ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಾದ ಗಲಭೆಗೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ 180 ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಸಿಸಿಟಿವಿ ಪುಟೇಜ್, ವಿಡಿಯೋ ಸಾಕ್ಷ್ಯ ಆಧರಿಸಿ ಪ್ರಕರಣದ ಯಾವೊಬ್ಬ ತಪ್ಪಿತಸ್ಥನೂ ತಪ್ಪಿಸಿಕೊಳ್ಳದಂತೆ ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಾದ ಗಲಭೆ ಸಂಬಂಧ ಈವರೆಗೆ 180 ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಸಿಸಿಟಿವಿ ಪುಟೇಜ್, ವಿಡಿಯೋ ಸಾಕ್ಷ್ಯ ಆಧರಿಸಿ ಪ್ರಕರಣದ ಯಾವೊಬ್ಬ ತಪ್ಪಿತಸ್ಥನೂ ತಪ್ಪಿಸಿಕೊಳ್ಳದಂತೆ ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಹೇಳಿದರು. ಶಿರಸಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ವಿಡಿಯೋ ತುಣುಗೆ ಆಧರಿಸಿ ತಪ್ಪಿತಸ್ಥರಿಗಾಗಿ ಬಲೆ ಬೀಸಲಾಗಿದೆ. ಈ ಕುರಿತಾಗಿ ವಿಶೇಷ ತಂಡ ಕೂಡ ರಚಿಸಲಾಗಿದೆ. ಆದಷ್ಟು ಶೀಘ್ರ ತಪ್ಪಿತಸ್ಥರನ್ನೆಲ್ಲ ಬಂಧಿಸುವ ಕಾರ್ಯವಾಗಲಿದೆ ಎಂದರು.

RELATED ARTICLES  ಮರಳು ದಿಬ್ಬಗಳಲ್ಲಿ ಮೇ.4 ರಿಂದ ಮರಳು ತೆಗೆಯಲು ತಾತ್ಕಾಲಿಕ ಅನುಮತಿ

ಯಾವ ಅಮಾಯಕ ವ್ಯಕ್ತಿಯನ್ನೂ ಬಂಧಿಸುವ ಕೆಲಸವಾಗಿಲ್ಲ. ದಾಖಲೆ ಪರಿಶೀಲಿಸಿಯೇ ಬಂಧಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಧ್ಯಕ್ಕೆ ಹೊನ್ನಾವರ, ಕುಮಟಾ ಹಾಗೂ ಶಿರಸಿ ಸಹಜ ಸ್ಥಿತಿಯಲ್ಲಿದೆ. ಬಿಗಿಯಾದ ಪೊಲೀಸ್ ಬಂದೋಬಸ್ತ್ ಮುಂದುವರಿಸಬೇಕೇ, ಬೇಡವೇ ಎಂಬುದನ್ನು ಶೀಘ್ರದಲ್ಲಿ ನಿರ್ಣಯಿಸಲಾಗುವುದು ಎಂದು ತಿಳಿಸಿದರು.

RELATED ARTICLES  ಬಸ್ ಹತ್ತುವಾಗ ಇಳಿವಾಗ ಪಿಕ್ ಪಾಕೆಟ್ ಮಾಡುತ್ತಿದ್ದ ಆರೋಪಿ ಅರೆಸ್ಟ್…!

ಶಿರಸಿಯಲ್ಲಿ ಖಾಲಿಯಿರುವ ಹುದ್ದೆ ತುಂಬಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ 230 ಜನ ತರಬೇತಿಯಲ್ಲಿದ್ದಾರೆ. ಇವರಿಗೆ 5 ತಿಂಗಳ ತರಬೇತಿ ಪೂರ್ಣಗೊಂಡಿದ್ದು, ಇನ್ನೂ ಮೂರು ತಿಂಗಳ ತರಬೇತಿ ಬಾಕಿಯಿದೆ. ಅದು ಮುಗಿದ ತಕ್ಷಣ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದರು.