ಮೊನ್ನೆ ನಡೆದ ಗುಜರಾತ್ ವಿಧಾನ ಸಭಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಸ್ಪಷ್ಟ ಮತಗಳಿಂದ ಬಹುಮತ ಪಡೆಯಲಿದೆ ಎನ್ನುವುದು ಈಗ ನಡೆದ ಚುನಾವಣೆಯಿಂದ ಬಹಿರಂಗಗೊಂಡಿದೆ. ಇನ್ನೂ ಹಲವಾರು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ನರೇಂದ್ರ ಮೋದಿಯವರು ಕಾಂಗ್ರೆಸ್ ಮುಕ್ತ ಕಾಂಗ್ರೆಸ್ ಅಭಿಯಾನದಲ್ಲಿ ತೊಡಗಿದ್ದು, ಒಂದೊಂದೇ ರಾಜ್ಯ ಕಾಂಗ್ರೆಸ್ ಕಪಿಮುಷ್ಠಿಯಿಂದ ಕೈತಪ್ಪುತ್ತಿದೆ. ಇನ್ನು ಸದ್ಯದಲ್ಲಿ ಅನೇಕ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಸದ್ಯ ಎರಡು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ..

ಮುಂದಿನ ದಿನಗಳಲ್ಲಿ ಮಿಜೋರಾಂ ಹಾಗೂ ಮೇಘಾಲಯದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ಇಲ್ಲೂ ಕೂಡಾ ಕೇಸರಿ ಧ್ವಜ ಹಾರಿಸಿ ಕಾಂಗ್ರೆಸ್ ಮುಕ್ತ ಮಾಡಲು ನರೇಂದ್ರ ಮೋದಿ ಕಾರ್ಯಪ್ರವೃತ್ತರಾಗಿದ್ದಾರೆ. ಇಲ್ಲೂ ಕೂಡಾ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿಶಿಷ್ಠವಾದ ತಂತ್ರಗಾರಿಕೆ ಹೆಣೆದಿದ್ದು, ಕಾಂಗ್ರೆಸ್‍ಗೆ ನಡುಕ ಹುಟ್ಟಿಸಿದೆ. ಒಂದೊಂದೇ ರಾಜ್ಯಗಳು ಕಾಂಗ್ರೆಸ್‍ನಿಂದ ಕೈತಪ್ಪುತ್ತಾ ಹೋಗುತ್ತಿದ್ದು, ಒಂದು ವೇಳೆ ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದ್ದೇ ಆದರೆ ಕಾಂಗ್ರೆಸ್‍ಗೆ ದೊಡ್ಡ ಮಟ್ಟದ ಹೊಡೆತ ಬೀಳಲಿದ್ದು, ಕಾಂಗ್ರೆಸ್‍ನ ನವನಾಯಕ ರಾಹುಲ್ ಗಾಂಧಿ ವರ್ಚಸ್ಸು ಕಳೆದುಕೊಳ್ಳಲಿದ್ದಾರೆ. ಭಾರತದ ಈಶಾನ್ಯ ರಾಜ್ಯಗಳಾದ ಮಿಜೊರಾಂ ಹಾಗೂ ಮೆಘಾಲಯದಲ್ಲಿ ಕೇಸರಿ ಧ್ವಜ ಹಾರಿಸುವುದು ಮೋದಿಗೆ ಸವಾಲಿನ ಕೆಲಸವಾಗಿದ್ದು, ಆದರೂ ಕೂಡಾ ಇಲ್ಲಿ ಮೋದಿ ಮಾಡುವುದರಲ್ಲಿ ಎರಡು ಮಾತಿಲ್ಲ.

ಹಾಗೆ ನೋಡಿದರೆ ಮೆಘಾಲಯ ಹಾಗೂ ಮಿಜೋರಾಂ ರಾಜ್ಯಗಳ ಚುನಾವಣೆ ಅಷ್ಟು ಪ್ರತಿಷ್ಠೆಯ ಕಣವಲ್ಲ. ಆದರೂ ಈ ರಾಜ್ಯಗಳಲ್ಲಿ ಕೇಸರಿ ಧ್ವಜ ಹಾರಿಸಲು ನರೇಂದ್ರ ಮೋದಿ ಇಲ್ಲಿನ ಚುನಾವಣೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಇಲ್ಲೂ ಕಮಲ ಅರಳಲಿದೆ ಎನ್ನುವುದಕ್ಕೆ ಈಗಾಗಲೇ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ, ಮಣಿಪುರ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಕೇಸರಿ ಧ್ವಜ ಹಾರಿಯಾಗಿದೆ. ಅದಕ್ಕಾಗಿ ಈ ಎರಡೂ ರಾಜ್ಯಗಳನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಬಿಜೆಪಿ ಎದುರು ನೋಡುತ್ತಿದೆ.

