ಕಾರವಾರ: ಭಾರತೀಯ ವಾಯು ಸೇನೆಯಲ್ಲಿ ಭರ್ತಿಗಾಗಿ ರಾಜ್ಯದ ಅವಿವಾಹಿತ ಪುರುಷ ಅಭ್ಯರ್ಥಿಗಳಿಗಾಗಿ ಆನ್ ಲೈನ್ ರೀಜಿಸ್ಟ್ರೇಶನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್‍ಲೈನ್ ರೀಜಿಸ್ಟ್ರೇಶನ್‍ಗೆ ಜನೇವರಿ 12ರವರೆಗೆ ಮಾತ್ರ ಕಾಲಾವಕಾಶವಿದೆ. ಆನ್‍ಲೈನ್ ನೋಂದಣಿಗಾಗಿ ಜಾಲತಾಣ www.airmeneselection.gov.in ಸಂಪರ್ಕಿಸಬಹುದು. ಭರ್ತಿ ಪರೀಕ್ಷೆಯನ್ನು ಮಾರ್ಚ ತಿಂಗಳು 10 ಮತ್ತು 11 ರಂದು ನಡೆಸಲಾಗುವದು.

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 1998 ಜನೇವರಿ 13 ರಿಂದ 2002 ಜನೇವರಿ 2 ರ ನಡುವೆ ಜನಿಸಿದವರಾಗಿರಬೇಕು. ವಿದ್ಯಾರ್ಹತೆ ಗ್ರೂಪ್ ಎಕ್ಷ್ (ಟೆಕ್ನಿಕಲ್) ಗಾಗಿ 12ನೇ ತರಗತಿಯಲ್ಲಿ (ಮ್ಯಾಥ್ಸ್, ಪಿಜಿಕ್ಸ್ & ಇಂಗ್ಲೀಷ) 50% ಅಂಕಗಳು ಪಡೆದಿರಬೇಕು., ಅಥವಾ ಮೂರು ವರ್ಷಗಳ ಡಿಪ್ಲೋಮಾ ಇಂಜಿನಿಯರಿಂಗ್( ಮೆಕೆನಿಕಲ್/ ಎಲೆಟ್ರಿಕಲ್/ ಎಲೆಕ್ಟ್ರೋನಿಕ್ಸ್/ಐಟಿ) 50% ಅಂಕ ಪಡೆದಿರಬೇಕು,. ಗ್ರೂಪ್ ವಾಯ್ (ನಾನ್ ಟೆಕ್ನಿಕಲ್) ಗಾಗಿ 12ನೇ ತರಗತಿಯಲ್ಲಿ 50% ಅಂಕಗಳನ್ನು ಪಡೆದಿರಬೇಕು. ಗ್ರೂಪ್ ವಾಯ್ (ನಾನ್ ಟೆಕ್ನಿಕಲ್/ಮಟಡಿಕಲ್ ಅಸಿಸ್ಟಂಟ್ ಟ್ರೆಡ್ ) ಗಾಗಿ 10+2 ತರಗತಿಯಲ್ಲಿ ( ಕೆಮಿಸ್ಟ್ರಿ, ಪಿಸಿಕ್ಸ್, ಬಯಾಲೋಜಿ ಮತ್ತು ಇಂಗ್ಲೀಷ ) ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.

RELATED ARTICLES  ವಾಟ್ಸಾಪ್ ಮಾಡಿ.. ಜೀವನಾವಶ್ಯಕ ವಸ್ತುಗಳನ್ನು ಪಡೆದುಕೊಳ್ಳಿ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080 25592199 ನ್ನು ಸಂಪರ್ಕಿಸಬೇಕೆಂದು ಕಾರವಾರ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಧಾರವಾಡದ ಸಂಸ್ಥೆಯಲ್ಲಿ ಉದ್ಯೋಗಾವಕಾಶ