ಈ 30ನೇ ವರ್ಷದ ಆಚರಣೆಯ 2017-18ರ “ಶ್ರೀ ಮಕರಜ್ಯೋತಿ ಪ್ರಶಸ್ತಿ” ಪುರಸ್ಕೃತರು
1.ಶ್ರೀ ವಿನೋದ ಭಟ್ಟ, ಗುಡೇಅಂಗಡಿ (ಭೂಗರ್ಭ ಶಾಸ್ತ್ರ ವಿಜ್ಞಾನಿಗಳು)
2.ಶ್ರೀ ಗೋಪಾಲಕೃಷ್ಣ. ಆಯ್. ನಾಯ್ಕ, ಮಿರ್ಜಾನ
(ಜಾನಪದ ಕಲೆಗಾರಾರು)
3.ನಂದಿನಿ .ಎಂ. ನಾಯ್ಕ, ಮಾಸೂರಕ್ರಾಸ್, ಕುಮಟ
(ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ)
4.ಚಂದನ .ವಿ. ನಾಯ್ಕ, ಹೆಗಡೆ, ಕುಮಟ
(ಪ್ರಸಿದ್ಧ ಕಲಾವಿದರು)
5.ಪವನ ನಾಗಪ್ಪ ಹರಿಕಾಂತ್ರ, ಗುಡೇಅಂಗಡಿ
(ಕರಾಟೆಪಟು)
6.ವಿನಾಯಕ ಬೀರಪ್ಪ ಹರಿಕಾಂತ್ರ, ಗುಡೇಅಂಗಡಿ
(ಕರಾಟೆಪಟು)
ಶ್ರೀ ಅಯ್ಯಪ್ಪ ಭಕ್ತವೃಂದ (ರಿ) ಗುಡೇಅಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ 30ನೇ ವರ್ಷದ ಆಚರಣೆಯ ನಿಮಿತ್ತ ವಿಶೇಷ ಕಾರ್ಯಕ್ರಮಗಳು
ದಿ.26-12-2017 ಮಂಗಳವಾರ, ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ 6:00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ & ಸನ್ನಿಧಾನದ ವತಿಯಿಂದ ನೀಡುತ್ತ ಬಂದಿರುವ “ಶ್ರೀ ಮಕರಜ್ಯೋತಿ ಪ್ರಶಸ್ತಿ” ವಿತರಣೆ. ಮತ್ತು ಶ್ರೀ ಕಾಂಚಿಕಾ ಚಿಣ್ಣರ ಯಕ್ಷಗಾನ ಮಂಡಳಿ ಗುಡೇಅಂಗಡಿ ಇವರಿಂದ ಯಕ್ಷಗಾನ ಪ್ರದರ್ಶನ.
ದಿ.27-12-2017 ಬುಧವಾರ- ಹರಿದಾಸ ಶ್ರೀ ದತ್ತಾತ್ರೇಯ ಜಿ ನಾಯ್ಕ ಊರಕೇರಿ ಇವರಿಂದ “ಹರಿಕೀರ್ತನೆ”
ದಿ.28-12-2017 ಗುರುವಾರ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಕಲ್ಲುಗುಡ್ಡ ಚಿತ್ರಿಗಿ ಇವರಿಂದ ಭಜನಾ ಕಾರ್ಯಕ್ರಮ
ದಿ.29-12-2017 ಶುಕ್ರವಾರ ಶ್ರೀ ಮಕರಜ್ಯೋತಿ ಯಕ್ಷಗಾನ ಮಂಡಳಿ ಮಾದರಿರಸ್ತೆ ಇವರಿಂದ ತಾಳಮದ್ದಲೆ
ದಿ.30-12-2017 ಶನಿವಾರ ಶ್ರೀ ರಾಮನಾಥ ಭಜನಾ ಮಂಡಳಿ ಕಲಭಾಗ ಕುಮಟ ಇವರಿಂದ ಭಜನಾ ಕಾರ್ಯಕ್ರಮ
ದಿ.31-12-2017 ರವಿವಾರ ಶ್ರೀ ಮಹಾಗಣಪತಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ
ದಿ.01-01-2018 ಸೋಮವಾರ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಕಂಡರಕೋಣ ಇವರಿಂದ ಭಜನಾ ಕಾರ್ಯಕ್ರಮ ಮತ್ತು ಬೆಳಿಗ್ಗೆ 11 ಗಂಟೆಗೆ ಶ್ರೀ ಸತ್ಯನಾರಾಯಣ ವ್ರತದ ಕಲಶ ಸ್ಥಾಪಿಸಲಾಗುವುದು ಕಲಶವೊಂದರ ಕಾಣಿಕೆ ರೂ-101 ಮಾತ್ರ, ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಅನ್ನಪೂರ್ಣೇಶ್ವರಿಯ ಪೂಜೆಯೊಂದಿಗೆ ಸರ್ವರಿಗೂ ಅನ್ನದಾನ ಕಾರ್ಯಕ್ರಮ, 8 ಗಂಟೆಯಿಂದ ಸನ್ನಿಧಿಯ ವಿಶೇಷ ಪೂಜೆಯೊಂದಿಗೆ ಮಾಲೆ ಧರಿಸಿದ ಸ್ವಾಮಿಗಳಿಂದ ಕುದಿಯುತ್ತಿರುವ ಎಣ್ಣೆ ಬಂಡಿಗೆ ಕೈಹಾಕಿ ವಡಾ ತೆಗೆಯುವ ಕಾರ್ಯಕ್ರಮ, ತದನಂತರ ದಲ್ಲಿ ಶ್ರೀ ಮಕರಜ್ಯೋತಿ ಯಕ್ಷಗಾನ ಮಂಡಳಿ ಮಾದರಿರಸ್ತೆ ಗುಡೇಅಂಗಡಿ ಮತ್ತು ಅತಿಥಿ ಕಲಾವಿದರಿಂದ ಚಕ್ರಚಂಡಿಕ ಎಂಬ ಸುಂದರ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ, ಬೆಳಗಿನ ಜಾವ 4 ಗಂಟೆಗೆ ಮಾಲೆಧರಿಸಿದ ಸ್ವಾಮಿಗಳಿಂದ ಅಗ್ನಿಪ್ರವೇಶ.
ದಿ.07-01-2018 ರವಿವಾರ 9:30ಕ್ಕೆ ಸರಿಯಾಗಿ ಮಾಲೆಧರಿಸಿದ ಸ್ವಾಮಿಗಳ ಇರುಮುರಿ ಕಟ್ಟುವ ಕಾರ್ಯಕ್ರಮ,
ದಿ.08-12-2017 ಸೋಮವಾರ ಮುಂಜಾನೆ ಶುಭಮುಹೂರ್ತದಲ್ಲಿ ಮಾಲೆಧರಿಸಿದ ಸ್ವಾಮಿಗಳ ಶಬರಿಮಲೈ ಯಾತ್ರೆಗೆ ಹೊರಡುವುದು.
ಕಾರಣ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಸ್ವಾಮಿ ಅಯ್ಯಪ್ಪನ ಕೃಪೆಗೆ ಪಾತ್ರರಾಗಬೇಕಾಗಿ ಕೋರುವ
ಶ್ರೀ ಲಕ್ಷ್ಮಣ ಗುರುಸ್ವಾಮಿ ಗುಡೇಅಂಗಡಿ ಹಾಗೂ ಶಿಶ್ಯವೃಂದ
ಶ್ರೀ ಅಯ್ಯಪ್ಪ ಭಕ್ತವೃಂದ (ರಿ) ಗುಡೇಅಂಗಡಿ, ಮಾದರಿರಸ್ತೆ