ಕಾರವಾರ: ಹೊನ್ನಾವರದ ಪರೇಶ್ ಮೇಸ್ತ ಸಾವು ಹಾಗೂ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಅಹಿತಕರ ಘಟನೆಗಳಿಂದಾಗಿ ಇಧು ಬಿಜೆಪಿಯ ಗೆಲುವನ್ನು ಸಂಭ್ರಮಾಚರಣೆ ಮಾಡದೇ ಕಾರವಾರದಲ್ಲಿ ಬಿಜೆಪಿ ಕಾರ್ಯಕರ್ತರು ಮೃತ ಪರೇಶನ ಹೆಸರಿನಲ್ಲಿ ಇಲ್ಲಿನ ಸುಭಾಷ್ ಸರ್ಕಲ್ ಬಳಿಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಂಬ್ರಮಾಚರಣೆ ಮಾಡಿದರು.

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಯು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಾಲ್ಲೂಕು ಘಟಕದ ಕಾರ್ಯಕರ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

RELATED ARTICLES  ಜನರ ಕಷ್ಟಕ್ಕೆ ಸ್ಪಂದಿಸುವ ಹಂಬಲದಿಂದ ಪಂಚರತ್ನ ಯೋಜನೆ ಜಾರಿಮಾಡುವೆ : ಎಚ್.ಡಿ ಕುಮಾರಸ್ವಾಮಿ

‘ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಗಲಭೆಗಳಾಗಿದ್ದು, ಇದರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹಾಗೂ ಅಮಾಯಕ ಹಿಂದೂಗಳನ್ನು ಬಂಧಿಸಲಾಗುತ್ತಿದೆ. ಈ ಕಾರಣದಿಂದ ಪಕ್ಷ ಜಯಭೇರಿ ಗಳಿಸಿದ್ದರೂ ವಿಜಯೋತ್ಸವ ಆಚರಿಸುತ್ತಿಲ್ಲ. ಬದಲಾಗಿ ಎಲ್ಲ ವಿಘ್ನಗಳು ನಿವಾರಣೆಯಾಗಲಿ. ಸಿಬಿಐ ತನಿಖೆ ಆದಷ್ಟು ಶೀಘ್ರ ಕೊನೆಗೊಂಡು, ಪರೇಶನ ಸಾವಿಗೆ ಕಾರಣರಾದವರ ತಕ್ಷಣ ಬಂಧನವಾಗಲಿ. ಬಂಧಿತ ಅಮಾಯಕರು ಶೀಘ್ರ ಬಂಧನದಿಂದ ಮುಕ್ತಿ ಹೊಂದಲಿ ಎಂದು ಬೇಡಿಕೊಂಡೆವೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಮನೋಜ್ ಭಟ್ ತಿಳಿಸಿದರು.

RELATED ARTICLES  ಶ್ರೀ ಶಾಂಭವೀ ಮಾತಾಜಿ ಗೋಕಾಕ ಇವರಿಗೆ ಗೋಕರ್ಣ ಗೌರವ

ಬಿಜೆಪಿಯ ಪ್ರಮುಖರಾದ ನಾಗರಾಜ ಜೋಶಿ, ಉದಯ ಬಶೆಟ್ಟಿ, ಕಿಶನ್ ಕಾಂಬ್ಳೆ, ಧನಲಕ್ಷ್ಮೀ ಹಳದನಕರ್ ಮತ್ತಿತರರು ಇದ್ದರು.