RELATED ARTICLES  ಉತ್ತಮ ಭವಿಷ್ಯಕ್ಕೆ ಇತಿಹಾಸದ ಅರಿವು ಅಗತ್ಯ : ವಿದ್ವಾನ್ ಜಗದೀಶ ಶರ್ಮಾ

ಹಾಗೆ ನೋಡಿದರೆ ಮೆಘಾಲಯ ಹಾಗೂ ಮಿಜೋರಾಂ ರಾಜ್ಯಗಳ ಚುನಾವಣೆ ಅಷ್ಟು ಪ್ರತಿಷ್ಠೆಯ ಕಣವಲ್ಲ. ಆದರೂ ಈ ರಾಜ್ಯಗಳಲ್ಲಿ ಕೇಸರಿ ಧ್ವಜ ಹಾರಿಸಲು ನರೇಂದ್ರ ಮೋದಿ ಇಲ್ಲಿನ ಚುನಾವಣೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಇಲ್ಲೂ ಕಮಲ ಅರಳಲಿದೆ ಎನ್ನುವುದಕ್ಕೆ ಈಗಾಗಲೇ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ, ಮಣಿಪುರ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಕೇಸರಿ ಧ್ವಜ ಹಾರಿಯಾಗಿದೆ. ಅದಕ್ಕಾಗಿ ಈ ಎರಡೂ ರಾಜ್ಯಗಳನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಬಿಜೆಪಿ ಎದುರು ನೋಡುತ್ತಿದೆ.

ತ್ರಿಪುರಾವನ್ನು ಹೊರತುಪಡಿಸಿದರೆ ಮಿಜೋರಾಂ, ಮೆಘಾಲಯ ಹಾಗೂ ನಾಗಾಲ್ಯಾಂಡ್‍ನಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲಿ ಗೆಲ್ಲುವುದು ಬಿಜೆಪಿಗೆ ಸವಾಲಿನ ಕೆಲಸ ಎನ್ನಲಾಗುತ್ತಿದೆ. ಆದರೆ ಮೋದಿಯ ತಂತ್ರಗಾರಿಕೆ ವಿಶಿಷ್ಠವಾಗಿದ್ದು, ಇಲ್ಲಿ ಗೆಲ್ಲಲೇಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ. ಈ ರಾಜ್ಯಗಳು ಗಡಿಭಾಗದಲ್ಲಿರುವುದರಿಂದ ಇಲ್ಲಿ ಉಗ್ರರ ಒಳನುಸುಳುವಿಕೆ ಹೆಚ್ಚಾಗಿತ್ತು. ಆದರೆ ಬಂಡುಕೋರರನ್ನು ಮೋದಿ ಸರಕಾರ ಸರಿಯಾಗಿ ಮಟ್ಟ ಹಾಕಿರುವುದರಿಂದ ಅಲ್ಲಿನ ಜನತೆಗೆ ಬಿಜೆಪಿಯ ಬಗ್ಗೆ ಹಿತವಾದ ಭಾವನೆ ಮೂಡಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿದ ಬಿಜೆಪಿ ಅಲ್ಲಿ ಕೇಸರಿ ಧ್ವಜ ಹಾರಿಸಲು ವಿಶೇಷ ಪರಿಶ್ರಮ ಪಡಲು ಮುಂದಾಗಿದೆ. ಇನ್ನೊಂದು ಸಮಸ್ಯೆಯೆಂದರೆ ಇಲ್ಲಿನ ಜನತೆ ಗೋಮಾಂಸ ಪ್ರಿಯರಾಗಿದ್ದು, ಆದರೆ ಕೇಂದ್ರ ಸರಕಾರ ಗೋಮಾಂಸ ನಿಷೇಧ ನಿರ್ಧಾರ ಕೈಗೊಂಡಿರುವುದಕ್ಕೆ ಇಲ್ಲಿನವರು ಪ್ರತಿಭಟನೆ ನಡೆಸಿದ್ದರು. ಆದರೆ ಇದು ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ಎನ್ನುವುದು ಆಮೇಲೆ ಬೆಳಕಿಗೆ ಬಂದಿತ್ತು.

