ಕುಮಟಾ; ಗುಜರಾತ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆದ್ದಿದ್ದನ್ನು ಮಹಾಸತಿ ದೇವಿಗೆ ಪೂಜೆ ಸಲ್ಲಿಸಿ ಕರ್ನಾಟಕದಲ್ಲೂ ಕಮಲ ಅರಳಲಿ ಎಂದು ಪ್ರಾರ್ಥಿಸಿದರು.
ದೇಶಾದ್ಯಂತ ಬಹಳ ಕುತೂಹಲ ಕೆರಳಿಸಿದ್ದ ಗುಜರಾತ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶ ಹೊರಬಿದ್ದಿದ್ದು ಎರಡು ರಾಜ್ಯಗಳ ಜನರು ಮೋದೀಜೀ ಗೆ ಜೈ ಅಂದಿದ್ದಾರೆ. ನೋಟು ರದ್ದತಿ ಹಾಗೂ ಜಿ ಎಸ್ ಟಿ ತೆರಿಗೆಯಿಂದ ಜನ ಬೇಸತ್ತಿದ್ದು ಈ ಬಾರಿ ಜನರು ಮೋದಿ ಯವರನ್ನು ತಿರಸ್ಕರಿಸುತ್ತಾರೆ ಎಂದು ಬಹುತೇಕ ಎಲ್ಲಾ ಪಕ್ಷಗಳು ಕಿರುಚಾಡುತ್ತಿರುವಾಗಲೇ ಫಲಿತಾಂಶ ಬಿಜೆಪಿಗರ ನಿರಿಕ್ಷೆಯಂತೆ ನಡೆದಿದೆ.
ಉತ್ತರ ಕನ್ನಡವು ಪರೇಶ್ ಮೆಸ್ತಾ ಸಾವಿನ ಶೋಕದಲ್ಲಿರುವುದರಿಂದ ಕುಮಟಾ ಕಾರ್ಯಕರ್ತರು ಗೆಲುವಿನ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸದೇ ನಗರದ ಶ್ರೀ ಮಹಾಸತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇಶದ ಹಾಗೂ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದರು. ಪೂಜೆ ಸಲ್ಲಿಸಿ ಮಾತನಾಡಿದ ಕುಮಟಾ ತಾಲೂಕಿನ ಹಿಂದುಳಿದ ಮೋರ್ಚಾ ಅಧ್ಯಕ್ಷ ಹಾಗೂ ದೇವಗಿರಿ ಪಂಚಾಯತ ಅಧ್ಯಕ್ಷ ಎಸ್ ಟಿ ನಾಯ್ಕ ದೇಶದ ಎರಡು ರಾಜ್ಯಗಳಲ್ಲಿ ಜನರು ಅಭೂತಪೂರ್ವ ಗೆಲುವನ್ನು ತಂದು ಕೊಟ್ಟಿದ್ದಾರೆ. ಇದು ನಮಗೆ ನಿರಿಕ್ಷಿತವೇ ಆದರೂ ಸಹ ಗೆಲುವಿನ ಸಂಖ್ಯೆಯನ್ನು ತಿಳಿದುಕೊಳ್ಳಬೇಕಿತ್ತಷ್ಟೆ ಏನೇ ಆಗಲಿ ನಮ್ಮ ಪ್ರಧಾನಿ ನರೇಂದ್ದರ ಮೋದಿ ಯವರಿಗೆ ಪಕ್ಷದ ಅಧ್ಯಕ್ಷ ಅಮಿತ್ ಷಾ ಹಾಗೂ ಶ್ರಮಿಸಿದ ಎಲ್ಲರಿಗೂ ಕುಮಟಾ ಮಂಡಳ ಪರವಾಗಿ ಶುಭ ಕೋರುತ್ತೇನೆ ಮತ್ತು ಈ ಗೆಲುವು ನಮ್ಮ ಕರ್ನಾಟಕದಲ್ಲಿಯೂ ಸಹ ಬಿಜೆಪಿ ಅಧಿಕಾರಕ್ಕೆ ಬರಲು ನಾಂದಿಯಾಗಲಿದೆ. ಹೊನ್ನಾವರದ ಪರೇಶ ಮೆಸ್ತಾ ಸಾವಿನಿಂದಾಗಿ ಜನರು ತುಂಬಾ ಶೋಕದಲ್ಲಿರುವುದರಿಂದ ವಿಜಯೋತ್ಸವ ಆಚರಿಸದೇ ತಾಯಿಗೆ ಪೂಜೆ ಸಲ್ಲಿಸುವುದರೊಂದಿಗೆ ನಾಡಿನೆಲ್ಲೆಡೆ ಶಾಂತಿ ನೆಲೆಸಲಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಈ ಸಮಯದಲ್ಲಿ ಜಿ ಐ ಹೆಗಡೆ, ಶ್ರೀ ನಾಗ ಪ್ರಭು, ದುರ್ಗಾನಂದ ನಾಯ್ಕ, ಜಗದೀಶ ನಾಯಕ, ರಾಜಾರಾಮ್ ಭಟ್ಟ ಇತರರು ಉಪಸ್ಥಿತರಿದ್ದರು