ಪ.ಪೂ. ಶ್ರೀ ಶ್ರೀ ವೀರಭದ್ರೇಶ್ವರ ಸ್ವಾಮಿಗಳು, ವನಶ್ರೀ ಸಂಸ್ಥಾನಮಠ, ವಿಜಯಪುರ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಕುಮಟಾದ ಹೆಗಡೆಯಲ್ಲಿ ಮನೆ ನಿರ್ಮಾಣದ ಸಂದರ್ಭದಲ್ಲಿ ಅವಘಡ: ಸೆಂಟ್ರಿಂಗ್ ಕೆಲಸಗಾರ ಸಾವು!!

ದೇವಾಲಯದ ಪರವಾಗಿ ಶ್ರೀ ದೇವಾಲಯದಲ್ಲಿ ಗುರುಚರಿತ್ರೆ ಪಾರಾಯಣ ಮಾಡುತ್ತಿರುವ , ಕೇಂದ್ರ ಸರಕಾರದ ನಿವೃತ್ತ ಅಧಿಕಾರಿ ಶ್ರೀ ತ್ರಯಂಬಕ ಪುರುಷೋತ್ತಮ ಕಾಣೆ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು. ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವೇ. ವಿಶ್ವನಾಥ್ ಭಟ್ ಬಾಳೆಹಿತ್ಲುಇವರು ಪೂಜಾ ಕೈಂಕರ್ಯ ನೆರವೇರಿಸಿದರು

RELATED ARTICLES  ದೀನದಯಾಳ ಉಪಾಧ್ಯಾಯ ವಿದ್ಯುತ್ ಯೋಜನೆಗೆ ಹೊನ್ನಾವರದಲ್ಲಿ ಸಿಕ್ಕಿಲ್ಲ ಚಾಲನೆ:ಬಿಜೆಪಿಗರಿಂದ ನಡೆಯಿತು ಪ್ರತಿಭಟನೆ