ಕಾಂಗ್ರೆಸ್‍ನಲ್ಲಿ ವಂಶಾಡಳಿತ ಇರುವುದರಿಂದ ಕಾಂಗ್ರೆಸ್‍ನ ಹಿರಿಯ ಮುಖಂಡರಿಗೆ ಬೇಸರ ಮೂಡಿದೆ. ಇಂಥದ್ದೇ ಘಟನೆ ಇತ್ತೀಚೆಗೆ ಮೆಘಾಲಲಯದಲ್ಲೂ ನಡೆದಿದೆ. ಯಾಕೆಂದರೆ ಮೆಘಾಲಯದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡರು ಪಕ್ಷ ತೊರೆದಿದ್ದು, ಕಾಂಗ್ರೆಸ್‍ನ ಬಲ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ 60 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಭರವಸೆ ಇದೆ. ಒಂದು ವೇಳೆ ಬಹುಮತ ಬರದಿದ್ದರೂ ಮೈತ್ರಿ ಸರ್ಕಾರದ ಮೂಲಕವಾದರೂ ಅಧಿಕಾರ ಪಡೆಯಬೇಕು ಎಂಬುದು ಬಿಜೆಪಿ ಗುರಿಯಾಗಿದೆ. ಈ ರಾಜ್ಯದಲ್ಲಿ ಸ್ಥಳೀಯ ಪಕ್ಷಗಳಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಹಾಗೂ ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿ ಇದ್ದರೂ ಈವರೆಗೂ ಬಿಜೆಪಿ ಯಾವುದೇ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿಲ್ಲ. ಸದ್ಯ ಅಲ್ಲಿನ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಮೋದಿ ಅವರ ಭೇಟಿ ನಂತರ ಇಬ್ಬರು ಪಕ್ಷೇತರರು ಹಾಗೂ ಕಾಂಗ್ರೆಸ್ ಮತ್ತು ಎನ್‍ಸಿಪಿ ಪಕ್ಷದಿಂದ ತಲಾ ಒಬ್ಬರು ಹಾಲಿ ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ. ಈ ರೀತಿ ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ಚುನಾವಣ ತಂತ್ರಗಾರಿಕೆ ಆರಂಭಿಸಿದ್ದು, ಈಶಾನ್ಯ ಭಾಗವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವತ್ತ ಗಮನ ಹರಿಸಿದೆ.

RELATED ARTICLES  ಹೊನ್ನಾವರ ಮಾಗೋಡಿನ ಬಾಲಕಿಗೆ ಚೂರಿ ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ!

ನೂತನವಾಗಿ ಕಾಂಗ್ರೆಸ್ ಅಧ್ಯಕ್ಷನಾಗಿರುವ ರಾಹುಲ್ ಗಾಂಧಿಗೆ ಮಿಜೋರಾಂ, ಮೆಘಾಲಯ ಹಾಗೂ ನಾಗಾಲ್ಯಾಂಡ್ ಚುನಾವಣೆ ಪ್ರತಿಷ್ಠೆಯ ವಿಚಾರವಾಗಲಿದೆ. ರಾಹುಲ್ ಗಾಂಧಿಯಿಂದ ಅಲ್ಲಿ ಕಾಂಗ್ರೆಸ್ ಗೆದ್ದುಕೊಂಡಿದೆ ಎನ್ನವುದುನ್ನು ತೋರಿಸಿಕೊಡಲು ಈ ಚುನಾವಣೆ ಪ್ರತಿಷ್ಠೆಯ ವಿಚಾರವಾಗಲಿದೆ. ಒಂದು ವೇಳೆ ಹೀನಾಯವಾಗಿ ಸೋತರೆ ರಾಹುಲ್ ಪ್ರತಿಷ್ಠೆ ಮಂಕಾಗಲಿದೆ. ಅಲ್ಲದೆ ಮುಂದಿನ ವರ್ಷ ಕರ್ನಾಟಕದಲ್ಲೂ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಇದೂ ಕೂಡಾ ರಾಹುಲ್‍ಗೆ ಪ್ರತಿಷ್ಠೆಯ ಕಣವಾಗಿದೆ. ಯಾಕೆಂದರೆ ಕರ್ನಾಟಕದಲ್ಲಿ ಹಲವಾರು ಬಾರಿ ಕಾಂಗ್ರೆಸ್ ಗೆದ್ದಿದ್ದು, ಈ ಬಾರಿ ಗೆಲ್ಲುವುದು ಅನುಮಾನ ಮೂಡಿಸಿದೆ. ಸಿದ್ದರಾಮಯ್ಯನ ಹಿಂದೂವಿರೋಧಿ ಧೋರಣೆಯಿಂದ ಕಾಂಗ್ರೆಸ್ ನೆಲಕಚ್ಚಲಿದ್ದು, ಇದರ ಹೊಡೆತ ನೇರವಾಗಿ ರಾಹುಲ್‍ಗೆ ಬೀಳಲಿದೆ. ಅಲ್ಲದೆ ಕಾಂಗ್ರೆಸ್‍ನಲ್ಲಿ ಹಿರಿಯ ಮುಖಂಡರನ್ನು ಕಡೆಗಣಿಸಿ ಸೋನಿಯಾ ಗಾಂಧಿಯ ಏಕಪಕ್ಷೀಯ ನಿರ್ಧಾರದಿಂದ ರಾಹುಲ್‍ಗೆ ಅಧ್ಯಕ್ಷ ಸ್ಥಾನ ನೀಡಿರುವುದು ಹಿರಿಯ ಕಾಂಗ್ರೆಸಿಗರಿಗೆ ಬೇಸರ ಮೂಡಿಸಿದೆ. ಇದೆಲ್ಲಾ ಕಾಂಗ್ರೆಸ್ ಮುಕ್ತ ಭಾರತಕ್ಕೆ ಸ್ಪಷ್ಟ ಮುನ್ನುಡಿ ಬರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.