ಹಸಿವಿಗೆ ಬಡವ – ಶ್ರೀಮಂತ ಅನ್ನೋ ಬೇಧ ಭಾವ ಇಲ್ಲ. ಅದಕ್ಕೆ ಎಲ್ಲರೂ ಒಂದೇ. ಆದರೆ ಅದೇ ಹಸಿವನ್ನ ಬಂಡವಾಳ ಮಾಡಿಕೊಂಡು, ಜನರನ್ನು ಸುಲಿಗೆ ಮಾಡುತ್ತಿವೆ ಕೆಲವು ಹೋಟೆಲ್ ಗಳು. ಹೌದು, ಒಮ್ಮೆ ಬೆಂಗಳೂರಿನಿಂದ ನಮ್ಮ ಕರಾವಳಿ ಭಾಗಕ್ಕೆ, ಖಾಸಗಿ ಬಸ್ ಗಳಿಗೆ ಬಂದರೆ ನಿಮಗೆ ಈ ಅನುಭವ ಆಗದೇ ಇರಲಿಕ್ಕಿಲ್ಲ. ಬರುವಾಗ ಬಸ್ ನವರು ಕೆಲವು ಹೋಟೆಲ್ ಗಳಲ್ಲಿ ಊಟಕ್ಕೆಂದು ನಿಲ್ಲಿಸುತ್ತಾರೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 12-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಅಬ್ಭಾ!!! ಅದೆಂತಾ ದರಗಳು. ತಿಂಡಿಗಳನ್ನ ನೋಡಿದರೆ ಬಾಯಲ್ಲಿ ನೀರು ಬರೊತ್ತೆ, ಅದರ ದರಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರೊತ್ತೆ. 1ಪ್ಲೇಟ್ ಪೂರಿ ತಗೊಂಡ್ರೆ 60₹. ಆ ಓಂದು ಪ್ಲೇಟ್ ಲಿ ಇರೋದು 3ಪೂರಿ. (ಅದರ ಗಾತ್ರ ಕೇಳಬೇಡಿ, ಅರ್ಥ ಮಾಡಿಕೊಳ್ಳಿ 1ಪ್ಲೇಟ್ ನಲ್ಲಿ ಹಕ್ತಾರೆ). ಆಯಿತು Order ಮಾಡಿದ ನಂತರ, ಮೇಲೆ ನೋಡಿದರೆ ಒಂದು ಊಊಊಊಊದ್ದ Board ಹಾಕಿರ್ತಾರೆ. Self Service (ಸ್ವಸಾಯ ಪದ್ದತಿ) ಅಂತ. ಯಾಂತಾ ಸಾವು ಮಾರಾಯ್ರೆ!!??. ಪೂರಿ ಅಂತಾ ಒಂದು ಉದಾಹರಣೆ ಕೊಟ್ಟಿದ್ದು ಅಷ್ಟೇ. ಎಲ್ಲಾ ತಿಂಡಿಗಳ ದರಗಳೂ ಗಗನಕ್ಕಿದೆ. ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ವಾ? ಎಲ್ಲೋಗಿದ್ದಾರೆ ಸಂಭವಿಸಿದ ಅಧಿಕಾರಿಗಳು? ಇಷ್ಟೊಂದು ಅನ್ಯಾಯ ಕಣ್ಣ ಮುಂದೇ ಇದ್ರೂ, ಕಂಡೂ ಕಾಣದಂತೆ ಇದ್ದಾರೆ. Food Department ಗೆ ಇದು ತಿಳಿದಿಲ್ಲವೇ? ಅಥವಾ ಪ್ರತಿ ತಿಂಗಳು ಅವರಿಗೂ ಪಾಲು ಇದೆಯೆ? ಎಂದು ಜನರು ಗುಸು-ಗುಸು ಮಾತನಾಡಿಕೊಳ್ಳುತ್ತಿದ್ದಾರೆ.

RELATED ARTICLES  ಸಿದ್ದುಗೆ ಕೈ ಕೊಟ್ಟ ಅತೃಪ್ತ ಶಾಸಕರು! ಔತಣ ಕೂಟಕ್ಕೆ ಬಾರದೇ ಸಿದ್ದೂಗೆ ಟಾಂಗ್

IMG 20170606 WA0005