ಮುಂಡಗೋಡ : ತಾಲೂಕಿನ ಪಾಳಾ ಗ್ರಾಮದಲ್ಲಿ ಇತಿಚ್ಚಿಗೆ ಉದ್ಘಾಟನೆಗೊಂಡ ಸಕರಕಾರಿ ಆಸ್ಪತ್ರೆಯ ಕಟ್ಟಡದ ಕಾಮಗಾರಿಯು ಕಳಪೆ ಮಟ್ಟದ್ದಾಗಿದೆ ಈ ಕುರಿತು ಸಂಬಂದ ಪಟ್ಟ ಅಧಿಕಾರಿಗಳು ಮುತುವರ್ಜಿವಹಿಸುವಂತ ಕ್ರಮಕೈಗೊಳ್ಳಬೇಕೆಂದು ತಾಲೂಕ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಕಟ್ಟಡವು ಎಲ್ಲಿಂದರಲ್ಲಿ ಸೋರುತ್ತಿದ್ದು ರೋಗಿಗಳು ಆತಂಕ ಸೃಷ್ಟಿಸುವಂತ ವಾತಾವರಣ ನಿರ್ಮಾಣವಾಗಿದೆ.ಗುತ್ತಿಗೆದಾರ ತನ್ನ ಆದಾಯವನ್ನು ನಿರೀಕ್ಷಿಸಿ ಕಳಪೆ ಕಾಮಗಾರಿ ನಡೆಸಿರಬಹುದು ಎಂದು ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ಸಂಭಂದಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

RELATED ARTICLES  ಹೆಲಿಕ್ಯಾಪ್ಟರ್ ಪತನ : ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ ಹಲವು ಮಂದಿ ಸಾವು

ತಾಲೂಕ ಅಧ್ಯಕ್ಷ ಪಾಂಡುರಂಗ ಪವಾರ, ಪಾಳಾ ಗ್ರಾಮ ಅಧ್ಯಕ್ಷ ದಿಲೀಪ ಆರ್. ಹಿರಾಬಾಯಿ, ಉಪಾಧ್ಯಕ್ಷ ಶರೀಫ ಶಿಗ್ಗಾಂವ, ರವಿ ವಾಲ್ಮೀಕಿ, ಕಿರಣ ದೊಡ್ಮನಿ, ಉದಯ ಅಂಗಡಿ, ಶೇದಿಯಪ್ಪ ಶೇದಿಯಣ್ಣವರ, ಗಣೇಶ ಪೂಜಾರ, ನಾಗರಾಜ ಚಲವಾದಿ,ಸೋಮಣ್ಣ ಕೊರಗರ, ಮಂಜುನಾಥ ಓಣಿಕೇರಿ, ರಿತೇಶ ಸಂಗಯ್ಯನವರ ಸೇರಿದಂತೆ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES  ಎರಡು ಬಂಗಾರ, ಒಂದು ಬೆಳ್ಳಿ ಪದಕ ಪಡೆದ ರಾಜೇಶ್ ಮಡಿವಾಳ