ಕುಮಟಾ: ತಾಲೂಕಿನಲ್ಲಿ ಹಿಂದಿನಂತೆ ಶಾಂತಿಯುತವಾದ ವಾತವರಣವನ್ನು ಪುನರ್‍ನಿರ್ಮಾಣ ಮಾಡುವ ಕುರಿತು ಕುಮಟಾ ತಾಲೂಕಿನ ಸಮಸ್ತ ಹಿಂದೂ ಸಮಾಜದ ಪರವಾಗಿ ಸರಕಾರಕ್ಕೆ ಕುಮಟಾ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು. ಅನೇಕ ಸಾರ್ವಜನಿಕರು ಸೇರಿ ಕುಮಟಾದಲ್ಲಿ ಮನವಿ ಸಲ್ಲಿಸಿದರು.

ಇತ್ತೀಚಿಗೆ ನಡೆದ ಪರೇಶ ಮೇಸ್ತ ಸಾವನ್ನು ಖಂಡಿಸಿ ಡಿಸೆಂಬರ್ 11 ರಂದು ಕರೆನೀಡಿದ್ದ ಕುಮಟಾ ಬಂದ್ ವೇಳೆ ಸಾವಿರಾರು ನಾಗರಿಕರು ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸುತ್ತಿರುವಾಗ ಪೋಲಿಸ್ ಇಲಾಖೆ ಈ ವಿಷಯದ ಸೂಕ್ಷ್ಮತೆಯನ್ನು ಅರಿತು ಸೂಕ್ತ ರಕ್ಷಣೆ ನೀಡಬೇಕಿತ್ತು. ಆದರೆ ಎಲ್ಲೆಡೆ ಬ್ಯಾರಿಕೇಡ್ ಹಾಕಿ, ಬಿಗಿ ಬಂದೋವಸ್ತ್ ಮಾಡಿದ್ದರೂ ಅನ್ಯಕೋಮಿನ ವಾಹನವನ್ನು ಮಧ್ಯೆ ನುಸುಳಲು ಬಿಟ್ಟಿದ್ದೇ ಪರಿಸ್ಥಿತಿ ವಿಕೋಪಕ್ಕೆ ತೆರಳು ಕಾರಣವಾಯ್ತು. ಈ ವೇಳೆ ಆಕಸ್ಮಿಕ ಘಟನೆಗಳು ನಡೆದಿದ್ದು ಈ ಸಂದರ್ಭದಲ್ಲಿ ಪೋಲಿಸ್ ವಾಹನಕ್ಕೂ ಆಕಸ್ಮಿಕ ಬೆಂಕಿ ತಗುಲಿದ್ದು ವಿಷಾದನೀಯವಾಗಿದೆ ಇದರಿಂದಾಗಿ ಕುಮಟಾ ತಾಲೂಕಿನ ಜನತೆ ಭಯದ ವಾತವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕನ್ನಡದ ಜನರು ಶಾಂತಿಪ್ರಿಯರು.. ಕುಮಟಾದಲ್ಲಿ ಶಾಂತಿಯುತ ಪ್ರತಿಭಟನೆ ಅಹಿತಕರ ಘಟನೆಯಾಗಿ ಪರಿವರ್ತಿತಗೊಂಡಿದ್ದನ್ನು ನಾವು ಖಂಡಿಸುತ್ತೇವೆ, ಹೊನ್ನಾವರದಲ್ಲಿ ನಡೆದಂತಹ ಪರೇಶ ಮೇಸ್ತರವರ ಅಸಹಜ ಸಾವನ್ನು , ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರುವುದಕ್ಕೆ ಮುಂಚೆಯೇ ಪೋಲಿಸ್ ಅಧಿಕಾರಿಗಳು ಸಹಜ ಸಾವೆಂದು ಕೊಟ್ಟ ಹೇಳಿಕೆಯ ಕಾರಣದಿಂದಾಗಿಯೆ ಇಷ್ಟೆಲ್ಲಾ ಅಹಿತಕರ ಘಟನೆಗಳು ನಡೆಯಲು ಕಾರಣ, ಈ ಘಟನೆಯೇ ಅಮಾಯಕ ಯುವಕರನ್ನು ರೊಚ್ಚಿಗೆಬ್ಬಿಸಿ ಇಷ್ಟೆಲ್ಲಾ ಆವಾಂತರಕ್ಕೆ ಮುನ್ನುಡಿ ಬರೆಯಿತು..ಅದರೆ..ಅದರ ನಂತರ ಅಗುತ್ತಿರುವ ಬೆಳವಣಿಗೆ ಮತ್ತೂ ಖಂಡನಾರ್ಹ, ಪೋಲಿಸ್ ಇಲಾಖೆಯವರು ಜಿದ್ದಿಗೆ ಬಿದ್ದವರಂತೆ ಕಂಡಕಂಡವರನ್ನು ಹಗಲು ರಾತ್ರಿ ಎನ್ನುವದನ್ನು ನೋಡದೇ ಮನೆ ಮನೆಗೆ ನುಗ್ಗಿ ಅರೆಸ್ಟ್ ಮಾಡುತ್ತಿದ್ದಾರೆ, ದಿನಗೂಲಿ ಮಾಡಿ ಬದುಕುತ್ತಿರುವ ಯುವಕರು ಹೆದರಿಕೆಯಿಂದ ಊರು ಬಿಟ್ಟಿದ್ದಾರೆ, ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಭಾವನಾತ್ಮಕವಾಗಿ ಸಂದೇಶ ಹರಿಯಬಿಟ್ಟ ಕೆಲವು ಕಾಲೇಜು ವಿಧ್ಯಾರ್ಥಿಗಳ ಮೇಲೂ ಕೇಸನ್ನು ದಾಖಲಿಸಿ ಅರೆಸ್ಟ್ ಮಾಡುತ್ತಿದ್ದಾರೆ, ಎಷ್ಟೋ ಕುಟುಂಬಗಳಿಗೆ ತಮ್ಮ ಮನೆಯ ಮಕ್ಕಳು ಏನಾಗಿದ್ದಾರೆ?, ಯಾವ ಜೈಲಿನಲ್ಲಿದ್ದಾರೆ? ಅವರನ್ನು ಹೇಗೆ ಸಂಪರ್ಕಿಸಬೇಕು?ಎನ್ನುವ ಚಿಕ್ಕ ಮಾಹಿತಿ ಕೂಡ ಇಲ್ಲದೇ ಪರಿತಪಿಸುತ್ತಿದ್ದಾರೆ, ಮಕ್ಕಳು ತಿರುಗಿ ಮನೆಗೆ ಬರುತ್ತಾರೋ? ಇಲ್ಲವೋ ಎನ್ನುವ ಆತಂಕದಿಂದ ದಿನಗಳನ್ನು ಎಣಿಸುತ್ತಿದ್ದಾರೆ, ಭಯದ ನೆರಳಲ್ಲಿ ಬದುಕುತ್ತಿದ್ದಾರೆ, ಅದೆಷ್ಟೋ ಪಾಲಕರು ಚಿಂತೆಯಿಂದ ಹಾಸಿಗೆ ಹಿಡಿದಿದ್ದಾರೆ, ಈ ಕೂಡಲೇ ಪೋಲಿಸ್ ಇಲಾಖೆಯವರು, ಈ ಜಿದ್ದಾ ಜಿದ್ದಿನ ಕಾರ್ಯವನ್ನು ಬಿಟ್ಟು, ಉಂಟಾಗಿರುವ ಭಯದ ವಾತಾವರಣವನ್ನು ದೂರಗೊಳಿಸಿ, ಶಾಂತಿಯುತ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES  ರೈಸ್ ಮಿಲ್‌ವೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ

