ಪಚ್ಚೆಕರ್ಪೂರದ ತಿಳಿವನ್ನು ತಿರುಮಲೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಗೆ, ಪ್ರತಿದಿನವೂ ಇಡುತ್ತಾರೆ..ಭಕ್ತಾದಿಗಳು ಸ್ವಾಮಿಗೆ ಕಾಣಿಕೆ ಕಳುಹಿಸಿದರೆ, ದೇವಸ್ಥಾನದವರು ಪಚ್ಚೆಕರ್ಪೂರದ ಪ್ರಸಾದ ಕಳುಹಿಸುತ್ತಾರೆ.. ಇದನ್ನು ಏನು ಮಾಡಬೇಕು ಅಂತ ಗೊತ್ತಾಗೊಲ್ಲ ..
೧. ಸ್ವಾಮಿಯ ಪಚ್ಚೆಕರ್ಪೂರವನ್ನು ಹಾಲಿಗೆ ಹಾಕಿಕೊಂಡು ಕುಡಿದರೆ, ಸ್ವಾಮಿಯ ಪ್ರಸಾದ ಸೇವಿಸಿದಂತೆ ಆಯಿತು..
೨. ಪಚ್ಚೆಕರ್ಪೂರವನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ, ತಲೆಗೆ ಹಚ್ಚಿಕೊಂಡರೆ, ಕೂದಲು ಸುಗಂಧಮಯವಾಗಿರುತ್ತದೆ.. ಮತ್ತು ಹೊಟ್ಟು ಏಳೋದಿಲ್ಲ..
೩. ಪಚ್ಚೆಕರ್ಪೂರವನ್ನು ಕುಂಕುಮದಲ್ಲಿ ಬೆರೆಸಿ ಹಣೆಗೆ ಇಟ್ಟುಕೊಂಡರೆ, ಸಾಕ್ಷಾತ್ ಲಕ್ಷ್ಮೀವೆಂಕಟೇಶ್ವರರ ಅನುಗ್ರಹ ಎಂದೆಂದೂ ಇರುತ್ತದೆ.. ಮತ್ತು ನೀವು ಎಂದೂ ಸಾಲಗಾರರಾಗುವುದಿಲ್ಲ..
೪. ಪಚ್ಚೆಕರ್ಪೂರವನ್ನು ನೀರಿನಲ್ಲಿ ಕಲೆಸಿ, ಹಣೆ ಮತ್ತು ಮೂಗಿಗೆ ಹಚ್ಚಿಕೊಂಡರೆ, ಶೀತವ್ಯಾಧಿಗಳು ಮತ್ತು ಅರ್ಧ ತಲೆನೋವು ನಿವಾರಣೆಯಾಗುತ್ತದೆ..
೫. ಪಚ್ಚೆಕರ್ಪೂರ ಮತ್ತು ಕೇಸರಿ ಮಿಶ್ರ ಮಾಡಿ, ನಗದು ಪೆಟ್ಟಿಗೆಯಲ್ಲಿ ಇಟ್ಟರೆ, ಅಧಿಕ ಧನಲಾಭ ಆಗುತ್ತದೆ..
ನಗದು ಪೆಟ್ಟಿಗೆ ಅಂದರೆ ಕ್ಯಾಶ್ ಬಾಕ್ಸ್..
೬. ವ್ಯಾಪಾರಸ್ಥರು ಪ್ರತಿದಿವಸ ಪಚ್ಚೆಕರ್ಪೂರದ ಕುಂಕುಮವನ್ನು ಹಣೆಗೆ ಇಟ್ಟುಕೊಂಡರೆ, ಅಂದು ಅಧಿಕವಾದ ವ್ಯಾಪಾರ ಆಗುತ್ತದೆ..
೭. ಪಚ್ಚೆಕರ್ಪೂರವನ್ನು ಸಿಹಿ ತಿಂಡಿಗೆ ಮಿಶ್ರ ಮಾಡಿ, ದೇವರಿಗೆ ನೈವೇದ್ಯ ಮಾಡಿ, ದಾನ ಮಾಡಿದರೆ,ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಬೇಗ ನಡೆಯುತ್ತದೆ..
೮. ಪಚ್ಚೆಕರ್ಪೂರದ ನೀರನ್ನು ಪ್ರತಿದಿನವೂ ಕುಡಿದರೆ ಗ್ಯಾಸ್ಟಿಕ್ ಕಾಯಿಲೆ ಗುಣವಾಗುತ್ತದೆ..
೯. ಪಚ್ಚೆಕರ್ಪೂರವನ್ನು ದೇವಾಲಯಕ್ಕೆ ದಾನ ಮಾಡಿದರೆ, ನಿಮಗೆ ಗೌರವ, ಸನ್ಮಾನ ಜಾಸ್ತಿಯಾಗುತ್ತದೆ..
೧೦. ಮಕ್ಕಳು ಇಲ್ಲದವರು ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ,ಪಚ್ಚೆಕರ್ಪೂರ ಹಾಕಿರುವ ಹಾಲಿನಿಂದ, ಅಭಿಷೇಕ ಮಾಡಿಸಿ, ಆ ಹಾಲನ್ನು ಕುಡಿಯುತ್ತ ಬಂದರೆ, ಸಮಸ್ತ ಗರ್ಭದೋಷಗಳು ನಿವಾರಣೆಯಾಗಿ, ಸಂತಾನವಾಗುತ್ತದೆ..
೧೧. ಪಚ್ಚೆಕರ್ಪೂರವನ್ನು ಬ್ರಾಹ್ಮಣರಿಗೆ ದಾನ ಮಾಡಿದರೆ, ಸಕಲ ಕಾರ್ಯಗಳು, ಶೀಘ್ರವಾಗಿ ನಡೆದು, ಗೌರವ ಹೆಚ್ಚುತ್ತದೆ..