹಾಗೂ ಅವರ ಮೇಲೆ ಇದ್ದ ಆರೋಪಗಳು ಕೂಡ ಕಾರಣ.
ಬಿಜೆಪಿ ಬಾದ್ ಶಾ ಮುಂದಿನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಎಂದು ಗಂಟಾಘೋಷವಾಗಿ ಘೋಷಿಸಿದರು ಕೂಡ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್ ಕಳೆದ ಆರು ತಿಂಗಳಿನಿಂದ ಮಾತ್ರ ನಿದ್ದೆ ಬಿಟ್ಟು ಕೆಲಸ ಮಾಡುವಂತಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಆದರು ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನದ ಹೊಗೆ ಆಡುತ್ತಿತ್ತು ಇಂತಹ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯೋಗಕ್ಕೆ ಕೈ ಹಾಕಿದ ಚಾಣಕ್ಯ ಅಮಿತ್ ಷಾ ತನ್ನ ಖಡಕ್ ಮಾತಿನ ಮೂಲಕವೇ ಲೋಕಸಭಾ ಚುನಾವಣೆ ಗೆದ್ದ ರಾಷ್ಟ್ರೀಯ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಅನಂತ್ ಕುಮಾರ್ ಹೆಗಡೆಯವರನ್ನು ಮೋದಿ ಸಂಪುಟಕ್ಕೆ ಸೇರಿಸುವ ಮುಖೇನ ಕರ್ನಾಟಕ ಬಿಜೆಪಿ ನಾಯಕರ ಹುಬ್ಬೇರುವಂತೆ ಮಾಡಿದರು.
ಬಹುಶಃ ಇಷ್ಟು ಆದರೆ ಕಾಂಗ್ರೆಸ್ ಯಾವುದೇ ರೀತಿಯಲ್ಲಿ ಹೆದರುವ ಪ್ರಶ್ನೆ ಇರಲಿಲ್ಲ ಎಂದು ಅವರನ್ನು ರಾಜ್ಯ ರಾಜಕಾರಣಕ್ಕೆ ಸಕ್ರಿಯವಾಗಬೇಕು ಎಂಬ ಆಜ್ಞೆ ಕೈ ಸೇರಿತ್ತು ಅಂದಿನಿಂದ ಕಾಂಗ್ರೆಸ್ ತನ್ನ ನಿದ್ದೆಯನ್ನು ಕಳೆದುಕೊಂಡಿದೆ.
ಯಸ್ ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಪಾಲಿಗೆ ದೊಡ್ಡ ವಿರೋಧ ಪಕ್ಷವಾಗಿ ಕರುನಾಡಿನ ಬೆಂಕಿ ಚೆಂಡು, ಕರ್ನಾಟಕದ ಯೋಗಿ, ಹಿಂದು ಫೈಯರ್ ಬ್ರಾಂಡ್ ಬಿರುದು ಖ್ಯಾತಿಯ ಅನಂತ್ ಕುಮಾರ್ ಹೆಗ್ಡೆ ಹೊರ ಹೊಮ್ಮಿದ್ದಾರೆ.
ಈ ಬಾರಿ ನಡೆದ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಹಾಕಬೇಡಿ ಎಂದು ಗಂಟಾಘೋಷವಾಗಿ ಸಿದ್ದರಾಮಯ್ಯ ಸರಕಾರಕ್ಕೆ ಎಚ್ಚರಿಕೆ ಕೊಟ್ಟ ಹೆಗಡೆ ಒಂದು ವೇಳೆ ನನ್ನ ಹೆಸರು ಹಾಕಿದಲ್ಲಿ ಅದೇ ಸಭೆಯಲ್ಲಿ ಟಿಪ್ಪುವಿನ ಮಾನ ಹರಾಜು ಹಾಕುತ್ತೇನೆ ಎಂಬ ಎಚ್ಚರಿಕೆ ನೀಡುವ ಮುಖೇನ ರಾಜ್ಯ ರಾಜಕಾರಣಕ್ಕೆ ನೇರವಾಗಿ ಧುಮುಕಿದರು. ಹೆಗ್ಡೆ ಅವರ ಈ ನಿರ್ಧಾರ ಕಂಡು ಸ್ವತಃ ಅಮಿತ್ ಷಾ ಒಂದು ಕ್ಷಣ ಬೆರಗಾಗಿದ್ದಾರೆ ಎನ್ನಲಾಗಿದೆ.
ರಾಜ್ಯ ರಾಜಕಾರಣಕ್ಕೆ ಯೋಗಿಯಂತಹ ಫೈಯರ್ ಬ್ರಾಂಡ್ ನಾಯಕನ ಹುಡುಕಾಟದಲ್ಲಿ ಇದ್ದ ಅಮಿತ್ ಷಾ ಗೆ ಅನಂತ್ ಕುಮಾರ್ ಹೆಗ್ಡೆ ಕೊಟ್ಟ ಈ ಎಚ್ಚರಿಕೆ ಕರ್ನಾಟಕದ ಬಿಜೆಪಿ ರಾಜಕಾರಣದ ದಿಕ್ಕನ್ನೆ ಬದಲಿಸಿ ಬಿಟ್ಟಿತ್ತು . ಈ ಮೂಲಕ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಬೆಂಕಿ ಚೆಂಡು ಈಗ ಹೋದ ಕಡೆಗಳಲ್ಲಿ ಯುವ ಪಡೆಯೆ ಸಾಗರೋಪಾದಿಯಲ್ಲಿ ಇವರ ಹಿಂದೆ ಸಾಗಿ ಬರುತ್ತಿದ್ದು ಭಾಗವಹಿಸುವ ಸಭೆಗಳಲ್ಲಿ ನೇರವಾಗಿ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸುವ ಮುಖೇನ ಕಾಂಗ್ರೆಸ್ ನಿದ್ದೆಯನ್ನೆ ಕದ್ದಿದ್ದಾರೆ.