ಪರಿಸ್ಥಿತಿ ಹೀಗಿರುವಾಗ ರಕ್ಷಣೆ ನೀಡುವ ಆರಕ್ಷಕರು ದಿನ ನಿತ್ಯ ಅನೇಕರ ಮೇಲೆ ಕೇಸು ದಾಖಲಿಸಿ, ಮನೆಗೆ ಹೋಗಿ ಬಂದಿಸುತ್ತಿರುವುದು ಹಾಗೂ ಬೆದರಿಸುತ್ತಿರುವುದು ಇನ್ನಿಟ್ಟು ಭಯ ಹುಟ್ಟಿಸಿದೆ. ಈ ಎಲ್ಲಾ ಘಟನೆಗೆ ಸರಕಾರ, ಪೋಲಿಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಡಳಿತ ನೇರವಾದ ಹೋಣೆಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಾಗಿದೆ. ಆದ್ದರಿಂದ ಪೋಲಿಸ್ ದೌರ್ಜನ್ಯ ನಿಲ್ಲಿಸಿ ಶಾಂತಿ ಕಾಪಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ತಾಲೂಕು ಜಿಲ್ಲೆಯ ಹಿಂದೂ ಸಮಾಜ ಮತ್ತು ವಿವಿಧ ಸಂಘಟನೆಯ ಬೆಂಬಲದೊಂದಿಗೆ ನಮ್ಮ ಸಮಾಜ ರಕ್ಷಣೆ ಮಾಡಲು ಒಮ್ಮತದ ನಿರ್ಣಯಕ್ಕೆ ಬರುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

RELATED ARTICLES  ಮಗಳ ಮನೆಗೆ ತೆರಳುತ್ತಿದ್ದ ಮಹಿಳೆ ಸಾವು.

ಈ ವೇಳೆ ಬಿ,ಜೆ.ಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ,ಡಾ. ಜಿ,ಜಿ,ಹೆಗಡೆ, ಗಾಯತ್ರಿ ಗೌಡ, ಅರವಿಂದ ಪೈ, ವೆಂಕಟೇಶ ನಾಯ್ಕ, ಡಾ. ಶ್ರೀ ಸುರೇಶ್ ಹೆಗಡೆ, ವಿನೋಧ ಪ್ರಭು, ಜಿ.ಎಸ್.ಗುನಗಾ, ಸೇರಿದಂತೆ ಅನೇಕರು ಪಾಲ್ಗೊಂಡಿದ್ರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತನ್ನು ಕೂಡ ಮಾಡಲಾಗಿತ್ತು.