ಬೆಂಗಳೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ನೀಡಲಾಗುತ್ತಿರುವ ಸವಲತ್ತು ಪಡೆಯಲು ಫಲಾನುಭವಿಗಳಿಗೆ ಆಗುತ್ತಿರುವ ವಿಳಂಬ ಮತ್ತು ಭ್ರಷ್ಟಾಚಾರ ತಡೆಯಲು ಆನ್‍ಲೈನ್ ವ್ಯವಸ್ಥೆಯನ್ನು ನಿಗಮ ಜಾರಿಗೆ ತಂದಿದೆ ಎಂದು, ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ಅನಗತ್ಯ ವಿಳಂಬ ತಪ್ಪಿಸಲು ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ಯೋಜನೆಗಳ ಮಂಜೂರಾತಿ, ಫಲಾನುಭವಿಗಳಿಗೆ ನೇರವಾಗಿ ಹಣ ಜಮಾವಣೆ ಹಾಗೂ ಫಲಾನುಭವಿಗಳಿಗೆ ಎಲ್ಲಾ ಹಂತದಲ್ಲೂ ಮಾಹಿತಿ ನೀಡುವ ಪಾರದರ್ಶಕದ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಯೋಜನೆಗಳ ಮಂಜೂರಾತಿ, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾವಣೆ ಮತ್ತು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

RELATED ARTICLES  ದಿನಾಂಕ 18/06/2019ರ ದಿನ ಭವಿಷ್ಯ ಇಲ್ಲಿದೆ.

ಅಷ್ಟೇ ಅಲ್ಲ ಇಲಾಖೆಯ ಯೋಜನೆಗಳ ಲಾಭವನ್ನು ಪಡೆದವರೇ ಪಡೆಯುವುದನ್ನು ತಪ್ಪಿಸಲು ಫಲಾನುಭವಿಯ ಆಧಾರ್ ಸಂಖ್ಯೆನ್ನು ಮಂಜೂರಾತಿ ಯೋಜನೆಗಳಿಗೆ ಜೋಡಿಸುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದರು. ನಿಗಮದ ವತಿಯಿಂದ ಯೋಜನೆಗಳ ಫಲಾನುಭವಿಗಳು ಶಾಸಕರ ಕಚೇರಿ, ಜಿಲ್ಲಾ ಕಚೇರಿ, ಬ್ಯಾಂಕ್ ಹಾಗೂ ಕೇಂದ್ರ ಕಚೇರಿಗೆ ಪದೇ ಪದೇ ಅಲೆದಾಡಬೇಕಾದ ಸ್ಥಿತಿ ಇದೆ. ಇದರಿಂದ ಫಲಾಪೇಕ್ಷಿಗೆ ಸಾಕಷ್ಟು ತೊಂದರೆ ಹಾಗೂ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಆನ್‍ಲೈನ್ ವ್ಯವಸ್ಥೆಯ ಪಾರದರ್ಶಕ ಮಾಹಿತಿ ನೀಡುವ ಕ್ರಮ ಕೈಗೊಂಡಿದೆ. ಜಿಲ್ಲಾ ಕಚೇರಿಯ ಯೋಜನೆಗಳ ಅನುಷ್ಠಾನ ಮಾಹಿತಿಯನ್ನು ಕಂಪ್ಯೂಟರೀಕರಣ ಗೊಳಿಸಿರುವುದರಿಂದ ಪ್ರಗತಿ ಪರಿಶೀಲನೆ ಹಾಗೂ ಅನುಷ್ಠಾನಗೊಳಿಸುವುದಕ್ಕೆ ನೆರವಾಗುತ್ತದೆ.

RELATED ARTICLES  ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್ ಗೆ 2 ರುಪಾಯಿ ಕಡಿತ

ಬ್ಯಾಂಕ್‍ನಿಂದ ಸಾಲ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಯಾವ ಬ್ಯಾಂಕ್‍ನಲ್ಲಿ ಎಷ್ಟು ದಿನ ಸಾಲ ಮಂಜೂರು ಮಾಡಲು ತಡವಾಗಿದೆ ಮತ್ತು ಏಕೆ ಮಂಜೂರು ಮಾಡಿಲ್ಲ ಎಂಬ ಮಾಹಿತಿಯೂ ಈ ವ್ಯವಸ್ಥೆ ಮೂಲಕ ತಿಳಿಯಬಹುದಾಗಿದೆ. ಫಲಾನುಭವಿ ಅರ್ಜಿಯನ್ನು ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ಮಾಡಿ, ಹಣ ಬಿಡುಗಡೆಗೆ ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ಆನ್‍ಲೈನ್ ಮೂಲಕ ಕಳುಹಿಸಿಕೊಡಲಾಗುವುದು. ಬ್ಯಾಂಕ್‍ಗಳು ಆಧಾರ್ ನಂಬರ್ ಮೂಲಕ ಅರ್ಜಿದಾರರ ಸೀಡಿಂಗ್ ಪರಿಶೀಲಿಸಿ, 24 ಗಂಟೆಯೊಳಗಾಗಿ ಸಂಬಂಧಪಟ್ಟವರ ಬ್ಯಾಂಕ್‍ಗೆ ಹಣ ಪಾವತಿಯಾಗಲಿದೆ ಎಂದರು.