ಮುಂಡಗೋಡ : ಮುಂಡಗೋಡ ತಾಲೂಕಾ ಸಾಹಿತ್ಯ ಪರಿಷತ್ ದಿಂದ ಮಾರಿಕಾಂಬಾ ದೇವಸ್ಥಾನದಲ್ಲಿ ಭಾನುವಾರ ಸಂಜೆ ಕನಕ ನುಡಿನಮನ ಕಾರ್ಯಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾರಿಕಾಂಬಾ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ ಕಾಮತ ಕನ್ನಡವನ್ನು ಭಾಷೆಯನ್ನು ಪ್ರೀತಿಸಿ ಬೆಳಸಿ ಉಳಿಸುವ ಹಾಗೂ ಸ್ವಂತ ಕುಟುಂಬ ಪ್ರೀತಿಸುವಂತೆ ಕನ್ನಡವನ್ನು ಪ್ರೀತಿಸುವ ನಿಟ್ಟಿನಲ್ಲಿ ಸಾಗಬೇಕು ಎಂದರು. ಮುಂಡಗೋಡ ಕಸಪಾ ಅಧ್ಯಕ್ಷರು ತಮ್ಮ ಸ್ವಂತ ಖರ್ಚಿನಿಂದ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘೀನಿಯ ಎಂದರು.
ಮುಂಡಗೋಡ ಹಿರಿಯ ಸಾಹಿತಿ ಚಿದಾನಂದ ಕೋವಿ(ಪಾಟೀಲ) ಕನಕದಾಸರ ಜೀವನ ದರ್ಶನ ಕುರಿತು ಮಾತನಾಡಿದರು. ಕಿರಿಯ ಸಾಹಿತಿ ವಿನಾಯಕ ಪಾಲನಕರ ಕನಕ ಸಾಹಿತ್ಯ ಚಿಂತನ ಕುರಿತು ಮಾತನಾಡಿದರು
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಮಲ್ಲೇಶಪ್ಪ ಅಂತರವಳ್ಳಿ, ಅಂದಾನಪ್ಪ ದೊಡ್ಮನಿ, ಶಾಂತಪ್ಪ ಪಾಟೀಲ,ಬುಜಪ್ಪ ಕಾರಿಗಾರ,ಬಸವಣೆಪ್ಪ ರಾಣಗೇರ, ರಮೇಶ ಕಾಮತ್ ಹಾಗೂ ಪ್ರಕಾಶ ಹುದ್ಲಮನಿಯವರನ್ನು ಸನ್ಮಾನಿಸಲಾಯಿತು.
ಮಲ್ಲೇಶಪ್ಪ ಅಂತರವಳ್ಳಿಯವರನ್ನು ಕಂಬಳ್ಳಿ ಹೊದಿಸಿ ತಂಬೂರಿಯನ್ನು ಕೊಟ್ಟು ವಿಶೇಷವಾಗಿ ಸನ್ಮಾನಿಸಲಾಯಿತು
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಕುರಬ ಸಮಾದ ಅಧ್ಯಕ್ಷ ಪ್ರಕಾಶ ಹುದ್ಲಮನಿ, ಮಳೆಮಹದೇಶ್ವರ ದೇವಸ್ಥಾನದ ಅಧ್ಯಕ್ಷ ರಾಕೇಶ ರಾಯ್ಕರ, ರಾ.ಸ.ನೌ.ಸಂಘದ ಅಧ್ಯಕ್ಷ ಸುಭಾಸ ಡೋರಿ, ನಿವೃತ್ ಶಿಕ್ಷಕ ಎಸ್.ಬಿ.ಹೂಗಾರ ಆಗಮಿಸಿದ್ದರು
ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಲಕ್ಷ್ಮೀಬಾಯಿ ಪಾಟೀಲ, ಬಾಬಣ್ಣ ಸಾಲಗಾವಿ, ದಿನೇಶ ವರ್ಣೇಕರ, ಶ್ರೀಮತಿ ಶೆಟ್ಟಿ ಸೇರಿದಂತೆ ಮುಂತಾವದರು ಇದ್ದರು
ಕಾರ್ಯಕ್ರಮದ ನಿರೂಪಣೆಯನ್ನು ಕಿರಿಯ ಸಾಹಿತಿ ನಿಖಿಲ್ ನೆರವೇರಿಸಿದರು, ವಂದನಾರ್ಪಣೆಯನ್ನು ಕಸಾಪ ಗೌರವ ಕಾರ್ಯದರ್ಶಿ ತುಕಾರಾಮ ಸಾನು ಮಾಡಿದರು