ಇಂದಿನ ಮಾರುಕಟ್ಟೆಯಲ್ಲಿ ಆನ್‌ಲೈನ್ ಮಾರುಕಟ್ಟೆಗಳ ಭರಾಟೆ ಜೋರಾಗಿಯೇ ಇದೆ. ಹೆಚ್ಚೆಚ್ಚು ಆಫರ್‌ಗಳನ್ನು ನೀಡುವ ಮೂಲಕ ಜನರನ್ನು ತನ್ನತ್ತ ಸೆಳೆಯಲು ಹಲವಾರು ಆನ್‌ಲೈನ್‌ ಕಂಪನಿಗಳು ಪೈಪೋಟಿಗೆ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಆನ್‌ಲೈನ್ ದೈತ್ಯ ಕಂಪನಿ ಫ್ಲಿಪ್‌ಕಾರ್ಟ್ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೊಸ ಆಫರ್ ನೀಡಲು ಮುಂದಾಗಿದೆ.

ಹೌದು ಇದೇ ಬರುವ ಡಿಸೆಂಬರ್ 15 ರಿಂದ 17ರ ವರೆಗೆ ನ್ಯೂ ಪಿಂಚ್ ಡೇಸ್ ಅಡಿಯಲ್ಲಿ ಭಾರಿ ಸೇಲ್ ನಡೆಯಲಿದ್ದು, ಈ ಮಾರಾಟದಲ್ಲಿ ಮನೆಬಳಿಕೆ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣಗಳಿಗೆ 40 ರಿಂದ 80% ರಿಯಾಯಿತಿ ಇದ್ದು, ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ಮೇಲೆ ಹೆಚ್ಚು ರಿಯಾಯಿತಿಗಳನ್ನು ಪಡೆಯಬಹುದಾಗಿದೆ ಹಾಗೂ ಸೌಂದರ್ಯ ವರ್ಧಕಗಳು, ಪುಸ್ತಕಗಳು, ಟಾಯ್‌ಗಳ ಮೇಲೆ 80% ರಿಯಾಯಿತಿಯನ್ನು ನೀಡುವುದಾಗಿ ಘೋಷಿಸಿದೆ.

RELATED ARTICLES  ಉತ್ತರ ಕನ್ನಡದಲ್ಲಿ ಇಂದು ಒಟ್ಟು 21 ಕೊರೋನಾ ಪ್ರಕರಣ

ಈ ಆಫರ್ ಸೇಲ್‌ನಲ್ಲಿ IPhone 7 (128GB) ರೂ. 49999, OPPOF3 PLUS (6GB) ರೂ. 17000, MOTO Z2 PLAY (4 GB)(64GB) ರೂ. 24000 ರೂಪಾಯಿಗಳ ಹೆಚ್ಚು ರಿಯಾಯಿತಿಯನ್ನು ಹೊಂದಿದೆ. ಇದು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿದ್ದು ಅವಧಿ ಮುಗಿದ ನಂತರ ತನ್ನ ಮೂಲ ಬೆಲೆಗೆ ಮರಳುತ್ತವೆ ಎನ್ನಲಾಗಿದೆ.

RELATED ARTICLES  ರಾಮಾಯಣ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಲ್ಯಾಪ್‌ಟಾಪ್ ಖರೀದಿಗೆ ಮತ್ತು ಗೃಹ ಉಪಯೋಗಿ ವಸ್ತುಗಳ ಖರೀದಿಗೆ ಇದು ಒಳ್ಳೆಯ ಸಮಯವಾಗಿದೆ. ಮೂರು ದಿನಗಳ ಕಾಲ ನೆಡೆಯುವ ಮಾರಾಟ ಇದಾಗಿದ್ದು, ಕೈಗೆಟಕುವ ಬೆಲೆಗೆ ನಿಮಗೆ ಬೇಕಾದ ವಸ್ತುಗಳನ್ನು ನೀವು ಸುಲಭವಾಗಿ ಖರೀದಿಸಬಹುದಾಗಿದೆ.