ಮೋದಿಯವರ ಜನಪ್ರಿಯ ಕಾರ್ಯಕ್ರಮಗಳಿಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನ ಬೆಂಬಲಿಸಿದ್ದಾರೆ ಎಂದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣಾ ಫಲಿತಾಂಶದ ಪರಿಣಾಮ, ಕರ್ನಾಟಕದ ಮೇಲೂ ಆಗಲಿದೆ ಎಂದರು.

RELATED ARTICLES  ಡಿಸೆಂಬರ್ 17 ರಂದು ಶಾಲಾ-ಕಾಲೇಜು ಬಂದ್..?

ರಾಜ್ಯದಲ್ಲೂ ಬಿಜೆಪಿಗೆ 150 ಸ್ಥಾನಗಳ ಗೆಲುವು ಸಾಧ್ಯವಾಗುತ್ತದೆ ಎಂದಿದ್ದಾರೆ. ಇನ್ನು ನಾಳೆಯಿಂದ ಪರಿವರ್ತನಾ ಯಾತ್ರೆ ಮತ್ತಷ್ಟು ಅದ್ದೂರಿಯಾಗುತ್ತದೆ, ಅಲ್ಲದೇ ಇನ್ನೂ ಹಲವಾರು ಜನ ನಮ್ಮ ಪಕ್ಷಕ್ಕೆ ಸೇರುತ್ತಾರೆ, ಆದರೆ ಅವರಿಗೆ ಟಿಕೆಟ್ ಕೊಡುವ ಯಾವುದೇ ಭರವಸೆ ನೀಡಲ್ಲ, ನಾವು ಎರಡು ಮೂರು ಸಮೀಕ್ಷೆಗಳನ್ನು ಮಾಡಿಸುತ್ತಿದ್ದೇವೆ, ನಂತರದಲ್ಲಿ ಟಿಕೆಟ್ ಕೊಡುವ ವಿಚಾರ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿದಂತೆ ಕರ್ನಾಟಕ ಖಂಡಿತ ಗುಜರಾತ್ ಅಲ್ಲ, ಆದರೆ ನಾವು ಕರ್ನಾಟಕವನ್ನು ಗುಜರಾತ್ ನಂತೆ ಮಾಡುತ್ತೇವೆ ಎಂದು ನುಡಿದ ಬಿಎಸ್ ವೈ, ಕುಣಿಯಲಾರದವರು ನೆಲಡೊಂಕು ಎಂದ ಹಾಗೆ ಕಾಂಗ್ರೆಸ್ ನವರು ಇವಿಎಂಗಳನ್ನು ದೂರುತ್ತಿದ್ದಾರೆ ಎಂದರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 20-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?.