ಆಲೂಗೆಡ್ಡೆ ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ , ಅದು ದೇಹದಲ್ಲಿ ಬೊಜ್ಜು ಮತ್ತು ಗ್ಯಾಸ್ ಸಮಸ್ಯೆ ಹೆಚ್ಚು ಮಾಡುತ್ತೆ. ಆದರೆ ಅದನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಲಿ.

ಆಲೂಗೆಡ್ಡೆ ಸಿಪ್ಪೆಯನ್ನು ತೆಗೆಯದಿದ್ದರೆ ಅದರಲ್ಲಿರುವ ಮಣ್ಣು ಹೊಟ್ಟೆ ಸೇರುತ್ತದೆ ಎಂದು ಭಾವಿಸುವವರು ಗಮನಿಸಬೇಕಾದ ಅಂಶವೆಂದರೆ ಇನ್ನು ಮುಂದೆ ಸಿಪ್ಪೆ ತೆಗೆದು ಆಲೂಗೆಡ್ಡೆಯನ್ನು ತಿನ್ನುವ ಬದಲು, ಚೆನ್ನಾಗಿ ತೊಳೆದು ಸಿಪ್ಪೆ ಸಹಿತ ಬೇಹಿಸಿ ತಿನ್ನಿ. ಈ ರೀತಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಯಲು ಮುಂದೆ ಓದಿ.

RELATED ARTICLES  ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಬ್ಲೂ ಫೀವರ್..!

1.ಆಲೂಗೆಡ್ಡೆಯನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನವುದರಿಂದ ಇದರಲ್ಲಿರುವ ಅಧಿಕ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಇದನ್ನು ಇತರ ತರಕಾರಿ ಜೊತೆ ತಿನ್ನವುದರಿಂದ ಬೇರೆ ತರಕಾರಿಗಳು ಕೂಡ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.

2. ಆಲೂಗೆಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟಾಷಿಯಂ, ತಾಮ್ರಾಂಶ, ಮ್ಯಾಗ್ನಿಷಿಯಂ ಮತ್ತು ನಾರಿನಂಶ ಅಧಿಕವಿರುತ್ತದೆ.

3. ಆಲೂಗೆಡ್ಡೆ ಸಿಪ್ಪೆಯಲ್ಲಿ 20% ಕಬ್ಬಿಣ ಮತ್ತು 8ಗ್ರಾಂ ಪ್ರೊಟೀನ್ ಇದ್ದು ಇತರ ತರಕಾರಿಗಳಿಗೆ ಹೋಲಿಸಿದರೆ ಆಲೂಗೆಡ್ಡೆ ಸಿಪ್ಪೆಯಲ್ಲಿ ಈ ಅಂಶಗಳು ಅಧಿಕವಿದೆ.

RELATED ARTICLES  ನಿಮ್ಮ ಮುಖಕ್ಕೆ ಚಿಕ್ಕ ವಯಸ್ಸಿನಲ್ಲೆ ನರಿಗೆಗಳು ಕಾಣುತ್ತಿವೆಯೇ ? ಇಲ್ಲಿದೆ ನಿವಾರಣೋಪಾಯ.

4. ಆಲೂಗೆಡ್ಡೆ ಸಿಪ್ಪೆ ಸೇವಿಸಿದರೆ ಹಾನಿಗೊಳಗಾದ ಜೀವ ಕಣಗಳನ್ನು ಮತ್ತೆ ಸರಿ ಪಡಿಸುವಂತೆ ಮಾಡುತ್ತದೆ.
ಆದರೆ ಆಲೂಗೆಡ್ಡೆ ಎಲ್ಲಾ ಅಹಾರಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಕರಿದ ಆಲೂಗೆಡ್ಡೆ ಕುರುಕುಲು ತಿಂಡಿ, ಇತರ ಕೊಬ್ಬಿನ ಪದಾರ್ಥಗಳ ಜೊತೆ ಸೇವಿಸುವುದು ಇವೆಲ್ಲವೂ ಹೃದಯ ಸಂಬಂಧಿ ಕಾಯಿಲೆಯನ್ನು ತರುತ್ತದೆ, ಆಲೂಗೆಡ್ಡೆಯನ್ನು ಸಿಪ್ಪೆ ಸಹಿತ ಬೇರೆ ತರೆಕಾರಿಗಳ ಜೊತೆ ಹಾಕಿ ಬೇಯಿಸಿ ತಿನ್ನವುದು ಆರೋಗ್ಯಕ್ಕೆ ಒಳ್ಳೆಯದು.