ದಾಂಡೇಲಿ: ದಾಂಡೇಲಿಯಲ್ಲಿ ಎರಡು ದಿನಗಳ ಕಾಲ ನಡೆದ ಉತ್ತರ ಕನ್ನಡ ಜಿಲ್ಲಾ ಸಿ.ಪಿ.ಐ.ಎಂ ನ ಹತ್ತನೇ ಜಿಲ್ಲಾ ಸಮ್ಮೇಳನ ಸೋಮವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.
ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಸಮ್ಮೇಳನದಲ್ಲಿ ಕೈಗೊಂಡ ಹಲವು ನಿರ್ಣಯಗಳನ್ನು ಪಕ್ಷದ ನೂತನ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ ವಿವರಿಸಿದರು. ಜಿಲ್ಲೆಯಲ್ಲಿ ಸದ್ಯ ಉದ್ಭವಿಸಿರುವ ಮತೀಯ ಗೊಂದಲವನ್ನು ತಡೆಗಟ್ಟುವ ಜೊತೆಗೆ, ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು. ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸರಕಾರ ಕ್ರಮ ಕೈಗೊಳ್ಳಬೇಕು. ಮಹಿಳೆಯರು ದುಡಿಯುವ ಪ್ರದೇಶಗಳಿಗೆ ಭದ್ರತೆ ನೀಡಬೇಕು. ಬಡಕಟ್ಟುಗಳಾದ ಕುಣಬಿ, ಕುಂಬ್ರಿ ಮರಾಠಿ, ಗೌಳಿ ಸಮುದಾಯಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕು. 18 ಸಾವಿರ ರೂ. ಕನಿಷ್ಠ ಕೂಲಿ ಜಾರಿಗೊಳಿಸಬೆಕು. ಅರಣ್ಯ ಸಾಗುವಳಿ ಭೂಮಿ ಸಕ್ರಮಗೊಳೀಸಬೇಕು. ಅಶ್ರಯ ಪಟ್ಟಾಗಳನ್ನು ನೀಡಬೇಕು ಎಂಬನೇಕ ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ ಎಂದು ಶಂತಾರಾಮ ನಾಯಕ ತಿಳೀಸಿದರು.
ಸಿ.ಪಿ.ಐ.ಎಂ. ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ಮಾತನಡಿ ಇಂದು ದೇಶದಲ್ಲಿ ಕಾರ್ಮಿಕರು ಆಭದ್ರತೆಯಲ್ಲಿದ್ದಾರೆ. ಕನಿಷ್ಠ ಕೂಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. 18 ಸಾವಿರ ರೂ.ಳ ಕನಿಷ್ಠ ಕೂಲಿಯನ್ನು ಕಡ್ಡಾಯವಾಗಿ ಸರಕಾರ ಜಾರಿಗೊಳಿಸಬೇಕು. ಸರಕಾರಿ ಖಾಸಗಿ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ನಿಶೇಧಗೊಳಿಸಬೇಕು. ಕಾರ್ಮಿಕರಿಗೆ ಕೆಲಸದ ಭದ್ರತೆ ನೀಡಬೇಕು. ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯವಾಗಿ ಮಾನ್ಯತೆ ನೀಡಬೇಕು ಎಂದರು.
ಸಿ.ಪಿ.ಐ ಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಮಧಸ್ವಾಮಿ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವರ ಪ್ರಚೋದನೆಯಿಂದ ಕೋಮು ಸಂಘರ್ಷವುಂಟಾಗುತ್ತಿದೆ. ಇದು ಆತಂಕದ ಬೆಳವಣಿಗೆ, ಕೋಮು ಸೌಹಾರ್ದತೆಗಾಗಿ ರಾಜ್ಯದ ಪ್ರಗತಿಪರ ಮಠಾದೀಶರು, ಬರಹಗಾರರು, ಚಿಂತಕರು ಸೇರಿ ಜ£ವÀರಿ 30 ರಂದು ರಾಜ್ಯಾದಾದ್ಯಂತ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದಕ್ಕೆ ಸಿ.ಪಿ.ಐಎಮ್ ಸಂಪೂರ್ಣ ಬೆಂಬಲಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಸಹೌರ್ದ ಮನಸ್ಸುಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಿ.ಪಿ.ಐ.ಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಶಂಕರ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಮುನಾ ಗಾಂವಕರ, ಹರೀಶ ನಾಯ್ಕ ಮುಂತಾದವರಿದ್ದರು.